ಕಲ್ಯಾಣಕ್ರಾಂತಿಯಲ್ಲಿ ಹಡಪದ ಅಪ್ಪಣ್ಣರ ಕೊಡುಗೆ ಅಪಾರ- ಕರಡಿ ಸಂಗಣ್ಣ

ಹಡಪದ ಅಪ್ಪಣ್ಣನವರು ಹನ್ನೆರಡನೇಯ ಶತಮಾನದ ವಚನ ಚಳುವಳಿ ಮತ್ತು ಸಾಮಾಜಿಕ ಕ್ರಾಂತಿಯ ಹರಿಕಾರರಲ್ಲಿ ಒಬ್ಬರು. ಇವರು ಹಡಪದ ಸಮಾಜದವರಾಗಿದ್ದು,ಬಸವಣ್ಣನವರ ಬಲಗೈ ಬಂಟನೆಂದೇ ಹೆಸರು ಪಡೆದಿದ್ದರು.ಬಸವಣ್ಣನವರ ಬಾಲ್ಯದ ಒಡನಾಡಿಗಳಾಗಿದ್ದ ಇವರು ವಿಶ್ವದ ಪ್ರಪ್ರಥಮ ಪ್ರಜಾಪ್ರಭುತ್ವದ ಸಂಸತ್ತು ಎಂದೇ ಹೆಸರಾದ “ಅನುಭವ ಮಂಟಪದಲ್ಲಿ” ಬಸವಣ್ಣನವರಿಗೆ ಪ್ರಧಾನ ಕಾರ್ಯದರ್ಶಿಗಳಾಗಿ,ಯಾವುದೇ ರೀತಿಯ ಮುಜುಗುರವಾಗದಂತೆ ಕಾರ್ಯನಿರ್ವಹಿಸಿದ ಹೆಗ್ಗಳಿಕೆ ಇವರ ಕಾರ್ಯಕ್ಷಮತೆಗೆ ಇಂದಿನ ಪೀಳಿಗೆಗೆ ಮಾದರಿ ಮತ್ತು ಕನ್ನಡಿಯಾಗಿದೆ ಎಂದರೆ ಅತಿಶೋಕ್ತಿಯಾಗಲಾರದು. ಅಂದಿನ ಮೂಢನಂಬಿಕೆ ಹೊಡೆದೊಡಿಸುವದಕ್ಕಾಗಿಯೇ ಬಸವಣ್ಣನವರ ಬೇಟಿಗೆ ಯಾರೇ ಬಂದರೂ ಮೊದಲು ಹಡಪದ ಅಪ್ಪಣ್ಣನವರನ್ನು ನೋಡಿಕೊಂಡು ಬರಬೇಕೆಂಬ ನಿಯಮವನ್ನೆ ಮಾಡಿದ್ದರೆಂಬ ಪ್ರತೀತಿ ಇದೆ. ಅಲ್ಲದೆ ಕಲ್ಯಾಣಕ್ರಾಂತಿಯಲ್ಲಿ ಹಡಪದ ಅಪ್ಪಣ್ಣರ ಕೊಡುಗೆ ಅಪಾರವಾಗಿದೆ ಎಂದು ಲೋಕಸಭಾ ಸದಸ್ಯರಾದ ಕರಡಿ ಸಂಗಣ್ಣ ಹೇಳಿದರು.

ಅವರು ಕೊಪ್ಪಳನಗರದ 26ನೇ ವಾರ್ಡನ ಗಣೇಶನಗರದಲ್ಲಿ ಶರಣ ಹಡಪದ ಅಪ್ಪಣ್ಣರ ಬಡಾವಣೆಯ ಭಾವಚಿತ್ರ ಅನಾವರಣ ಮಾಡಿ ಮಾತನಾಡಿದರು.

ಒಬ್ಬ ಕಾರ್ಯದರ್ಶಿಯು ಯಾವ ರೀತಿ ಆ ಹುದ್ದೆಯನ್ನು ನಿಭಾಯಿಸಿಕೊಂಡು ಹೋಗಬೇಕೆಂಬುದಕ್ಕೆ ಹಡಪದ ಅಪ್ಪಣ್ಣರಿಗಿಂತ ಉದಾಹರಣೆ ಮತ್ತೊಂದಿಲ್ಲ. ಅವರ ಕಾಯಕ ನಿಷ್ಠೆಯೇ ಶ್ರೀರಕ್ಷೆಯಾಗಿ ಸಮಾಜಕ್ಕೆ ಬೆಳಕಾಗಿ, ದಮನಿತರ ದನಿಯಾಗಿ, ದಾರಿ ತಪ್ಪಿದ ಸಮಾಜವನ್ನು ಸರಿದಾರಿಯಲ್ಲಿ ನಡೆಸಿದರು.ಮೌಲಿಕ ಸಂದೇಶಗಳನ್ನು ಬಿತ್ತರಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದರು. ಸಂಸ್ಕೃತ ದಲ್ಲಿಯೂ ಸಹ ಅಪಾರ ಪಾಂಡಿತ್ಯವನ್ನು ಹೊಂದಿದ್ದರು ಎಂದು ಮಾತನಾಡಿದರು.

ಯುವ ಮುಖಂಡರಾದ ಹಾಲೇಶ ಕಂದಾರಿ ಮಾತನಾಡಿ, ನುಡಿದಂತೆ ನಡೆ ವಿಚಾರದಂತೆ ಆಚಾರ ಇವುಗಳಿಂದ ಕೂಡಿ ನಿಷ್ಠೆಯ ಕೆಚ್ಚಿನಿಂದ ಮೂಡಿಬಂದಿರುವ ಶರಣ ಅಪ್ಪಣ್ಣನವರ ವಚನಗಳು, ನಮ್ಮೇಲ್ಲರ ಬಾಳಿನ ಬೆಳಕಿಂಡಿಗಳಂತಿವೆ. ‘ಬಸವಪ್ರೀಯ ಕೂಡಲಸಂಗಯ್ಯ’ ಎಂಬ ಅಂಕಿತದಿಂದ ರಚಿತವಾದ ವಚನಗಳಲ್ಲಿ ಕಾಯಲನಿಷ್ಠೆ, ದಾಸೋಹ ನಿಷ್ಠೆ, ಭಕ್ತಿ, ಆಚಾರ- ವಿಚಾರ ಇತ್ಯಾದಿ ವಿಷಯಗಳನ್ನು ವೈಚಾರಿಕತೆಯ ನೆಲೆಯಲ್ಲಿ ವಿಡಂಬನಾತ್ಮಕವಾಗಿ ಬೆಡಗಿನ ಮೂಲಕ ಅರ್ಥಪೂರ್ಣವಾಗಿ ತಿಳಿಸಿದ್ದಾರೆ. ಹಡಪದ ಸಮಾಜದವರು ಕೊಡುಗೆ ಸಮಾಜಕ್ಕೆ ಅಪಾರವಾಗಿದೆ. ಕ್ಷೌರಿಕ ವೃತ್ತಿ ಇಲ್ಲದೆ ಹೋಗಿದ್ದರೆ ಜಗತ್ತು ಕೌರ್ಯದಿಂದ ಕೂಡಿರುತ್ತಿತ್ತು. ವಿಕಾರವಾಗಿರುವ ಮಾನವನಿಗೆ ಸುಂದರ ರೂಪ ಕೊಡುವದು ಹಡಪದ ಸಮಾಜದವರಿಂದ ಮಾತ್ರ ಸಾಧ್ಯ. ಕೀಳರಿಮೆ ಬಿಟ್ಟು ಸಮಾಜಸೇವೆ ಮಾಡುತ್ತಾ ನಂಬಿಕೆ ಉನ್ನತ ಹುದ್ದೆ ಅಲಂಕರಿಸಿದ ಹಡಪದ ಸಮಾಜದವರೇ ಆದ ಬಿಹಾರದ ಮಾಜಿ ಮುಖ್ಯಮಂತ್ರಿ ಕರ್ಪೂರಿ ಟಾಕೂರ್, ಕರ್ನಾಟಕದ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಹಾಗೂ ನಮ್ಮ ಭಾಗವದರೇ ಆದ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾದ ಅಶೋಕ ಗಸ್ತಿಯವರು ಕಾಯಕ ನಿಷ್ಠೆ ನಮಗೆ ಅನುಕರಣೀಯ ಎಂದು ಹೇಳಿದರು.

ನಗರಸಭೆಯ ಮಾಜಿ ಸದಸ್ಯರಾದ ವೈಜನಾಥ ದಿವಟರ್, ಜಾಕೀರಹುಸೇನ್ ಕಿಲ್ಲೆದಾರ, ಹಡಪದ ಸಮಾಜದ ಜಿಲ್ಲಾಧ್ಯಕ್ಷ ಮಂಜುನಾಥ ಹಂದ್ರಾಳ ಮಾತನಾಡಿದರು.

ದಿವ್ಯ ಸಾನಿಧ್ಯ ವಹಿಸಿದ ಷಟಸ್ಥಲ ಬ್ರಹ್ಮ ಶ್ರೀ ಆತ್ಮನಂದ ಭಾರತೀ ಸ್ವಾಮೀಗಳು, ಸಿದ್ದಾರೂಡ ಮಠ,ದದೇಗಲ್ ಆರ್ಶಿವಚನ ನೀಡಿದರು. ನಗರಸಭೆಯ ಸದಸ್ಯರಾದ ದೇವಕ್ಕ ಲಕ್ಷ್ಮಣ ಕಂದಾರಿ, ಸೋಮಣ್ಣ ಹಳ್ಳಿ, ಗೇಟ್ ನಂ 63ರ ಹೋರಾಟ ಸಮಿತಿ ಅಧ್ಯಕ್ಷರಾದ ಬಸವರಾಜ ಬನ್ನಿಕೊಪ್ಪ, ಮುಖಂಡರಾದ ನಿವೃತ್ತ ತಹಶೀಲ್ದಾರ ಸುಂಕಪ್ಪ ಅಮರಾಪುರ, ಶರಣಯ್ಯ ಹೀರೆಮಠ, ರಾಘವೇಂದ್ರ ನರಗುಂದ್, ದುರ್ಗೇಶಪ್ಪ ಹುರಿಗಜ್ಜಿ, ಹಡಪದ ಅಪ್ಪಣ್ಣ ಸಹಕಾರಿ ಬ್ಯಾಂಕನ ಅಧ್ಯಕ್ಷರಾದ ರಮೇಶ ಚಟ್ನಳ್ಳಿ, ಸಮಾಜದ ಹಿರಿಯರಾದ ಶರಣಪ್ಪ ದದೇಗಲ್, ಸವಿತಾ ಸಮಾಜದ ಅಧ್ಯಕ್ಷರಾದ ರವಿಕುಮಾರ ಸೂಗೂರ, ಮುಖಂಡರಾದ ಚಂದ್ರು ಬೆಣಕಲ್, ಶರಣಪ್ಪ ಇಟಗಿ,ನಿಂಗಪ್ಪ ಹಂದ್ರಾಳ, ಗುಡದಪ್ಪ ಕೊಳೋರು, ಕೊಟ್ರಪ್ಪ ಹೊಸಳ್ಳಿ, ಬಸವರಾಜ ದದೇಗಲ್, ಗಣೇಶ ಯುವಕ ಸಂಘದ ಬಾಲು ಕಾಮನೂರ, ಮಂಜುನಾಥ ಕೊಳೂರ, ಗಣೇಶ ಮಸಬಹಂಚಿನಾಳ ಮುಂತಾದವರು ಉಪಸ್ಥಿತರಿದ್ದರು.

Please follow and like us:
error