ಕಲ್ಯಾಣ ಕರ್ನಾಟಕ ಉತ್ಸವ ಸಚಿವ ಸಿ.ಸಿ.ಪಾಟೀಲ್ ಭಾಷಣ

ಕೊಪ್ಪಳ ಜಿಲ್ಲಾ ಕ್ರೀಡಾಂಗಣದಲ್ಲಿ  ಕಲ್್ಯ್್ಯಾ್್ಯ್್ಯಾಣ ಯ ಕರ್ನಾಟಕ ಉತ್ಸವ ದಿನಾಚರಣೆ ಅಂಗವಾಗಿ 2019ರ ಸೆಪ್ಟಂಬರ್ 17 ರಂದು ಬೆಳಿಗ್ಗೆ 9 ಗಂಟೆಗೆ ರಾಷ್ಟ್ರ ಧ್ವಜಾರೋಹಣ ಮಾಡುವ ಸಂದರ್ಭದಲ್ಲಿ ಸಿ . ಸಿ . ಪಾಟೀಲ ,  ಗಣಿ ಮತ್ತು ಭೂ ವಿಜ್ಞಾನ ಸಚಿವರು , ಕರ್ನಾಟಕ ಸರ್ಕಾರ ರವರ ಭಾಷಣ . 
 ಕಲ್ಯಾಣ ಕರ್ನಾಟಕ ಉತವ ದಿನಾಚರಣೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ ಗೌರವಾನ್ವಿತ ಹಿರಿಯ ಸ್ವಾತಂತ್ರ್ಯ ಸೇನಾನಿಗಳೆ , ಮುದ್ದು ಮಕ್ಕಳೆ , ಹಿರಿಯ ನಾಗರಿಕರೆ , ಸಂಸದರೆ , ಜಿಲ್ಲೆಯ ಎಲ್ಲಾ ಶಾಸಕ ಮಿತ್ರದ , ಜಿಲ್ಲಾ ಪಂಚಾಯತಿ ಅಧ್ಯಕ್ಷರೆ , ಜಿಲ್ಲಾಧಿಕಾರಿಯವರೆ , ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ , ಜಿಲ್ಲಾ ರಕ್ಷಣಾಧಿಕಾರಿಗಳ ಹಾಗೂ ಇಲ್ಲಿ ನೆರೆದಿರುವ ಜನಪ್ರತಿನಿಧಿಗಳೆ , ಅಧಿಕಾರಿ ಹಾಗೂ ನೌಕರ ವರ್ಗದವರೆ , ಸಹೋದರ , ಸಹೋದರಿಂುರ , ಮಾಧ್ಯಮದ ಸ್ನೇಹಿತರೆ . . . . . . . . ತಮಗೆಲ್ಲರಿಗೂ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯ ಶುಭಾಶಯಗಳು . 6 ಹೈದ್ರಾಬಾದ್ – ಕರ್ನಾಟಕ ( ಕಲ್ಯಾಣ – ಕರ್ನಾಟಕ ) ಪ್ರದೇಶ ನಿಜಾಮರ ಆಳ್ವಿಕೆಯಿಂದ ಸ್ವಾತಂತ್ರ್ಯಗೊಂಡು 11 ವರ್ಷಗಳಾದ ನೆನಪಿನಲ್ಲಿ ಇಂದು ಏರ್ಪಡಿಸಿರುವ 12ನೇ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯಲ್ಲಿ ಪಾಲ್ಗೊಳ್ಳಲು ನನಗೆ ಸಂತೋಷವೆನಿಸುತ್ತದೆ . ಇದಕ್ಕಾಗಿ ಹೋರಾಡಿದ ಎಲ್ಲ ಮಹನೀಯರಿಗೆ ನಿಮ್ಮೆಲ್ಲರ ಪರವಾಗಿ ಗೌರವದ ವಂದನೆಗಳು . • ದೇಶದ ಎಲ್ಲ ಭಾಗಗಳಲ್ಲಿ ಆಗಸ್ಟ್ 15 ರಂದು ಮಾತ್ರ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿದರೆ , ಕಲ್ಯಾಣ – ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಮಾತ್ರ ಆಗಸ್ಟ್ 15 ಮತ್ತು ಸೆಪ್ಟೆಂಬರ್ 17 ರಂದು ಹೀಗೆ ಎರಡೆರಡು ದಿನಗಳಂದು ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಗುತ್ತಿದೆ . • ನಮ್ಮ ದೇಶ ಆಗಸ್ಟ್ 15 , 1947 ರಂದು ಸ್ವಾತಂತ್ರ್ಯ ಪಡೆಯಿತು . ಆದರೆ , ಹೈದರಾಬಾದ್ ನೀತಾನರ ಆಕೆ೦ತ ಭಾಗವಾಗಿದ್ದ ಕೊಪ್ಪಳ , ಬಳ್ಳಾರಿ , ರಾಯಚೂರು , ಕಲಬುರಗಿ , ಯಾದಗಿರಿ , ಬೀದರ್‌ ಹಾಗೂ ಇತರ ಪ್ರದೇಶಗಳು ಸ್ವಾತಂತ್ರ್ಯಕ್ಕಾಗಿ ಒಂದು ವರ್ಷ ಹೆಚ್ಚು ಕಾಯಬೇಕಾಯಿತು . ಇಡೀ ದೇಶ ಸ್ವಾತಂತ್ರ್ಯದ ಸಂಭ್ರಮ ಅನುಭವಿಸುತ್ತಿದ್ದರೆ , ಹೈದ್ರಾಬಾದ್ – ಕರ್ನಾಟಕ ಭಾಗದ ಜನರು ರಜಾಕಾರರ ದಬ್ಬಾಳಿಕೆಗೆ ಸಿಕ್ಕಿ ಶೋಷಣೆಯನ್ನು ಅನುಭವಿಸುತ್ತಿದ್ದರು . ಬ್ರಿಟೀಷರ ಕುಮ್ಮಕ್ಕಿನಿಂದ ಹೈದರಾಬಾದ್ ಪ್ರಾಂತ್ಯವನ್ನು ತನ್ನ ಕಪಿಮುಷ್ಟಿಯಲ್ಲಿ ಇಟ್ಟುಕೊಂಡು ಆಡಳಿತ ನಡೆಸುತ್ತಿದ್ದ ನಿಜಾಮರು , ಭಾರತಕ್ಕೆ ಸ್ವಾತಂತ್ರ ಬ೦ದರೂ ಭಾರತದ ಒಕ್ಕೂಟಕ್ಕೆ ಸೇರಲು ನಿರಾಕರಿಸಿದರು ಸ್ವತಂತ್ರ ಭಾರತದಲ್ಲಿ

ವಿಲಿನಗೊಳ್ಳದೆ ತಾನು ಪ್ರತ್ಯೇಕವಾಗಿ ಉಳಿದು , ತಮ್ಮದೇ ಒಂದು ದೇಶವನ್ನಾಗಿ ಉಳಿಸಿಕೊಂಡು ಆಳ್ವಿಕೆ ನಡೆಸುವ ಧೋರಣೆಯಲ್ಲಿ ಹೈದ್ರಾಬಾದ ನಿಜಾಮರಿದ್ದರು . ಆಗಿನ ಗೃಹ ಸಚಿವರಾಗಿದ್ದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲರು , ದಿಟ್ಟತನದಿಂದ ಕೈಗೊಂಡ ಸೈನಿಕ ಕಾರ್ಯಾಚರಣೆಯಲ್ಲಿ , ನಿಜಾಮರು ಶರಣಾಗಿ ಭಾರತದ ಒಕ್ಕೂಟಕ್ಕೆ ಸೇರಿದ್ದರಿಂದ ಹೈದ್ರಾಬಾದ್ – ಕರ್ನಾಟಕ 1948 ಸೆಪ್ಟೆಂಬರ್ 17 ರಂದು ಸ್ವಾತಂತ್ರ್ಯ ಪಡೆಯಿತು . ಈ ಮಹಾನ್ ಚೇತನಕ್ಕೆ ಆದರ ಪರ್ವಕ ನಮನಗಳನ್ನು ಅರ್ಪಿಸುತ್ತೇನೆ ಹಾಗೂ ಈ ಹೋರಾಟದಲ್ಲಿ ಹುತಾತ್ಮರಾದ ಈ ಪ್ರಾಂತ್ಯದ ಎಲ್ಲಾ ಸ್ವಾತಂತ್ರ್ಯ ಹೋರಾಟಗಾರರಿಗೂ ಹೃತೂರ್ದಕ ಗೌರವ ಅರ್ಪಿಸಬಯಸುತ್ತೇನೆ , * ಅಖಂಡ ಭಾರತದ ಒಕ್ಕೂಟ ವ್ಯವಸ್ಟ್‌ಗೆ ಅಡ್ಡಗಾಲಾದ ನಿಜಾಮರ ವಿರುದ್ಧ ಹೋರಾಡಲು ಈ ಭಾಗದ ಜನತೆ , ಶ್ರೀ ಸ್ವಾಮಿ ರಮಾನಂದ ತೀರ್ಥರಂತಹ ಸ್ವಾತಂತ್ರ್ಯ ಪ್ರೇಮಿಗಳಿಂದ ಪ್ರೇರಿತರಾಗಿ , ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಹೋರಾಟ ಮಾಡಿದ್ದಾರೆ . • ವರಾನ್ಯರಾದ ಶಿವಮೂರ್ತಿ ಸ್ವಾಮಿ ಅಳವಂಡಿ , ಪುಂಡಲೀಕಪ್ಪ ಜ್ಞಾನಮೋಠ , ವೀರಭದ್ರಪ್ಪ ಶಿರೂರು , ಸಿ . ಎಂ . ಚುರ್ಚಿಹಾಳ ಮಠ , ಸೋಮಪ್ಪ ಡಂಬಳ , ಯರಾಶಿ ಶಂಕ್ರಪ್ಪನವರು , ಎಂ . ವಿರುಪಾಕ ಪ್ರನವರು , ನರಸಿಂಗರಾವ , ಜನಾರ್ಧನರಾವ್ ದೇಸಾಯಿ , ದೇವೇಂದ್ರಕುಮಾರ ಹಕಾರಿ , ಡಾ : ಪಂಚಾಕ್ಷರಿ ಹಿರೇಮಠ ಹಾಗೂ ಇನ್ನೂ ಹಲವಾರು ಹೋರಾಟಗಾರರ ತ್ಯಾಗ ಬಲಿದಾನಗಳಿಂದ ಹೈದ್ರಾಬಾದ್ – ಕರ್ನಾಟಕ ವಿಮೋಚನಾ ಹೋರಾಟ ಈ ನಾಡಿನ ಭವ್ಯ ಇತಿಹಾಸವಾಗಿ ಉಳಿದಿದ . • ಸ್ವಾತಂತ್ರ್ಯ ಹೋರಾಟದ ರೋಚಕ ಇತಿಹಾಸ ಹಾಗೂ ಅದರ ಮಹತ್ವವನ್ನು ನಾವೆಲ್ಲರೂ ಅರಿತು , ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ , ಬಲಿದಾನವನ್ನು ಸಹ ಸ್ಮರಿಸಿ , ಗೌರವಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ . • ಭಕ್ತಿ , ಸಾಹಿತ್ಯ ಹಾಗೂ ಸಾಮಾಜಿಕ ಕಲ್ಯಾಣವನ್ನು ಜತೆಯಾಗಿ ಬೆಸದ ಜಗತ್ತಿನ ಅತ್ಯಪೂರ್ವ ಚಳುವಳಿಯೊಂದು ರೂಪಗೊಂಡು 12ನೇ ಶತಮಾನದಲ್ಲಿ ಯಶಸ್ವಿಯಾಗಿ ಸಾಮಾಜಿಕ ಕ್ರಾಂತಿಗೆ ನಾಂದಿ ಹಾಡಿದ ನೆಲ ಇದು . ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಿ ಎಸ್ ಯಡಿಯೂರಪ್ಪನವರು ಇಲ್ಲಿನ ಜನರ ಭಾವನೆಗೆ ಬೆಲೆ ಕೊಟ್ಟು ದಿನಾಂಕ : 12 – 9 – 201³ ರಂದು ಹೈದ್ರಾಬಾದ ಕರ್ನಾಟಕವನ್ನು “ ಕಲ್ಯಾಣ ಕರ್ನಾಟಕ ” ವೆಂದು ಮರುನಾಮಕರಣ ಮಾಡಿರುತ್ತಾರೆ . ಈ ಭಾಗದ. ಸಮಗ್ರ ಕಲ್ಯಾಣವೇ ನಮ್ಮ ಸರ್ಕಾರದ ಧೈಯ ಮತ್ತು ಪ್ರಾದೇಶಿಕ ಅಸಮಾತೋಲನ ನಿವಾರಣೆಯ ನಮ್ಮ ಮುಂದಿನ ಗುರಿಯಾಗಿದೆ . ಕಲ್ಯಾಣ ಕರ್ನಾಟಕ ಭಾಗ ಭಾರತದ ಅತ್ಯಂತ ಒಣ ಪ್ರದೇಶಗಳಲ್ಲಿ ಒಂದಾಗಿ ಗುರುತಿಸಲ್ಪಟ್ಟಿದೆ . ಸತತ ಬರಗಾಲಗಳ ಕಾರಣ ಇಲ್ಲಿ ಅಭಿವೃದ್ಧಿ ಮರೀಚಿಕೆಯಾಗಿತ್ತು . ಡಾ . ನಂಜುಂಡಪ್ಪ ವರದಿಯ ಪ್ರಕಾರ ರಾಜ್ಯದ 30 ಅತ್ಯಂತ ಹಿಂದುಳಿದ ತಾಲೂಕುಗಳಲ್ಲಿ 21 ತಾಲೂಕುಗಳು ಈ ಭಾಗಕ್ಕೆ ಸೇರಿವೆ . * ರಾಜ್ಯದಲ್ಲಿ ಕಳೆದ ಆಗಸ್ಟ್ 3 ರಿಂದ 10ರ ನಡುವೆ ವಾಡಿಕೆಗಿಂತ ಶೇ . 279ರಷ್ಟು ಹೆಚ್ಚು ಮಳೆಯಾಗಿದೆ . ಇದು ಕಳೆದ 18 ವರ್ಷಗಳಲ್ಲಿಯೆ ದಾಖಲೆಯ ಮಳೆ , ಭಾರಿ ಮಳೆ ಮತ್ತು ಮಹಾರಾಷ್ಟದ ಕೃಷ್ಣ ನದಿ ಪಾತ್ರದಲ್ಲಿ ಭಾರಿ ಮಳೆಯಾಗಿದ್ದರಿಂದ ಕೃಷ್ಣಾ ಮತ್ತು ಭೀಮಾ ನದಿಗೆ ನೀರು ಹರಿದುಬಂದ ಕಾರಣ ಮಳೆನಾಡು , ಕರಾವಳಿ , ಉತ್ತರ ಕರ್ನಾಟಕ ಭಾಗ ಹೀಗೆ ರಾಜ್ಯದಾದ್ಯಂತ ಭೀಕರ ಪ್ರವಾಹ ಉಂಟಾಗಿ ಜನಸಾಮಾನ್ಯರ ಬದುಕು ದುಸ್ತರವಾಗಿದೆ . ಮನೆ , ಮಠ , ಆಸ್ತಿ ಕಳೆದುಕೊಂಡು ನಿರಾಶ್ರಿತರಾಗಿ ಸಾಂತ್ವನ ಹೇಳಲು ಮಾನ್ಯ ಮುಖ್ಯಮಂತ್ರಿಗಳ ಆದೇಶದಂತೆ ಇಡೀ ಸಚಿವ ಸಂಪುಟವೇ ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿ ನೊಂದವರಿಗೆ ಆತ್ಮಸ್ಥೆರ್ಯ ತುಂಬುವ ಕೆಲಸ ಮಾಡಿದಲ್ಲದೆ ಪರಿಹಾರ ಕಾರ್ಯಕ್ಕೂ ಶುರುಕು ನೀಡಲಾಗಿದೆ . ಭಾರತ ಸರ್ಕಾರವು ಪ್ರಧಾನ ಮಂತ್ರಿ ಕಿಸಾನ್ ಸಮಾನ್ ನಿಧಿ ( PMI – KISAN ) ಎಂಬ ಹೊಸ ಯೋಜನೆಯನ್ನು ಘೋಷಿಸಿದ್ದು , ಸದರಿ ಯೋಜನೆಯಡಿ ಭೂ ಒಡೆತನ ಹೊಂದಿರುವ ಪ್ರತಿ ರೈತ ಕುಟುಂಬಕ್ಕೆ 3 ಕಂತುಗಳಲ್ಲಿ ವಾರ್ಷಿಕವಾಗಿ ಒಟ್ಟು ರೂ 6 , 000 / – ಗಳನ್ನು ನೀಡಲು ಉದ್ದೇಶಿಸಿದ್ದು , ಈ ಯೋಜನೆಯಡಿಯಲ್ಲಿ ಭೂಮಿ ಇರುವ ಎಲ್ಲಾ ರೈತರು ( ಸಣ್ಣ , ಅತಿ ಸಣ್ಣ ಹಾಗೂ ದೊಡ್ಡ ರೈತರು ) ಅರ್ಹರಾಗಿರುತ್ತಾರೆ . ಈ ಯೋಜನೆ ಅಡಿಯಲ್ಲಿ ಜಿಲ್ಲೆಯಲ್ಲಿ ಒಟ್ಟು 1 , 54 , 186 ರೈತರಿಗೆ ನೋಂದಣಿ ಮಾಡಲಾಗಿದ್ದು , ಇದರಲ್ಲಿ 1 , 19 , 673 ರೈತರಿಗೆ ಹಣ ಜಮೆ ಮಾಡಲಾಗುತ್ತಿದೆ . ಇದಲ್ಲದೇ ರಾಜ್ಯ ಸರ್ಕಾರದಿಂದಲೂ ಸಹ ರೂ 4 , 000 / – ಹೆಚ್ಚಿನ ಆರೋತ್ಸಾಹ ಧನ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ . * ಪ್ರಧಾನ ಮಂತ್ರಿ ಕಿಸಾಜ್ ಮನ್ ಧನ್ ( PMI – IKMIX ) ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು , ಈ ಯೋಜನೆಯಡಿ 60 ವರ್ಷ ವಯಸ್ಸಿನ ನಂತರದ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಮಾಸಿಕ ಕನಿಷ್ಠ ರೂ . 3 , 000 / – ಸಿಂಚನ ನೀಡಲು ಯೋಜನೆ ಜಾರಿಯಲ್ಲಿದ್ದು , ಗರಿಷ್ಟ 2 ಹೆಕ್ಟೇರ್ ವರೆಗೆ ಸಾಗುವಳಿ ಭೂಮಿ ಹೊಂದಿರುವ 18 – 40 ವರ್ಷದೊಳಗಿನ ಎಲ್ಲಾ ರೈತರು ಈ ಯೋಜನೆಗೆ ಅರ್ಹರಿರುತ್ತಾರೆ ವಯಸ್ಸಿನ ಆಧಾರದ ಮೇಲೆ ಮಾಸಿಕ ರೂ 55 / – ರಿಂದ 200 / – ರವರೆಗೆ ಮಾಸಿಕ ವಂತಿಕೆ ಕಟ್ಟತಕ್ಕದ್ದು , ರೈತರು ಪಾವತಿಸಿದ ಮೊತ್ತಕ್ಕೆ ಸಮಾನ ಮೊತ್ತವನ್ನು ಕೇಂದ್ರ ಸರ್ಕಾರವು ಪಿಂಚಣಿ ನಿಧಿಗೆ ಪಾವತಿಸುತ್ತದೆ . ಈ ಯೋಜನೆಯಡಿ ಜಿಲ್ಲೆಯಲ್ಲಿ ಇಲ್ಲಿಯವೆಗೆ 1 , 480 ರೈತರ ನೋಂದಣಿ ಮಾಡಲಾಗಿದೆ . • ಭಾರತ ಸರ್ಕಾರವು ಜಲ ಭದ್ರತೆಗಾಗಿ ಜಲಶಕ್ತಿ ಅಭಿಯಾನ ” ಎಂಬ ಕಾರ್ಯಕ್ರಮವನ್ನು ರಾಜ್ಯ ಸರ್ಕಾರಗಳ ಸಹಯೋಗದಿಂದ ದಿನಾಂಕ : 01 – 07 – 2019 ರಿಂದ 15 – 09 – 2019ರ ವರೆಗೆ ಮೊದಲನೇ ಹಂತದಲ್ಲಿ ಹಮ್ಮಿಕೊಂಡಿತ್ತು . ಅದರಂತೆ ರಾಜ್ಯದ ಹಲವು ಭಾಗಗಳಲ್ಲಿ ನೀರಿನ ತೀವ್ರ ಕೊರತೆಯಿರುವ ಹಿನ್ನೆಲೆಯಲ್ಲಿ ಜಲ ಸಂರಕ್ಷಣೆ ಆಂದೋಲನವನ್ನು ಪರಿಣಾಮಕಾರಿಯಾಗಿ ಕೈಗೊಳ್ಳಲು ಉದ್ದೇಶಿಸಿದ . ಕೊಪ್ಪಳ ಜಿಲ್ಲೆಯಲ್ಲಿ ಯಲಬುರ್ಗಾ ತಾಲ್ಲೂಕನ್ನು ಆಯ್ಕೆ ಮಾಡಲಾಗಿದೆ . • ಜಲಾಮೃಡ ಯೋಜನೆಯಡಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ರಾಜ್ಯದಲ್ಲಿ ಜಲ ಸಾಕ್ಷರತೆ , ಜಲ ಸಂರಕ್ಷಣೆ , ನೀರಿನ ಪ್ರಜ್ಞಾವಂತ ಬಳಕೆ ಹಾಗೂ ಹಸಿರೀಕರಣಕ್ಕಾಗಿ ಜಲಾಮೃತ ” ಎಂಬ ಸಮುದಾಯ ಚಾಲಿತ ಸಮಗ್ರ ಚಳುವಳಿಯೊಂದನ್ನು ಜಿಲ್ಲೆಯಲ್ಲಿ ಪ್ರಾರಂಭಿಸಲಾಗಿದೆ . ಕರ್ನಾಟಕ ಸರ್ಕಾರವು 2019ನೇ ವರ್ಷವನ್ನು ಜಲ ವರ್ಷವೆಂದು ಘೋಷಿಸಲಾಗಿದೆ . ಅದರಂತೆ ಜಿಲ್ಲಾಡಳಿತ , ಜಿಲ್ಲಾ ಪಂಚಾಯತ್ ಮತ್ತು ಜಿಲ್ಲೆಯ ಎಲ್ಲಾ ಅನುಷ್ಠಾನ ಇಲಾಖೆಗಳ ಸಹಯೋಗದೊಂದಿಗೆ ಜಿಲ್ಲೆಯಲ್ಲಿ ಜಲಾಮೃತ ಯೋಜನೆಯನ್ನು ಅನುಷ್ಟಾನಗೊಳಿಸಲಾಗಿದ್ದು , ಜಿಲ್ಲೆಯಲ್ಲಿ ಈಗಾಗಲೆ ಜಲಾಮೃತ ಯೋಜನೆಯಡಿ ಸಮುದಾಯಾಧಾರಿತ ಕಾಮಗಾರಿಗಳಾದ ನೈಸರ್ಗಿಕ ನಿರ್ವಹಣಾ ಕಾಮಗಾರಿಗಳಾದ ಕೆರೆಗಳ ಹೂಳೆತ್ತುವ ಕಾಮಗಾರಿ , ಹೊಸಕೆರೆ , ಚೆಕ್ ಡ್ಯಾಂ , ಗೋ – ಕಟ್ಟೆಗಳನ್ನು , ಕೃಷಿ ಹೊಂಡ , ಬದು ನಿರ್ಮಾಣ , ಹಸಿರೀಕರಣ , ತೋಟಗಾರಿಕೆ ಬೆಳೆಗಳ ಅಭಿವೃದ್ಧಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ ಮತ್ತು ವೈಯಕ್ತಿಕ ಕಾಮಗಾರಿಗಳಾದ ಕೃಷಿ ಹೊಂಡ , ರೇಷ್ಮೆ , ಬದು ನಿರ್ಮಾಣ , ದನದ ಕುರಿ / ಹಂದಿ ದೊಡ್ಡಿ ನಿರ್ಮಾಣ , ಈರುಳ್ಳಿ ಶೇಖರಣಾ ಉಗ್ರಾಣ , ತೋಟಗಾರಿಕಾ ಬೆಳೆಗಳು ಮುಂತಾದ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ . ಸ್ವಚ್ಛ ಭಾರತ ಮಿಷನ್ ( ಗ್ರಾಮೀಣ ) ಯೋಜನೆಯು ಸರ್ಕಾರದ ಮುಂಚೂಣಿ ಕಾರ್ಯಕ್ರಮವಾಗಿದ್ದು , ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ನೈರ್ಮಲ್ಯ , ಆರೋಗ್ಯ , ರಾಜ್ಯ ವಿಲೇವಾರಿ , ಶಾಲೆಗಳಲ್ಲಿ ಸ್ವಚ್ಚತೆ ಕಾಪಾಡುವ ಹಿತದೃಷ್ಟಿಯಿಂದ ಹಾಗೂ ಜಿಲ್ಲೆಯನ್ನು ಬಯಲು ಬಹಿರ್ದೆಸೆ ಮುಕ್ತಿ ಮಾಡುವ ಅನುಷ್ಠಾನಗೊಳಿಸಲಾಯಿತು . ಅದರ ಫಲವಾಗಿ ಜಿಲ್ಲೆಯಲ್ಲಿ ಗ್ರಾಮೀಣ ಪ್ರದೇಶದ ಒಟ್ಟು ಕುಟುಂಬಗಳ ಸಂಖ್ಯೆ 2 , 46 . 563 ಇದು , ಅದರಲ್ಲಿ ಬೇಸ್‌ಲೈನ್ ಸರ್ವ ಪ್ರಕಾರ 1 , 59 , 544 ಕುಟುಂಬಗಳು ಶೌಚಾಲಯಗಳನ್ನು ನಿರ್ಮಿಸಿಕೊಳ್ಳಬೇಕಾಗಿತ್ತು . ಅದರಂತೆ , 2013 – 14 ರಿಂದ 2017 – 18 ನೇ ಸಾಲಿನ ವರೆಗೆ 1 , 59 , 544 ಕುಟುಂಬಗಳು ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಂಡಿದ್ದು , ದಿನಾಂಕ : 22 . 03 . 2018 ರಂದು ಕೊಪ್ಪಳ ಜಿಲ್ಲೆಯನ್ನು ಬೇಸ್‌ಲೈನ್ ಸರ್ವೆ 2012 ರ ಪ್ರಕಾರ ಕೊಪ್ಪಳ ಜಿಲ್ಲೆಯ 4 ತಾಲ್ಲೂಕುಗಳು , 153 ಗ್ರಾಮ ಪಂಚಾಯತ್‌ಗಳು ಹಾಗೂ 579 ಗ್ರಾಮಗಳನ್ನು ಬಯಲು ಬಹಿರ್ದೆಸೆ ಮುಕ್ತ ಎಂದು ಸರ್ಕಾರದಿಂದ ಘೋಷಿಸಲಾಗಿರುತ್ತದೆ . • ರಾಜ್ಯದಲ್ಲಿಯೇ ಪ್ರಪ್ರಥಮ ಬಾರಿಗೆ ತೋಟಗಾರಿಕೆ ಇಲಾಖಾ ವತಿಯಿಂದ ಮಣ್ಣು , ನೀರು ಮತ್ತು ಎಲೆ ವಿಶ್ಲೇಷಣೆ ಮಾಡುವ ಅತ್ಯಾಧುನಿಕ ಪ್ರಯೋಗಶಾಲೆಯನ್ನು ಗಿಣಿಗೇರಾ ತೋಟಗಾರಿಕೆ ಕ್ಷೇತ್ರದಲ್ಲಿ ನಿರ್ಮಿಸಲಾಗಿದೆ . ಕ್ಷೇತ್ರದಲ್ಲಿ ಉತ್ತಮ ಗುಣಮಟ್ಟದ ಕಸಿ ಸಸಿಗಳನ್ನು , ತರಕಾರಿ ಸಸಿಗಳನ್ನು ಉತ್ಪಾದಿಸಲಾಗುತ್ತಿದೆ ಹಾಗೂ ಎರೆಹುಳು ಗೊಬ್ಬರ ಉತ್ಪಾದನಾ ಘಟಕವನ್ನು ಸ್ಥಾಪಿಸಲಾಗಿದ್ದು ರೈತರಿಗೆ ಪ್ರಯೋಜನಕಾರಿಯಾಗಿದೆ . ಕೊಪ್ಪಳ ಜಿಲ್ಲೆಯಲ್ಲಿ ನಿರ್ಮಿಸಿದ ಈ ಪ್ರಯೋಗಶಾಲೆ ಈ ಭಾಗದ ರೈತರಿಗೆ ( ಹೈದರಾಬಾದ್ ಕರ್ನಾಟಕ ಭಾಗದ 6 ಜಿಲ್ಲೆ ) ಅತ್ಯಂತ ಪ್ರಯೋಜನಕಾರಿಯಾಗಲಿದೆ . * ಉಬಕಿತ ಪಠ್ಯಪುಸ್ತಕ ವಿತರಣೆಯಡಿ 2019 20 ನೇ ಸಾಲಿಗೆ ಸರಕಾರಿ ಮತ್ತು ಅನುದಾನಿತ ಶಾಲೆಗಳ 1 ರಿಂದ 10 ನೇ ತರಗತಿವರೆಗಿನ ಸರಕಾರಿ 1 . 73 , 464 ಮತ್ತು ಅನುದಾನಿತ 17 , 663 ಮಕ್ಕಳಿಗೆ ಪಠ್ಯ ಪುಸ್ತಕಗಳನ್ನು ಉಚಿತವಾಗಿ ವಿತರಣೆ ಮಾಡಲಾಗಿದೆ . ಉಚಿತ ಸಮವಸ್ತ್ರ ವಿತರಣೆಯಡಿ ಸರಕಾರಿ ಶಾಲೆಗಳ 1 ರಿಂದ 10ನೇ ತರಗತಿಯವರೆಗಿನ 1 , 73 , 464 ಮಕ್ಕಳಿಗೆ ಸಮವಸ್ತ್ರಗಳನ್ನು ಉಚಿತವಾಗಿ ವಿತರಣೆ ಮಾಡಲಾಗಿದೆ , ಉಚಿತ ಬೈಸಿಕಲ್ ವಿತರಣೆಯಡಿ ಸರಕಾರಿ ಮತ್ತು ಅನುದಾನಿತ ಶಾಲೆಗಳ 8ನೇ ತರಗತಿಯ 18 , 706 ಮಕ್ಕಳಿಗೆ ಬೈಸಿಕಲ್ ಗಳನ್ನು ಉಚಿತವಾಗಿ ವಿತರಣೆ ಮಾಡಲಾಗಿದೆ . ಈ ಮತ್ತು ಸಾಕ್ ವಿತರಣೆ ಕಾರ್ಯಕ್ರಮದಡಿ 2019 – 20ನೇ ಸಾಲಿಗೆ ಸರಕಾರಿ ಶಾಲೆಗಳ 1 ರಿಂದ 10ನೇ ತರಗತಿಯವರೆಗಿನ 1 , 73464 ಮಕ್ಕಳಿಗೆ ಶೂ ಮತ್ತು ಸಾಕ್ಸ್‌ಗಳನ್ನು ವಿತರಣೆ ಮಾಡಲು ಅನುದಾನ ವನ್ನು ಶಾಲಾ ಎಸ್ . ಡಿ . ಎಂ . ಸಿ ಖಾತೆಗಳಿಗೆ ಜಮಾ ಮಾಡಿದ್ದು , ಖರೀದಿ ಪ್ರಕ್ರಿಯೆ ಪ್ರಗತಿ ಹಂತದಲ್ಲಿದೆ . * ಗಂಗಾ ಕಲ್ಯಾಣ ಯೋಜನೆಯಲ್ಲಿ ಇಲ್ಲಿಯವರೆಗೆ ಹಿಂದುಳಿದ ವರ್ಗಕ್ಕೆ ಸೇರಿದ ಅರ್ಹ 1 , 427 ರೈತರಿಗೆ ನಿಗಮದಿಂದ ನೀರಾವರಿ ಸೌಲಭ್ಯ ಒದಗಿಸಲಾಗಿದೆ , ಚೈತನ್ಯ ಸ್ವಯಂ ಉದ್ಯೋಗ ಯೋಜನೆಯಡಿಸ್ವಂತ ಉದ್ಯೋಗ ಕೈಗೊಳ್ಳಲು ಡಿ . ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಒಟ್ಟು 8 , 850 ಅರ್ಹ ಫಲಾನುಭವಿಗಳಿಗೆ ಸಾಲ & ಸಹಾಯಧನ ಸೌಲಭ್ಯ ನೀಡಲಾಗಿದೆ . ಸಾಂಪ್ರದಾಯಿಕ ಯೋಜನೆಯಡಿ ಸಾಂಪ್ರದಾಯಿಕವಾಗಿ ಹಿಂದಿನಿಂದ ಮಾಡುತ್ತಾ ಬಂದಿರುವ ಕಸುಬನ್ನು ಮುಂದುವರೆಸಲು ನಿಗಮದಿಂದ ಅಲ್ಲಿಯವರೆಗೆ ಒಟ್ಟು 6 , 990 ಅರ್ಹ ಫಲಾನುಭವಿಗಳಿಗೆ ಸಾಲ & ಸಹಾಯಧನ ಸೌಲಭ್ಯ ನೀಡಲಾಗಿದೆ . ಅಲೆಮಾರಿ ಜನಾಂಗದವರಿಗೆ ಸಾಲ ಯೋಜನೆಯಡಿ ಅಲೆಮಾರಿ / ಅರೆಅಲೆಮಾರಿ ಜನಾಂಗದವರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ನಿಗಮದಿಂದ ಇಲ್ಲಿಯವರೆಗೆ ಒಟ್ಟು 3 , 500 ಅರ್ಹ ಫಲಾನುಭವಿಗಳಿಗೆ ಸಾಲ & ಸಹಾಯಧನ ಸೌಲಭ್ಯ ನೀಡಲಾಗಿದೆ . * ಪರಿಶಿಷ್ಟ ಜಾತಿ / ಪರಿಶಿಷ್ಟ ಪಗಂಡ ಮತ್ತು ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತ ವರ್ಗಗಳಿಗೆ ಸೇರಿದ ಅರ್ಹ ವಿದ್ಯಾವಂತ ಅಭ್ಯರ್ಥಿಗಳಿಗೆ ಸ್ವಯ , ಉದ್ಯೋಗ ಕಲ್ಪಿಸುವ ದೃಷ್ಟಿಯಿಂದ ಪ್ರವಾಸಿ ತಾಣಗಳಿಗೆ ಪ್ರವಾಸಿಗರನ್ನು ಕರೆದುಕೊಂಡು ಹೋಗಲು ಸಹಾಯಧನದ ಮೂಲಕ ಪ್ರವಾಸಿ ಟ್ಯಾಕ್ಸಿಗಳನ್ನು ಒದಗಿಸಲಾಗುತ್ತಿದೆ . ಫಲಾನುಭವಿಯು ಸ್ವ – ಇಚ್ಚೆಯಿಂದ ಯಾವುದೇ ಮಾದರಿಯ ವಾಹನವನ್ನು ಖರೀದಿಸಬಹುದು . ಈ ವಾಹನದ ಘಟಕ ವೆಚ್ಚದಡಿ ಪ್ರವಾಸೋದ್ಯಮ ಇಲಾಖೆಯಿಂದ ರೂ . 3 . 00 ಲಕ್ಷ ಸಹಾಯಧನ ನೀಡಲಾಗುತ್ತದೆ . ವಾಹನದ ಒಟ್ಟು ವೆಚ್ಚದ ಶೇ . 5 ರಷ್ಟನ್ನು ಫಲಾನುಭವಿಯ ವಂತಿಕೆ ಹಾಗೂಾ ವಾಹನದ ಒಟ್ಟು ವೆಚ್ಚದಲ್ಲಿ ಉಳಿದ ಮೊತ್ತವನ್ನು ಬ್ಯಾಂಕ್ ಸಾಲದ ಮೂಲಕ ಪಡೆಯಬಹುದು . * ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯು ಅಂತರಾಷ್ಟ್ರೀಯ ಗುಣಮಟ್ಟ ಹೊಂದಿದ ಗೊಂಬೆಗಳ ತಯಾರಿಕಾ ಘಟಕವನ್ನು ಕುಕನೂರು ತಾಲ್ಲೂಕಿನ ಬಸಾಪುರ ಗ್ರಾಮದಲ್ಲಿ 2 . 72 ಎಕರೆ ಭೂಮಿ ಸ್ವಾಧೀನಪಡಿಸಿಕೊಂಡಿದ್ದು , ಅದರಲ್ಲಿ ರೂ . 1500 ಕೋಟಿ ವೆಚ್ಚದೊಂದಿಗೆ 5000 ಸ್ಥಳೀಯ ಜನರಿಗೆ ಉದ್ಯೋಗಾವಕಾಶ ಕಲ್ಪಿಸಲು ಇಲ್ಲಿ ಅಗತ್ಯ ಕ್ರಮ ಕೈಗೊಂಡಿದೆ . ಈ ಉತ್ಪಾದನಾ ಘಟಕವು ಮಾರ್ಚ್ . ೧ 20 ಕ್ಕೆ ಕಾರ್ಯಾರಂಭಗೊಳಿಸುವ ಗುರಿ ಹೊಂದಿದೆ , * ಕೊಪ್ಪಳ ಜಿಲ್ಲೆಯಲ್ಲಿ ಪ್ರಸ್ತುತ ಒಟ್ಟು 766 ಸಹಕಾರ ಸಂಘಗಳಿದ್ದು , ಅವುಗಳ ಪೈಕಿ 573 ಕಾರ್ಯನಿರತವಾಗಿವೆ . ಕಾರ್ಯನಿರತ 115 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು 2019 – 20 . ನೇ ಸಾಲಿನಲ್ಲಿ ಶೂನ್ಯ ಬಡ್ಡಿ ದರದಲ್ಲಿ ಒಟ್ಟು 1 , 2970 ಸದಸ್ಯರುಗಳಿಗೆ ರೂ . 6843 . 22 ಲಕ್ಷ ಅಲ್ಪಾವಧಿ ಸಾಲ ವಿತರಣೆ ಮಾಡಿವೆ . ಜನನಿ ಸುರಕ್ಷಾ ಯೋಜನೆಯಡಿಯಲ್ಲಿ 2019 – 20ನೇ ಸಾಲಿನಲ್ಲಿ ಒಟ್ಟು 2293 ಫಲಾನುಭವಿಗಳಿಗೆ ಹೆರಿಗೆಯಾದ ನಂತರ 16 , 43 , 000 / – ಲಕ್ಷ ರೂಗಳ ಅನುದಾನವನ್ನು ಪಿ ಎಫ್ ಎಮ್ ಎಸ್ ಮುಖಾಂತರ ಸಂದಾಯ ಮಾಡಲಾಗಿದೆ . • ಪೂರಕ ಪೌಷ್ಟಿಕ ಆಹಾರ ಕಾರ್ಯಕ್ರಮದಡಿ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಡಿ 4 – 6 ವರ್ಷದ ಮಕ್ಕಳಿಗೆ , ಗರ್ಭಿಣಿ ಬಾಣಂತಿಯರಿಗೆ ಹಾಗೂ ಕಿಶೋರಿಯರಿಗೆ ಸೂರಕ ಪೌಷ್ಠಿಕ ಆಹಾರ ನೀಡಲು ಭೌತಿಕ ಗುರಿ 188469 ಇದ್ದು ಹಾಗೂ ರೂ . 815 2 . 00 ಲಕ್ಷ ಆರ್ಥಿಕ ಗುರಿಯಿದ್ದು ರೂ . 4076 . 00 ಲಕ್ಷ ಬಿಡುಗಡೆಯಾಗಿರುತ್ತದೆ . ಆಗಸ್ಟ್ 2019 ವರೆಗೆ ರೂ . 1318 . 68 ಲಕ್ಷ ಆರ್ಥಿಕ ಪ್ರಗತಿ ಹಾಗೂ ಭೌತಿಕ ಪ್ರಗತಿ 173131 ಸಾಧಿಸಲಾಗಿದೆ . ದೌರ್ಜನ್ಯಕ್ಕೆ ಒಳಗಾದವರಿಗೆ ಒಂದೇ ಸೂರಿನಡಿ ವೈದ್ಯಕೀಯ ಚಿಕಿತ್ಸೆ , ಪೊಲೀಸ್ ಮತ್ತು ಕಾನೂನು ನೆರವು ಹಾಗೂ ಸಮಾಲೋಚನಾ ವ್ಯವಸ್ಥೆಗಳನ್ನು ಒದಗಿಸುವ ಸಂಬಂಧ ಜಿಲ್ಲಾ ಆಸ್ಪತ್ರೆ , ಕೊಪ್ಪಳದಲ್ಲಿ ಕಳೆದ ಸಾಲಿನಿಂದ ಪ್ರಾರಂಭಿಸಲಾಗಿರುವ ಮಹಿಳಾ ವಿಶೇಷ ಚಿಕಿತ್ಸಾ ಘಟಕಕ್ಕೆ ಹೊರಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿಗಳನ್ನು ನೇಮಿಸಿಕೊಂಡು ಕಾರ್ಯನಿರ್ವಹಿಸಲಾಗುತ್ತಿದ್ದು , ಆಗಸ್ಟ್ – 2019ರ ಅಂತ್ಯದವರೆಗೆ ಒಟ್ಟು 15 ಪ್ರಕರಣಗಳು ದಾಖಲಾಗಿರುತ್ತವೆ . ದಾಖಲಾದ ಪ್ರಕರಣಗಳ ಕುರಿತಂತೆ ಅಗತ್ಯ ವೈದ್ಯಕೀಯ ಚಿಕಿತ್ಸೆ , ಸಮಾಲೋಚನೆ ಹಾಗೂ ಕಾನೂನು ನೆರವು ನೀಡಲಾಗಿರುತ್ತದೆ . ಈ ಯೋಜನೆಯಡಿ 2015 – 20 ನೇ ಸಾಲಿನಲ್ಲಿ ರೂ . 1 . 92 ಲಕ್ಷ ಅನುದಾನ ಬಿಡುಗಡೆಯಾಗಿರುತ್ತದೆ . ಮಹಿಳಾ ವಿಶೇಷ ಚಿಕಿತ್ಸಾ ಘಟಕ್ಕೆ 181 ವೆಚ್ಚರಹಿತ ಉಚಿತ ಸಹಾಯವಾಣಿ ಸಂಪರ್ಕ ಕಲ್ಪಿಸಲಾಗಿದ್ದು , ಯೋಜನೆಯ ಕುರಿತಾಗಿ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಸಂಬಂಧ ವ್ಯಾಪಕ ಪ್ರಚಾರ ಕೈಗೊಂಡು ಅನುಷ್ಠಾನಗೊಳಿಸಲಾಗುವುದು , > ನಾವೆಲ್ಲರೂ ಒಂದಾಗಿ ಕೆಲಸ ಮಾಡಿದರೆ ಮಾತ್ರ ಆಜ್ಞಾನ , ಅನಕ್ಷರತೆ , ಬಡತನ , ಅನಾರೋಗ್ಯ ಅಪೌಷ್ಠಿಕತೆ , ಇವೆಲ್ಲವುಗಳಿಂದ ವಿಮೋಚನೆ ಪಡೆಯಲು ಸಾಧ್ಯ . ಬನ್ನಿ , ಕಲ್ಯಾಣ ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿಗೆ ಸರ್ಕಾರದೊಂದಿಗೆ ಕೈಜೋಡಿಸಿ , ಮತ್ತೊಮ್ಮೆ ಎಲ್ಲರಿಗೂ ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆಯ ಶುಭಾಶಯಗಳನ್ನು ಕೋರುತ್ತಾ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಿ . ಎಸ್ . ಯಡಿಯೂರಪ್ಪನವರ ನೇತೃತ್ವದ ನಮ್ಮ ಸರ್ಕಾರ ಕಲ್ಯಾಣ ಕರ್ನಾಟಕ ಭಾಗದ ಸರ್ವಾಂಗೀಣ ಅಭಿವೃದ್ದಿಗೆ ಬದ್ಧವಾಗಿದೆ ಎಂಬುದನ್ನು ಪುನರುಚ್ಚರಿಸುತ್ತ ನನ್ನ ಮಾತುಗಳನ್ನು ಮುಗಿಸುತ್ತೇನೆ , –

Please follow and like us:
error

Related posts