ಕಳ್ಳರ ಹಾವಳಿ ತಡೆಗೆ ಆಗ್ರಹಿಸಿ ಪಿಎಸ್ಐಗೆ ರೈತ ಸಂಘದಿಂದ ಮನವಿ

Kannadanet NEWS, ಕನಕಗಿರಿ
ತಾಲೂಕಿನ ಹುಲಿಹೈದರ ಗ್ರಾಮದಲ್ಲಿ ಹೆಚ್ಚಿರುವ ಕಳ್ಳರ ಹಾವಳಿ ತಡೆಗೆ ಆಗ್ರಹಿಸಿ ರೈತ ಸಂಘಟನೆಗಳ ಮುಖಂಡರು ಸೋಮವಾರ ಕನಕಗಿರಿ ಪಿಎಸ್ಐಗೆ ಮನವಿ ಸಲ್ಲಿಸಿದರು.
ಕೆಲ ದಿನಗಳ ಹಿಂದೆ ಹುಲಿಹೈದರ ಗ್ರಾಮದ ಗ್ರಾಮ ದೇವತೆ ದುರ್ಗಾದೇವಿ ಮೂರ್ತಿಯ ಮೇಲಿದ್ದ ಚಿನ್ನ ಮತ್ತು ಬೆಳ್ಳಿ ಆಭರಣ ಕಳ್ಳತನ ಮಾಡಲಾಗಿತ್ತು. ನಂತರ‌ ರತ್ನಮ್ಮ ಶೆಟ್ಟಿ ಎಂಬುವರ ಮನೆಯಲ್ಲಿ ಸುಮಾರು 18 ತೊಲಿ ಚಿನ್ನ ಮತ್ತು 80 ಸಾವಿರ ನಗದು ಕಳ್ಳತನವಾಗಿದೆ. ಈ ಮೊದಲು ರಾಜಾಸಾಬ್ ದರೋಸಿ ಅವರ ಮನೆಯಲ್ಲಿ 1 ಲಕ್ಷ ರೂಪಾಯಿ ಕಳ್ಳತನ ನಡೆದಿದೆ. ಈ ಬಗ್ಗೆ ಈಗಾಗಲೇ ಕನಕಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗ್ರಾಮದಲ್ಲಿ ಪದೇ ಒದೇ ಕಳ್ಳತನ ಪ್ರಕರಣ ನಡೆಯುತ್ತಿದ್ದರಿಂದ ಸಾರ್ವಜನಿಕರು ಭಯ ಭೀತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ತನಿಖೆ ಚುರುಕುಗೊಳಿಸಿ ತಪ್ಪಿತಸ್ಥರನ್ನು ಪತ್ತೆ ಮಾಡಬೇಕು. ತಮ್ಮ ಚಿನ್ನ ನಗದು ಕಳೆದುಕೊಂಡವರಿಗೆ ನ್ಯಾಯ ಒದಗಿಸಬೇಕು ಎಂದು ಮನವಿ ಪತ್ರದಲ್ಲಿ ಕೋಡಿದ್ದಾರೆ.
ಕರ್ನಾಟಕ ರೈತರ ಹಿತರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಕೇಸರಟ್ಟಿ ಶರಣಗೌಡ ಪಾಟೀಲ್, ತಾಲೂಕಾಧ್ಯಕ್ಷ ಸಂಗಮೇಶ ಹುಲಿಹೈದರ, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಹುಲಿಹೈದರ ಹೋಬಳಿ ಅಧ್ಯಕ್ಷ ಯಂಕಣ್ಣ ಕುಲಕರ್ಣಿ, ಕಾರ್ಯದರ್ಶಿ ಗೋಸಲಪ್ಪ ಗದ್ದಿ, ಶರಣಪ್ಪ‌ ಗದ್ದಿ, ರೈತ ಮುಖಂಡರಾದ ಜಗದ್ದಿಶಪ್ಪ ಗದ್ದಿ, ಸೇರಿ ಇತರರು ಇದ್ದರು.

Please follow and like us:
error