ಕವಿ, ಸಾಹಿತಿ ಕೆ.ಬಿ.ಸಿದ್ದಯ್ಯ (70)ನಿಧನ

ತುಮಕೂರು :  ಕವಿ, ಸಾಹಿತಿ ಕೆ.ಬಿ.ಸಿದ್ದಯ್ಯ (70)ನಿಧನ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಉಸಿರು.ಕೆಲ ದಿನಗಳ ಹಿಂದೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಸಿದ್ದಯ್ಯ ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.. 

ಮೂಲತಃ ಮಾಗಡಿ ತಾಲೂಕಿನವರಾದ ಕೆ.ಬಿ.ಸಿದ್ದಯ್ಯ ತುಮಕೂರಿನ ಸಿದ್ದಾರ್ಥ ಪದವಿ ಪೂರ್ವ ಕಾಲೇಜಿನಲ್ಲಿ ಇಂಗ್ಲಿಷ್ ಭಾಷೆಯ ಶಿಕ್ಷಕರಾಗಿ ಕಾರ್ಯ ನಿರ್ವಹಿಸಿದ್ದರು. 1970-80ರ ದಶಕದಲ್ಲಿ ದಲಿತ ಚಳವಳಿಗೆ ಪಾದಾಪ೯ಣೆ. ದಕ್ಕಲ ಕಥಾದೇವಿ, ಬಕಾಲ,ಗಲ್ಲೆಭಾನಿ ಸೇರಿದಂತೆ ಹಲವು ಖಂಡಕಾವ್ಯ ರಚನೆ ಮಾಡಿದ್ದಾರೆ ಪತ್ನಿ. ಪುತ್ರ.ಪುತ್ರಿ ಹಾಗೂ ಅಪಾರ ಶಿಷ್ಯ ಬಳಗವನ್ನು ಅಗಲಿದ್ದಾರೆ..

Please follow and like us:
error