ಕರ್ನಾಟಕ ರಾಜ್ಯ ಬಂದ್’ಗೆ ಕನ್ನಡ ಚಿತ್ರರಂಗ ಸಂಪೂರ್ಣ ಬೆಂಬಲ

ಕಾವೇರಿ ನೀರಿಗಾಗಿ ಇಡೀ ಚಿತ್ರರಂಗವೇ ಒಂದಾಗಿದೆ,ಆ ಸ್ಟಾರ್ ಬಂದಿಲ್ಲ ಈ ಸ್ಟಾರ್ ಬಂದಿಲ್ಲ ಎಂದು ದೂರುವುದು ಸರಿಯಲ್ಲ. ಶೂಟಿಂಗ್ ಅಥವಾ ಇನ್ಯಾವುದೋ ಕಾರಣಕ್ಕೆ ಅವರು ಇಲ್ಲಿ ಬರಲಾಗಿಲ್ಲ. ನಾವಿಲ್ಲಿ ಬಂದಿದ್ದೇವೆ, ಚಿತ್ರರಂಗದ ನಾವೆಲ್ಲರೂ ಒಂದೆಯೇ.

ನೀವೆಲ್ಲರೂ ಇಲ್ಲಿ ಬಂದಿರುವುದು ಜೈಕಾರ ಹಾಕುವುದಕ್ಕಲ್ಲ, ಕಾವೇರಿ ನೀರಿಗಾಗಿ ಹೋರಾಡಲು –  ಕಾವೇರಿ ನೀರಿಗಾಗಿ ನಡೆಸಿದ ಪ್ರತಿಭಟನಾ ಸಭೆಯಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್’ಕುಮಾರ್ ಖಾರವಾಗಿ ಹೇಳಿದ ಮಾತಿದು. ಜೈಕಾರ ಕೂಗಲು ಬೇರೆ ಸಭೆಯನ್ನು ಇಟ್ಟುಕೊಳ್ಳೋಣ. ನಾವಿಲ್ಲಿ ಕಾವೇರಿ ನೀರಿಗಾಗಿ ಹೋರಾಟ ಮಾಡಲು ಬಂದಿದ್ದೇವೆ ಎಂಬುದನ್ನು ಮರೆಯಬೇಡಿ ಎಂದು ಜನರಿಗೆ ಹೇಳಿದರು.

ಬೆಂಗಳೂರಿನಲ್ಲಿರುವ ಎಲ್ಲಾ ಭಾಷಿಕರೂ ಕಾವೇರಿ ನೀರಿಗಾಗಿ ಹೋರಾಟಕ್ಕಿಳಿಯಬೇಕು. ಇಲ್ಲಿರುವ ಕನ್ನಡಿಗರು, ತೆಲುಗರು, ತಮಿಳಿಗರೂ ಕಾವೇರಿ ನೀರನ್ನು ಕುಡಿಯುವುದರಿಂದ ಅವರು ಬೀದಿಗೆ ಬಂದು ಹೋರಾಟದಲ್ಲಿ ಪಾಲ್ಗೊಳ್ಳಬೇಕು ಎಂದು ಇದೇ ವೇಳೆ ಶಿವಣ್ಣ ಕರೆ ನೀಡಿದರು.

ಕಾವೇರಿ ನದಿಯು ಮಂಡ್ಯ, ಮಡಿಕೇರಿ, ಬೆಂಗಳೂರಿಗೆ ಸೇರಿದ್ದಲ್ಲ, ಇಡೀ ಕರ್ನಾಟಕಕ್ಕೆ ಸೇರಿದ್ದು ಎಂಬುದು ನೆನಪಿರಲಿ. ರಾಜ್ಯದ ಪ್ರತಿಯೊಬ್ಬನೂ ಕಾವೇರಿಗಾಗಿ star1 star ನಡೆಸಬೇಕು ಎಂದೂ ಶಿವಣ್ಣ ಕೇಳಿಕೊಂಡರು.

ಶಿವರಾಜ್’ಕುಮಾರ್ ಅವರಲ್ಲದೇ, ದರ್ಶನ್, ಹಂಸಲೇಖಾ, ಅನಿರುದ್ಧ್, ಸಾರಾ ಗೋವಿಂದು, ಶ್ರುತಿ,  ಭಾರತಿ ವಿಷ್ಣುವರ್ಧನ್, ಲೀಲಾವತಿ, ಶೃತಿ,  ಉಪೇಂದ್ರ, ದೇವರಾಜ್,ಶರಣ್,ಹಂಸಲೇಖ, ಸಾ.ರಾ. ಗೋವಿಂದು, ಶಶಿಕುಮಾರ್, ಥ್ರಿಲ್ಲರ್ ಮಂಜು, ಬಿ.ಸಿ.ಪಾಟೀಲ್, ಅನಿವೃದ್ಧ್, ಪ್ರಜ್ವಲ್ ದೇವರಾಜ್, ಅಜಯ್ ರಾವ್ ಮೊದಲಾದ ಸಿನಿಮಾ ಗಣ್ಯರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು. ಎಲ್ಲ ನಟರು ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ ಕರ್ನಾಟಕಕ್ಕೆ ನ್ಯಾಯ ಸಿಗುವವರೆಗೂ ಹೋರಾಟಕ್ಕೆ ಕೈಜೋಡಿಸುವುದಾಗಿ ತಿಳಿಸಿದ್ದಾರೆ. film

Please follow and like us:
error