ಕಳ್ಳರ ಬಂಧನ : ೧ ಲಕ್ಷ ಬೆಲೆಯ ಮೊಬೈಲ್ ಗಳು ವಶಕ್ಕೆ

ಕೊಪ್ಪಳ : ಅಳವಂಡಿ ಪೋಲಿಸರು ಇಬ್ಬರು ಮೊಬೈಲ್ ಕಳ್ಳರನ್ನು ಬಂಧಿಸುವ ಮೂಲಕ ೧ ಲಕ್ಷ ಮೌಲ್ಯದ ಮೊಬೈಲ್ ಗಳನ್ನು ವಶಪಡಿಸಿಕೊಂಡಿದ್ದಾರೆ.

ಪ್ರಕರಣದ ವಿವರ ಹೀಗಿದೆ ಜಿಲ್ಲೆಯ ಅಳವಂಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಹಿರೇಸಿಂಧೋಗಿ ಗ್ರಾಮದ ಹಲಗೇರಿ ಕಡೆಗೆ ಹೋಗುವ ಹಿರೇಸಿಂದೋಗಿ ಕ್ರಾಸನಲ್ಲಿ ದಿ : 06-12-2020 ರಂದು ಮುಂಜಾನೆ 5:30 ಗಂಟೆಯ ಸುಮಾರಿಗೆ   ಮೋಟಾರ ಸೈಕಲ್ ಮೇಲೆ ಇಬ್ಬರು ವ್ಯಕ್ತಿಗಳು ನಿಂತಿದ್ದು  ಅಳವಂಡಿ ಪಿ.ಎಸ್.ಐ ರವರ ಜೀಪ್  ನೋಡಿದ ತಕ್ಷಣ ಅವರು ತಮ್ಮ ಮೋಟಾರ ಸೈಕಲ ಸಮೇತ ವೇಗವಾಗಿ ಹೋಗಿದ್ದು ಕೂಡಲೇ ಪಿ.ಎಸ್.ಐ ರವರು ಜೀಪನ್ನು ತಗೆದುಕೊಂಡು ಸ್ವಲ್ಪ ದೂರದಲ್ಲಿ ಅವರನ್ನು ಮೋಟಾರ ಸೈಕಲ್  ಸಮೇತ ಹಿಡಿದುಕೊಂಡಿದ್ದು ಅವರನ್ನು ವಿಚಾರಿಸಲು ತಮ್ಮ ಹೆಸರನ್ನು ತಪ್ಪು ತಪ್ಪಾಗಿ ನುಡಿದಿದ್ದು ಸರಿಯಾಗಿ ನುಡಿಯದೇ ಇದ್ದುದರಿಂದ ಅನುಮಾನ ಬಂದು ಅವರನ್ನು ಕೂಲಂಕುಷವಾಗಿ ವಿಚಾರಣೆ ಮಾಡಿ ಆರೋಪಿತರನ್ನು ವಶಕ್ಕೆ ಪಡೆದುಕೊಂಡಿದ್ದು ಇರುತ್ತದೆ . ನಂತರ ಆರೋಪಿತರ ಹತ್ತಿರ ಇದ್ದ 91 ಮೋಟಾರ ಸೈಕಲ ನೋಡಲಾಗಿ ನಂಬರ್ ಕೆ.ಎ -37 / -6130 ಬಜಾ ಪ್ಲಾಟಿನಂ ಅಂತಾ ಇದ್ದು ಮೊಟಾರ ಸೈಕಲ ಮತ್ತು ಮೊಬೈಲ್ ಬಗ್ಗೆ ವಿಚಾರಿಸಲು ಯಾವುದೇ ರೀತಿಯ ಸಮರ್ಪಕವಾದ ಉತ್ತರವನ್ನು ನೀಡಲಿಲ್ಲ . ನಂತರ ಮೋಟಾರ ಸೈಕಲ್ ಪರಿಶೀಲಿಸಲು ಸಡ ಬ್ಯಾಗನಲ್ಲಿ ಒಂದು ಚೀಲದಲ್ಲಿ ಒಟ್ಟು 36 ಮೊಬೈಲ್ ಪೂನ್ ಗಳಿದ್ದು , ಅವರಿಗೆ ತಮ್ಮ ಹತ್ತಿರ ಇದ್ದ 36 ಮೊಬೈಲ್ ಫೋನ್ ಇಟ್ಟುಕೊಂಡಿರುವ ಬಗ್ಗೆ ಮತ್ತು ದಾಖಲಾತಿ ವಿಚಾರಿಸಲು ಅವುಗಳ ಬಗ್ಗೆ ಯಾವುದೇ ಸ್ಪಷ್ಟವಾದ ಉತ್ತರವನ್ನು ನೀಡದೇ ಇದ್ದುದರಿಂದ ಅವರಿಗೆ ಪದೇ ಪದೇ ವಿಚಾರ ಮಾಡಲಾಗಿ ತಾವು ಇಬ್ಬರೂ ಕೂಡಿ ಸುಮಾರು ದಿವಸಗಳಿಂದ ಮುನಿಲಬಾದೆ , ಹುಲಗಿ , ಅಳವಂಡಿ ಮುಂತಾದ ಕಡೆಗಳಲ್ಲಿ ಯಾವುದೋ ಸ್ಥಳಗಳಲ್ಲಿ ಕಳ್ಳತನ ಮಾಡಿಕೊಂಡು ಬಂದಿರುವದಾಗಿ ಮತ್ತು ಅವುಗಳನ್ನು ಎಲ್ಲಿಯಾದರೂ ಮಾರಾಟ ಮಾಡಲು ಹೊರಟಿರುವದಾಗಿ ತಮ್ಮ ತಟ್ಟನ್ನು ಒಪ್ಪಿಕೊಂಡಿದ್ದರಿಂದ ಸದರಿಯವರಿಂದ ಸುಮಾರು ಅಂ.ಕಿ 1 ಲಕ್ಷ ರೂ ಬೆಲೆಬಾಳುವ 36 ಮೊಬೈಲ್ ಮತ್ತು ಒಂದು ಮೊ ಸೈಕಲನ್ನು ಪಂಚರ ಸಮಕ್ಷಮ ಜಪ್ತ ಮಾಡಿಕೊಂಡು ಬಂದು ಅಳವಂಡಿ ಠಾಣೆಯಲ್ಲಿ ಠಾಣಾ ಗುನ್ನೆ ನಂಬರ್ 78/2020 ಶರಧಿ 41 ) , 102 ಸಿ.ಆರ್.ಪಿ.ಸಿ ಮತ್ತು 379 ಐ.ಪಿ.ಸಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲುಮಾಡಿಕೊಂಡು ತನಿಖೆಯನ್ನು ಮುಂದುವರೆಸಿದ್ದು ಇರುತ್ತದೆ , ಸರಿದರಿ ಪ್ರಕರಣವನ್ನು ಪತ್ತೆ ಮಾಡಿದ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಜಿಲ್ಲಾ ಪೊಲೀಸ್ ಅಧೀಕ್ಷಕರು ಬಹುಮಾನ ಘೋಷಿಸಿದ್ದಾರೆ.

Please follow and like us:
error