ಕಲ್ಯಾಣ ಕರ್ನಾಟಕ ವ್ಯಾಪ್ತಿಗೆ ಮೊಳಕಾಲ್ಮೂರು : ಸಿಎಂಗೆ ಪತ್ರ , ವಿರೋಧ ವ್ಯಕ್ತಪಡಿಸಿದ ಬಯ್ಯಾಪೂರ

ಕೊಪ್ಪಳ : ಕಲ್ಯಾಣ ಕರ್ನಾಟಕ ವ್ಯಾಪ್ತಿಗೆ ಮೊಳಕಾಲ್ಮರು ಸೇರಿದಂತೆ ಇತರೆ ಹೋಬಳಿ,ಹಳ್ಳಿ ಜಿಲ್ಲೆಗಳ ಸೇರ್ಪಡೆಗೆ ಕುಷ್ಟಗಿ ಶಾಸಕ ಅಮರೆಗೌಡ ಪಾಟೀಲ್ ಬಯ್ಯಾಪೂರ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಕುರಿತು ಮುಖ್ಯಮಂತ್ರಿ ಗಳಿಗೆ ಪತ್ರ ಬರೆದಿರುವ ಅವರು

ಕರ್ನಾಟಕ ರಾಜ್ಯದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶದ ಬೀದರ , ಕಲಬುರಗಿ , ಯಾದಗೀಲ , ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳು ಇತಿಹಾಸಿಕವಾಗಿ ಭಾಷಾವಾರು ಪ್ರಾಂತಗಳು ರಚನೆಯಾಗುವದಕ್ಕಿಂತ ಮೊದಲು ಹೈದ್ರಾಬಾದ ರಾಜ್ಯದ ಭಾಗವಾಗಿದ್ದವು ಹಾಗೂ ಸ್ವಾತಂತ್ರ್ಯ ಪೂರ್ವದಲ್ಲಿ ಹೈದ್ರಾಬಾದ ನಿಜಾಮ ಈ ಪ್ರದೇಶವನ್ನು ಆಳುತ್ತಿದ್ದರು ಎನ್ನುವದು ಈಗ ಇತಿಹಾಸ .. ಭಾಷಾವಾರು ಪ್ರಾಂತಗಳ ರಚನೆಯ ನಂತರ ಹೈದ್ರಾಬಾದ ರಾಜ್ಯದ ತೆಲಂಗಾಣದ ಪ್ರದೇಶವನ್ನು ಅಂದಿನ ಆಂಧ್ರಪ್ರದೇಶಕ್ಕೆ ಸೇರಿಸಿ ಸಂವಿಧಾನದ 371 ರ ತಿದ್ದುಪಡಿ ಮಾಡಿ ವಿಶೇಷ ಸ್ಥಾನಮಾನ ನೀಡಲಾಯಿತು , ಅದೇ ರೀತಿ ಅಂದಿನ ಹೈದ್ರಾಬಾದ ರಾಜ್ಯದ ಮದಾರಿ ಮಾತನಾಡುವ ಮರಾಠಾವಾಡ ಪ್ರದೇಶದ 5 ಜಿಲ್ಲೆಗಳೂ ಸಹ ಭಾಷಾವಾರು ಪ್ರಾಂತಗಳ ರಚನೆ ಸಂದರ್ಭದಲ್ಲಿ ಅಂದಿನ ಭಾಂಣಿ ರಾಜ್ಯಕ್ಕೆ ಸೇರಿಸಿ , ಸಂವಿಧಾನದ 371 ( 2 ) ರ ಅಡಿಯಲ್ಲಿ ವಿಶೇಷ ಸ್ಥಾನಮಾನ ನೀಡಲಾಧಿಸಿತು . ಇದೇ ಸಂದರ್ಭದಲ್ಲ ಹೈದ್ರಾಬಾದ ರಾಜ್ಯದ ಭಾಗವಾಗಿದ್ದ ಈ th : ಕಲ್ಯಾಣ ಕರ್ನಾಟಶ ಪ್ರದೇಶದ ಬೀದರ , ಕಲಬುರಗಿ , ಯಾದಗೀರ , ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳನ್ನು ಅಂದಿನ ಮೈಸೂರು ರಾಜ್ಯಕ್ಕೆ ಸೇರಿಸಬಹುದು , ಆದರೆ ನಮ್ಮ ಭಾಗದ ಜನರ ದುರಾದೃಷ್ಟವೋ ಅಳುವ ಸರಕಾರದ ನಿರ್ಲಕ್ಷ್ಯವೋ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಇಂದು ಸಂವಿಧಾನದ 371 ರ ಸೌಲಭ್ಯ ನೀಡ H ಅಲ್ಲ . ಸಂವಿಧಾನದ 3713 ಸೌಲಭ್ಯ ನೀಡಬೇಕೆಂದು ನಮ್ಮ ಭಾಗದ ಜನಪ್ರತಿನಿಧಿಗಳು , ಹೋರಾಟಗಾರರು , ಸುಧೀರ್ಘ ಹೋರಾಟ ನಡೆಸಿದ್ದರಿಂದ 2013 ರಲ್ಲಿ ಕೇಂದ್ರ ಸರಸಿದವು . ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಸಂವಿಧಾನದ 371 ಅಡಿಯಲ್ಲಿ ವಿಶೇಷ ಸ್ಥಾನಮಾನ ನೀಡಿದೆ . ಸಂವಿಧಾನದ 371 ಅನ್ವಯ ಏಶೇಷ ಸ್ಥಾನಮಾನ ನೀಡಲು ಪರಿಗಣಿಸಿರುವ ಮಾನದಂಡ ಕೇವಲ ಈ ಭಾಗದ ಹಿಂದುಳಎಕೆ ಮಾತ್ರವಲ್ಲದೆ ಹೈದ್ರಾಬಾದ ರಾಜ್ಯದ ಭಾಗವಾಗಿರುವ ಪ್ರದೇಶ ಇನ್ನುಳಿದ ತೆಲಂಗಾಣ ಮತ್ತು ಮರಾಠಾವಾಡಾ ಪ್ರದೇಶದಂತೆ 371 ರ ಸೌಲಭ್ಯದಿಂದ ವಂಚಿತಗೊಂಡಿರುವ ಕಾರಣಕ್ಕೆ ಕಲ್ಯಾಣಾ ಕರ್ನಾಟಕಕ್ಕೂ 371 ಜೆ ಸೌಲಭ್ಯ ನೀಡಲಾಯಿತು . ಹಿಂದಿನ ಸರಕಾರದಲ್ಲಿ ಗದಗ ಜಿಲ್ಲೆಯ ಕೆಲವು ಹಳ್ಳಿಗಳನ್ನು ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಸೇರಿಸಿ 371 ಜಿ ಸೌಲಭ್ಯ ನೀಡುವ ಪ್ರಸ್ತಾವನೆ ಸರಕಾರದ ಜಲಕದಲ್ಲಿ ಬಂದಿತ್ತು . ಆದರೆ ನಮ್ಮ ಭಾಗದ ಜನಪ್ರತಿನಿಧಿಗಳು , ಸಂಘ ಸಂಸ್ಥೆಗಳು ಹಾಗೂ ನಾಗರೀಕರು ತೀರ್ವ ವಿರೋಧ ಮಾಡಿರುವ ಕಾರಣ ಸದರಿ ಪ್ರಸ್ತಾವನೆಯನ್ನು ಸರಕಾರ ಕೈಬಿಟ್ಟಿತ್ತು . ಈಗ ತಮ್ಮ ಸರಕಾರದಲ್ಲಿಯೂ ಸಹ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮರು ,

ಚಿತ್ರದುರ್ಗ ಜಿಲ್ಲೆಯನ್ನು ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಸೇರಿಸಿ 373 ಸೌಲಭ್ಯ ನೀಡುವ ಕುರಿತು ಅಲ್ಲಯ ಪತ್ರಿಕೆಗಳಲ್ಲಿ ಬಂದಿರುವದು ನಮಗೆ ಆತಂಕವಾಗಿದೆ . ರಾಜ್ಯದಲ್ಲಿ ಡಾ.ಡಿ.ಎಂ.ನಂಜುಂಡಪ್ಪನವರ ವರದಿಯಂತೆ ಹಿಂದುಳಿದ ಪ್ರದೇಶಗಳು ಹಲವಾರು ಇದ್ದು , ರಾಜ್ಯ ಸರಕಾರವು ಅಂತಹ ಹಿಂದುಳಿದ ಪ್ರದೇಶದ ಅಭಿವೃದ್ಧಿಗೆ ವಿಶೇಷ ಯೋಜನೆಯೊಂದನ್ನು ರೂಪಿಸಿ ಕಾಲಮಿತಿಯೊಳಗೆ ಅವುಗಳನ್ನು ಅಭಿವೃದ್ಧಿ ಪಡಿಸಬಹುದಾಗಿದೆ . ಕಾರಣ , ಕರ್ನಾಟಕ ರಾಜ್ಯದ ಯಾವುದೇ ಪ್ರದೇಶ ಅಥವಾ ಜಿಲ್ಲೆ ಅಥವಾ ತಾಲ್ಲೂಕು ಅಥವಾ ಹೋಬಳಿ ಅಥವಾ ಹಳ್ಳಿಗಳನ್ನು ಯಾವುದೇ ಕಾರಣವಿದ್ದರೂ ಕಲ್ಯಾಣ ಕರ್ನಾಟಕ ಪ್ರದೇಶದ ವ್ಯಾಪ್ತಿಗೆ ಸೇರಿಸುವದನ್ನು ನಾವು ಅ 4 ರ್ವವಾಗಿ ವಿರೋಧಿಸುತ್ತೇವೆ ಮತ್ತು ಇಂತಹ ಪ್ರಸ್ತಾವನೆಗಳು ಬಂದಿಲ್ಲ ಯಾವುದೇ ಕಾರಣಕ್ಕೂ ಪರಿಗಣಿಸಬಾರದೆಂದು ಕುಷ್ಟಗಿಯ ಶಾಸಕ ಅಮರೇಗೌಡ ಎಲ್.ಪಾಟೀಲ್ ಬಯ್ಯಾಪೂರ ಮುಖ್ಯಮಂತ್ರಿಗಳಿಗೆ ಆಗ್ರಹಿಸಿದ್ದಾರೆ.

Please follow and like us:
error