ಕರ್ನಾಟಕ ಲಲಿತಕಲಾ ಅಕಾಡೆಮಿಯ ವಾರ್ಷಿಕ ಪ್ರಶಸ್ತಿಗೆ ಭರತ್ ಕಂದಕೂರ್ ಆಯ್ಕೆ

Kannadanet News ಕರ್ನಾಟಕ ಲಲಿತಕಲಾ ಅಕಾಡೆಮಿಯ ವಾರ್ಷಿಕ ಪ್ರಶಸ್ತಿಗೆ ಕೊಪ್ಪಳದ ಪ್ರತಿಭಾವಂತ ಯುವ ಕ್ಯಾನರಾಮನ್ ಭರತ್ ಕಂದಕೂರ್ ಆಯ್ಕೆಯಾಗಿದ್ದಾರೆ.

ಕರ್ನಾಟಕ ಲಲಿತಕಲಾ ಅಕಾಡೆಮಿಯು 2020 ನೇ ಸಾಲಿನ ಗೌರವ ಪ್ರಶಸ್ತಿಗಾಗಿ 3 , ಶ್ರೇಷ್ಠಕಲಾವಿದರನ್ನು ಆಯ್ಕೆಮಾಡಲಾಗಿದೆ . ಪ್ರತಿಯೊಬ್ಬರೂ ತಮ್ಮ ಕಲಾಸಾಧನೆಯಲ್ಲಿ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಕಲಾಪ್ರದರ್ಶನಗಳಲ್ಲಿ ಸಾಧನೆಗೈದು ರಾಜ್ಯವನ್ನು ಪ್ರತಿನಿಧಿಸಿರುತ್ತಾರೆ . ಹಾಗೂ ಈ ಭಾರಿ ಸಾಂಪ್ರದಾಯಿಕ ಶೈಲಿಯಲ್ಲಿ ಸಾಧನೆ ಮಾಡಿರುವ ಒಬ್ಬ ಮಹಿಳಾ ಕಲಾವಿದರನ್ನು ಆಯ್ಕೆ ಮಾಡಿರುವುದು ವಿಶೇಷವಾಗಿದೆ . ಪ್ರಶಸ್ತಿ ಮೊತ್ತವು ತಲಾ ರೂ .50,000 / -ಗಳ ನಗದು ನೀಡಿ ಗೌರವಿಸಲಾಗುತ್ತಿದೆ . 49 ನೇ ವಾರ್ಷಿಕ ಕಲಾಬಹುಮಾನಕ್ಕೆ ಕಲಾಕೃತಿಗಳನ್ನು ಆಯ್ಕೆಮಾಡಿ ಅದರಲ್ಲಿ ಉತ್ತಮ 10 ಕಲಾಕೃತಿಗಳಿಗೆ ತಲಾ ರೂ . 25,000 / – ( ರೂಪಾಯಿ ಇಪ್ಪತ್ತೈದು ಸಾವಿರ ) ದಂತೆ 10 ಜನ ಕಲಾವಿದರನ್ನು ಆಯ್ಕೆಮಾಡಲಾಗಿರುತ್ತದೆ.

Please follow and like us:
error