“ಕಲ್ಲು ನಾ ಕಲ್ಲು” ಕವನದ ಸಾಲುಗಳು.

stone-newಕಲ್ಲು ಕಲ್ಲೆಂದೆನ್ನ ಕಾಲಲ್ಲಿ ತುಳಿಯುವರು,
ಎನಗಾವ ನಿರ್ದಿಷ್ಟ ಗಾತ್ರವಿಲ್ಲ,
ಆಕಾರವಿಲ್ಲ..
ನಿರ್ದೋಷಿತ ಪವಿತ್ರವಾದ ಕಪ್ಪು ಕಲ್ಲ,
ಕೈ ಮುಗಿವರು,
ಎನ್ನನ್ನು ಒಡೆದು,
ನುಚ್ಚು ನೂರು ಮಾಡುವರು,
ಎನಗಾವ ನೋವಿಲ್ಲ,
ಎಳ್ಳಷ್ಟೂ ಗಾಯವಿಲ್ಲ..
ನೂರೆಂಟು ಸುಖವಿಲ್ಲ.
ಎನ್ನ ಬಣ್ಣಿಪರು,
ಆಕಾರದಿಂ ಆಕಾರಕ್ಕೆ ಬದಲಿಪರು,
ರಾಜ್ಯದಿಂ ರಾಜ್ಯಕ್ಕೆ,
ಪ್ರದೇಶದಿಂ ಪ್ರದೇಶಕ್ಕೆ ಸಾಗಿಪರು,
ಎನ್ನ “ತಾಯ್ನಾಡಾ”ವುದು.?
ಎನ್ನ “ನೆಲೆ”ಯಾವುದು..?
ಎನ್ನ “ಭಾಷೆ” ಅದಾವುದು..?
ನಾನು ಎಲ್ಲಿರುವೆ..? ಎಂಬುದನು
ನಾ ಬಲ್ಲೆನು,ಹೇಳೆನು.

ನೀ ಬಲ್ಲೆಯಾ????.
ನೀ ಬಲ್ಲೆಯಾ…..ಮಾತಿನ ಜಾಣ,
ನಾನೆ ಮಣ್ಣಿನ ಸಂಗಾತಿ..
“ಮಣ್ಣಿನ ಸಂಗಾತಿ”..

(ಕಲ್ಲು) ಸೌಮ್ಯ.ಎಸ್.

Please follow and like us:
error