ಕರೋನಾ ಸೋಂಕಿತರಿಗೆ ಚಿಕಿತ್ಸೆ ಸೌಲಭ್ಯ ನೀಡದ ಖಾಸಗಿ ಆಸ್ಪತ್ರೆಗಳ ಓಪಿಡಿ ಬಂದ್

ಕೊಪ್ಪಳ : ಕರೋನಾ ಸೋಂಕಿತರಿಗೆ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಹೊರಡಿಸಿದ್ದ ಆದೇಶಕ್ಕೆ ಯಾವುದೇ ಪ್ರತಿಕ್ರಿಯೆ ತೋರದ ಖಾಸಗಿ ಆಸ್ಪತ್ರೆಗಳನ್ನು ಸೀಲಡೌನ್ ಮಾಡಲಾಗಿದೆ. ಆಯಾ ಆಸ್ಪತ್ರೆಗಳಲ್ಲಿ ಓಪಿಡಿ ಬಂದ್ ಮಾಡಲಾಗಿದ್ದು ಎಮರ್ಜೆನ್ಸಿ ಚಿಕಿತ್ಸೆ ಮಾತ್ರ ಲಭ್ಯವಾಗಲಿದೆ. ಗಂಗಾವತಿ ನಗರದಲ್ಲಿ ಒಟ್ಟು ೧೪ ಆಸ್ಪತ್ರೆಯಲ್ಲಿ ಓಪಿಡಿ ಬಂದ್ ಮಾಡಲಾಗಿದೆ. ಎಂದು ಗಂಗಾವತಿ ತಹಶೀಲ್ದಾರ ಆರ್.ಕವಿತಾ ಹೇಳಿದ್ದಾರೆ.

ಕೋವಿಡ್ -19 ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು , ಮುಂಬರುವ ದಿನಗಳಲ್ಲಿ ಉಂಟಾಗಬಹುದಾದ ವಿಪತ್ತನ್ನು ನಿಭಾಯಿಸಲು ಉಲ್ಲೇಖಿತ ( 1 ) ರ ಆದೇಶದ ಮೂಲಕ AB – ArK ಯೋಜನೆಯ ಸೌಲಭ್ಯಗಳನ್ನು ಹೊಂದಿರುವ ಹಾಗೂ The Karnataka Private Mextical Establishments Act 2007 ಅಡಿಯಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ನೋಂದಣಿಯಾಗಿರುವ ವೈದ್ಯಕೀಯ ಸಂಸ್ಥೆಗಳನ್ನು ಗುರುತಿಸಲಾಗಿರುತ್ತದೆ . ಉಲ್ಲೇಖ ( 2 ) ರ ಮೂಲಕ ಕೊಪ್ಪಳ ಜಿಲ್ಲೆ ವ್ಯಾಪ್ತಿಯಲ್ಲಿ ಬರುವ ಖಾಸಗಿ ವೈದ್ಯಕೀಯ ಸಂಸ್ಥೆಗಳಲ್ಲಿ ಆಕ್ಸಿಜನ್ ಸೌಲಭ್ಯವಿರುವ , ಐ.ಸಿ.ಯು ಹಾಸಿಗೆಗಳು , ವೆಂಟಿಲೇಟರ್ ಲಭ್ಯವಿರುವ ಹಾಸಿಗೆಗಳು ಹಾಗೂ ಇತರ ಲಭ್ಯವಿರುವ ಹಾಸಿಗಳ ಶೇ . 50 ರಷ್ಟು ಹಾಸಿಗೆಗಳನ್ನು ಕೋವಿಡ್ ನಿರ್ವಹಣೆಗಾಗಿ ಮೀಸಲಿರಿಸಲು ಸಂಸ್ಥೆಯ ಮುಖ್ಯಸ್ಥರೊಡನೆ ದಿನಾಂಕ : 15-07-2020 ರಂದು ಸಭೆ ಜರುಗಿಸಿ ಕ್ರಮವಹಿಸಲು ನಿರ್ದೇಶನಗಳನ್ನು ನೀಡಲಾಗಿರುತ್ತದೆ . ಅಧ್ಯಕ್ಷರು , ಜಿಲ್ಲಾ ವಿಪತ್ತು ನಿರ್ವಹಣೆ ಪ್ರಾಧಿಕಾರ ಹಾಗೂ ಜಿಲ್ಲಾಧಿಕಾರಿಗಳು , ಕೊಪ್ಪಳ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು , ಜಿಲ್ಲಾ ಪಂಚಾಯತ್ , ಕೊಪ್ಪಳ ಇವರ ಸಮಕ್ಷಮದಲ್ಲಿ ಸಭೆಯನ್ನು ನಡೆಸಿ ಲಭ್ಯವಿರುವ ಸಾಮರ್ಥ್ಯತೆ ಹಾಸಿಗೆಗಳ ಪೈಕಿ ಶೇ . 50 ರಷ್ಟು ಹಾಸಿಗೆಗಳನ್ನು ಕೋವಿಡ್ ನಿರ್ವಹಣೆಗಾಗಿ ಮೀಸಲಿರಿಸಲು ಕ್ರಮ ಕೈಗೊಳ್ಳಲು ತಿಳಿಸಲಾಗಿರುತ್ತದೆ . ಸ್ಥಳದ ಅಭಾವವಿರುವ , ಸೂಕ್ತತೆ ಇಲ್ಲದಿರುವ ಸಂದರ್ಭದಲ್ಲಿ ಖಾಸಗಿ ವೈದ್ಯಕೀಯ ಸಂಸ್ಥೆಯವರು ಕೋವಿಡ್ ಹೆಲ್ತ್ ಸೆಂಟರ್ ಸ್ಥಾಪನೆಗಾಗಿ ಪರ್ಯಾಯವಾಗಿ ಮತ್ತು ಸೂಕ್ತವಾದ ಇತರೆ ವ್ಯವಸ್ಥೆಯನ್ನು ಕಲ್ಪಿಸಲು ತಿಳಿಸಲಾಗಿರುತ್ತದೆ . ಖಾಸಗಿ ಸಂಸ್ಥೆಗಳು ಎಲ್ಲರೂ ಒಟ್ಟಾಗಿ ಸೇರಿ ಕೇಂದ್ರೀಕೃತವಾಗಿ ಒಂದು ಲಭ್ಯವಿರುವ ಕಟ್ಟಡ ಗುರುತಿಸಿ ಕೋವಿಡ್ ಚಿಕಿತ್ಸೆ ಸೌಲಭ್ಯ ಕಲ್ಪಿಸಲು ತಿಳಿಸಲಾಗಿರುತ್ತದೆ . ಕೋವಿಡ್ ನಿರ್ವಹಣೆಗಾಗಿ ಕಟ್ಟಡ ಗುರುತಿಸಿ ಮೂಲಭೂತ ಸೌಲಭ್ಯವನ್ನು ಕಲ್ಪಿಸಿಕೊಡಲು ನಿರ್ದೇಶನಗಳನ್ನು ನೀಡಲಾಗಿರುತ್ತದೆ . ಆದಾಗ್ಯೂ ಸಹ ಖಾಸಗಿ ವೈದ್ಯಕೀಯ ಸಂಸ್ಥೆಯವರು ಸರ್ಕಾರದ ನಿರ್ದೇಶನದಂತೆ ಇಲ್ಲಿಯವರೆಗೂ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ . ಇದರಿಂದಾಗಿ The Karnataka Private Medical

Establishments Act 2007 , Spidemic Diseases Act 1897 & Disaster Management Act 2005 ನಿರ್ದೇಶನಗಳನ್ನು ನಿರ್ಲಕ್ಷಿಸಿ ಉದಾಸೀನತೆ ತೋರಿರುವುದು ತುಂಬಾ ವಿಷಾದನೀಯವಾಗಿರುತ್ತದೆ . The Karnataka Private Medical Establishments Act 2007 tuo 8 , 11 , 11 – w & Disaster Management Act 2005 ಹಾಗೂ ಸರ್ಕಾರದ ನಿರ್ದೇಶನಗಳನ್ನು ಉಲ್ಲಂಘನೆ ಮಾಡಿರುವುದು ಕಂಡುಬಂದಿರುತ್ತದೆ . ಸರ್ಕಾರದ ನಿರ್ದೇಶನವನ್ನು ಪಾಲಿಸಲು ವಿಫಲರಾಗಿರುವುದರಿಂದ ಕೊಪ್ಪಳ ಜಿಲ್ಲೆಯ ಕೊಪ್ಪಳ ಹಾಗೂ ಗಂಗಾವತಿ ನಗರಗಳಲ್ಲಿ ಇರುವ ಖಾಸಗಿ ವೈದ್ಯಕೀಯ ಚಿಕಿತ್ಸೆ ಸಂಸ್ಥೆಗಳ ವಿರುದ್ಧ ಶಿಸ್ತು ಕ್ರಮ ಜರುಗಿಸುವುದು ಅವಶ್ಯಕತೆ ಕಂಡುಬಂದಿರುತ್ತದೆ . ಪ್ರಯುಕ್ತ ಈ ಕೆಳಗಿನಂತೆ ಆದೇಶ . :: ಆದೇಶ : ಸಂಖ್ಯೆ : ಕಂದಾಯ / ಕೋವಿಡ್ -19 / 01 / 2020-21 ದಿನಾಂಕ : / 07 / 2020 . ** ಪ್ರಸ್ತಾವನೆಯಲ್ಲಿ ವಿವರಿಸಿದ ಅಂಶಗಳನ್ನು ಪರಿಗಣಿಸಿ , ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ 2005 ರ ಕಲಂ 30 , 33 , ಹಾಗೂ 34 ರಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಕೂಡಲೇ ಜಾರಿಗೆ ಬರುವಂತೆ ಕೊಪ್ಪಳ ಜಿಲ್ಲೆಯ ಕೊಪ್ಪಳ ಹಾಗೂ ಗಂಗಾವತಿ ತಾಲ್ಲೂಕಿನ ಅನುಬಂಧ -1 ರಲ್ಲಿ ನಮೂದಿಸಿರುವ ಖಾಸಗಿ ವೈದ್ಯಕೀಯ ಸಂಸ್ಥೆಗಳು ದಿನಾಂಕ : 02-08-2020ರ ಬೆಳಿಗ್ಗೆ 08-00 ಗಂಟೆ ಒಳಗಾಗಿ ಆಸ್ಪತ್ರೆಯ ಸಾಮರ್ಥಿತ ಹಾಸಿಗೆಯಲ್ಲಿ ಶೇ . 50 ರಷ್ಟು ಕೋವಿಡ್ ಚಿಕಿತ್ಸೆಗಾಗಿ ಅವಕಾಶ ಕಲ್ಪಿಸತಕ್ಕದ್ದು ಮತ್ತು ಸೌಲಭ್ಯ ಕಲ್ಪಿಸಲು ಅಗತ್ಯವಿರುವ ಕಟ್ಟಡಗಳಲ್ಲಿ ಪರ್ಯಾಯ ವ್ಯವಸ್ಥೆ ಮಾಡಲು ಕ್ರಮ ಕೈಗೊಳ್ಳತಕ್ಕದ್ದು , ಸದರಿ ಅಂಶಗಳನ್ನು ಕಾಲಮಿತಿ ಒಳಗೆ ಅನುಪಾಲಿಸಿ ಸೌಲಭ್ಯ ಕಲ್ಪಿಸಲು ಆಸಕ್ತಿ ತೋರದೇ ಶೀಘ್ರವಾಗಿ ಕ್ರಮ ಕೈಗೊಳ್ಳದೇ ಇದ್ದಲ್ಲಿ ಹೊರ ರೋಗಿಗಳ ಚಿಕಿತ್ಸೆ ಸ್ಥಗಿತಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದರೂ ಉದಾಸೀನ ತೋರಿದ ಹಿನ್ನೆಲೆ ಆಸ್ಪತ್ರೆಗಳನ್ನು ಸೀಲಡೌನ್ ಮಾಡಲಾಗಿದೆ.

Please follow and like us:
error