ಕರೋನ ವಾರಿಯರ್ಸ್ ಗಳಿಗೆ ಋಣಿಯಾಗಿರೋಣ-ಸಿ.ವಿ ಚಂದ್ರಶೇಖರ

ಸ್ಯಾನಿಟೈಸರ್ ಬಳಸುವ ಸ್ಟಾಂಡ್ ವಿತರಣೆ
ಕೊಪ್ಪಳ :  ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ದೇಶದಾದ್ಯಂತ ಮಹಾಮಾರಿ ಕರೋನ ತಾಂಡವವಾಡುತ್ತಿದೆ, ದೇಶ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದೆ ಇದೆಲ್ಲದರ ಮದ್ಯೆ ದೇಶ ವಿರೋಧಿ ಶಕ್ತಿಗಳಾದ ಚೀನಾ, ಪಾಕಿಸ್ತಾನ ಗಡಿಗಳಲ್ಲಿ ಕಾಲು ಕೆರೆದು ಜಗಳಕ್ಕೆ ಬರುತ್ತಿದ್ದರು ಪ್ರಧಾನ ಮಂತ್ರಿ ನರೇಂದ್ರ ಮೋದಿಜೀ ಎಲ್ಲವನ್ನೂ ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ ಅವರ ಶ್ರಮಕ್ಕೆ ದೇಶದ ಜನತೆ ಕೈಜೋಡಿಸಿ ಬೆಂಬಲ ನೀಡಬೇಕಾಗಿದೆಎಂದು ರಾಷ್ಟ್ರೀಯ ಪರಿಷತ್ ಸದಸ್ಯ  ಸಿ.ವಿ ಚಂದ್ರಶೇಖರ ಹೇಳಿದರು

ರಾಜ್ಯದಲ್ಲೂ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ಕರೋನ ವಿರುದ್ಧದ ಹೋರಾಟಕ್ಕೆ ಕಟಿಬದ್ಧರಾಗಿ ಶ್ರಮಿಸುತ್ತಿದ್ದಾರೆ ಅದೇ ನಿಟ್ಟಿನಲ್ಲಿ ಕೊಪ್ಪಳ ಜಿಲ್ಲೆಯಲ್ಲೂ ಕೂಡ ನಾವುಗಳು ಈ ಕರೋನ ಮಹಾಮಾರಿಯ ವಿರುದ್ಧ ಹೋರಾಡಬೇಕಿದೆ ಸಾರ್ವಜನಿಕರು ಅನಾವಶ್ಯಕವಾಗಿ ಹೊರಗಡೆ ಓಡಾಡದೆ ಸಾಮಾಜಿಕ ಅಂತರವನ್ನು ಕಾಪಾಡುವ ಜೊತೆಗೆ ಕಡ್ಡಾಯವಾಗಿ ಮಾಸ್ಕ್ ಗಳನ್ನು ಧರಿಸಬೇಕಾಗಿದೆ ಹಾಗೂ ಕೊಪ್ಪಳ ನಗರದಲ್ಲಿ ಕರೋನ ಜಾಗೃತಿ ಮೂಡಿಸುವುದು ಅತ್ಯಂತ ಅವಶ್ಯವಿದ್ದು ಸುತ್ತಮುತ್ತಲಿನ ಗ್ರಾಮಗಳಿಂದ ನಗರಕ್ಕೆ ಬರುವ ಜನರಿಗೆ ಅಂಗಡಿ ಮಾಲೀಕರು, ವರ್ತಕರು, ಹೋಟಲ್, ಸಂಘ ಸಂಸ್ಥೆಯವರು ಸ್ವಯಂ ಪ್ರೇರಿತರಾಗಿ ಜಾಗೃತಿ ಮೂಡಿಸಬೇಕಾಗಿದೆ.
ಪ್ರಸ್ತುತ ಸರ್ಕಾರ, ಅಧಿಕಾರಿಗಳು,  ಪೊಲೀಸರು, ಆಶಾಕಾರ್ಯಕರ್ತೆಯರು, ಡಾಕ್ಟರ್ ಗಳು, ದಾದಿಗಳು, ಅಂಗನವಾಡಿ ಶಿಕ್ಷಕಿಯರು, ಮಾಧ್ಯಮ ಮಿತ್ರರು, ಇನ್ನೂ ಅನೇಕರು ಕರೋನ ವಾರಿಯರ್ಸ್ ಆಗಿ ನಮಗಾಗಿ ತಮ್ಮ ಜೀವದ ಹಂಗು ತೊರೆದು ಶ್ರಮಿಸುತ್ತಿದ್ದಾರೆ ಆದ್ದರಿಂದ ನಾವುಗಳು ಅವರಿಗೆ ಋಣಿಯಾಗಿರೋಣ ಹಾಗೂ ಅವರಿಗೆ ಸಹಕಾರ ನೀಡುವ ನಿಟ್ಟಿನಲ್ಲಿ ಇಂದಿನಿಂದ ನಗರದ ಎಲ್ಲಾ ಅಂಗಡಿ ಮುಂಗಟ್ಟುಗಳಲ್ಲಿ ಕಡ್ಡಾಯವಾಗಿ ಸ್ಯಾನಿಟೈಜರ್ ಬಳಕೆ ಮಾಡಲಿ ಜನರು ಸುರಕ್ಷಿತವಾಗಿರಲಿ ಎಂದು ಸ್ಯಾನಿಟೈಸರ್ ಮತ್ತು ಸ್ಟಾಂಡ್ ಗಳನ್ನು ವಿತರಣೆ ಮಾಡುತ್ತಿದ್ದೇವೆ ಇದರ ಉಪಯೋಗವನ್ನು ಎಲ್ಲರೂ ಪಡೆದುಕೊಳ್ಳುವಂತಾಗಲಿ, ಕರೋನಾ ತೊಲಗಲಿ ಎಲ್ಲರೂ ಆರೋಗ್ಯವಂತರಾಗಿರಲಿ ಎಂದು ದೇವರಲ್ಲಿ ಪಾರ್ಥಿಸುತ್ತೇನೆ ಎಂದರು.
ನಗರದಲ್ಲಿ ಮಹಾಮಾರಿ ಕರೋನವನ್ನು ತಡೆಗಟ್ಟುವ ನಿಟ್ಟಿನಲ್ಲಿ ಭಾರತೀಯ ಜನತಾ ಪಾರ್ಟಿ ವತಿಯಿಂದ ಬಿಜೆಪಿ ರಾಷ್ಟ್ರೀಯ ಪರಿಷತ್ ಸದಸ್ಯ  ಸಿ.ವಿ ಚಂದ್ರಶೇಖರ ಕೊಪ್ಪಳದ ಹೋಟೆಲ್ ಮತ್ತು ಅಂಗಡಿಗಳಿಗೆ ಸ್ಯಾನಿಟೈಸರ್ ಬಳಸುವ ಸ್ಟಾಂಡ್ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಡಾ.ಲಿಂಗರಾಜ್ ಶಿವರೆಡ್ಡಿ, ಡಾ. ಶ್ರೀನಿವಾಸ ಹ್ಯಾಟಿ, ಹಾಲೇಶ ಕಂದಾರಿ, ದೇವರಾಜ ಹಾಲಸಮುದ್ರ, ಅರವಿಂದ್ ಜೈನ್, ಉಮೇಶ ಕುರುಡೇಕರ್, ಪ್ರವೀಣ ಇಟಗಿ, ವೆಂಕಟೇಶ ಹವಳೇ, ಹನು ಕಲೆಗಾರ, ವಿಠ್ಠಲ ಕಟ್ಟಿಮನಿ, ಶಿವಕುಮಾರ ಹಿರೇಮಠ, ಮೆಹಬೂಬ್, ಲೋಕೇಶ, ಅಂಬರೀಶ, ಗವಿಸಿದ್ದಪ್ಪ ಗದಗಿನಮಠ, ರಂಗಪ್ಪ, ಅಕ್ಷಯ ಜ್ಞಾನಮೂರ್ತಿ ಸೇರಿದಂತೆ ಪಕ್ಷದ ಹಿರಿಯರು ಕಾರ್ಯಕರ್ತರು ಸಾರ್ವಜನಿಕರು ಉಪಸ್ಥಿತರಿದ್ದರು.
Please follow and like us:
error