ಕರೋನಾ ವಿರುದ್ದ ಹೋರಾಟದಲ್ಲಿ ಜಿಲ್ಲಾಡಳಿತದ ಜೊತೆ ಪತ್ರಕರ್ತರು ಕೈಜೋಡಿಸಿ- ಡಿಸಿ ಎಸ್.ವಿಕಾಸ್ ಕಿಶೋರ್

ಜಿಲ್ಲೆಯ ಪ್ರಮುಖ ಸಮಸ್ಯೆಗಳ ಪರಿಹಾರಕ್ಕೆ ಪತ್ರಕರ್ತರ ಸಹಕಾರ ಅಗತ್ಯ

ಕೊಪ್ಪಳ : ಇಂದಿನ ಕರೋನಾ ಕಾಲದಲ್ಲಿ ಕರೋನಾ ವಿರುದ್ದ ಹೋರಾಟದಲ್ಲಿ ಜಿಲ್ಲಾಡಳಿತದ ಜೊತೆ ಪತ್ರಕರ್ತರು ಕೈಜೋಡಿಸಬೇಕಿದೆ. ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವುದರ ಜೊತೆಗೆ ಸಮಸ್ಯೆಗಳೇ ಸೃಷ್ಟಿಯಾಗದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಸ್.ವಿಶಾಲ್ ಕಿಶೋರ್ ಹೇಳಿದರು ಇತ್ತೀಚಿನ ದಿನಗಳಲ್ಲಿ ಸಕಾರಾತ್ಮಕ ವರದಿಗಳು ಕ್ಷೀಣಿಸುತ್ತಿವೆ ವಿಷಾದದ ಸಂಗತಿ ಎಂದರು. ನಗರದ ನೌಕರ ಭವನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕ ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು . ಜಿಲ್ಲೆಯ ಪ್ರಮುಖ ಸಮಸ್ಯೆಗಳ ಪರಿಹರಿಸುವಲ್ಲಿ ಸಕಾರಾತ್ಮಕ ವರದಿಗಳ ಅವಶ್ಯಕತೆ ಇದೆ . ಸಕಾರಾತ್ಮಕ ವರದಿಗಳಿಗೆ ಹೆಚ್ಚಿನ ಒತ್ತು ನೀಡುವಂತೆ ಜಿಲ್ಲಾಧಿಕಾರಿಗಳು ಸಲಹೆ ನೀಡಿದರು . ಕೊರೋನಾ ವೈರಸ್ ನಿಯಂತ್ರಣಕ್ಕೆ ಸಮುದಾಯದ ಸಹಕಾರ ಅಗತ್ಯವಿದೆ . ಅದರ ಅಷ್ಟೇ ಮಾಧ್ಯಮಗಳ ಸಹಕಾರ ಬಹಳಷ್ಟು ಮುಖ್ಯವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು . ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ , ಸಮಾಜದಲ್ಲಿ ಹೆಮ್ಮೆಯ ಪಡುವ ಹುದ್ದೆ ಅಂದರೆ , ಪತ್ರಕರ್ತರ ಹುದ್ದೆ ಆಗಿರುತ್ತದೆ . ಬಹಳಷ್ಟು ಪ್ರಾಮುಖ್ಯತೆ ಹಾಗೂ ಘನತೆ ಹೊಂದಿರುವ ಮಹತ್ವದ ಪತ್ರಕರ್ತರ ಹುದ್ದೆಯನ್ನು ನಿಭಾಯಿಸುವುದು ನಮ್ಮ ಹೆಮ್ಮೆಯ ಸಂಗತಿ ಎಂದರು . ಪತ್ರಕರ್ತರಾದವರು ನೊಂದವರ ಧ್ವನಿಯಾಗಬೇಕು ಎಂದು ಸೇರಿದ್ದ ಪತ್ರಕರ್ತರಲ್ಲಿ ಮನವಿ ಮಾಡಿಕೊಂಡು , ಪತ್ರಕರ್ತರ ಸೌಲಭ್ಯಗಳ ಕುರಿತು ಮಾತನಾಡಿದರು . ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ. ಲೋಕೇಶ್ ಹಾಗೂ ಜಿಲ್ಲಾ ವಾರ್ತಾಧಿಕಾರಿ ಜಿ.ಸುರೇಶ ಮಾತನಾಡಿದರು . ಜಿಲ್ಲಾಧ್ಯಕ್ಷ ಸಾಧಿಕ್ ಅಲಿ ಸ್ವಾಗತಿಸಿದರು , ಸಂಘದ ರಾಜ್ಯ ಉಪಾಧ್ಯಕ್ಷ ಸಂಜೀವ ಕುಲಕರ್ಣಿ , ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಎನ್.ಎಂ.ದೊಡ್ಡಮನಿ , ಹಿರಿಯ ಪತ್ರಕರ್ತರಾದ ಹರೀಶ್ , ಜಿ.ಎಸ್.ಗೋನಾಳ , ಸಿರಾಜ್ ಬಿಸರಳ್ಳಿ , ಬಸವರಾಜ ಗುಡ್ಡಾನೂರು , ನಾಗರಾಜ , ರಾಜಾಬಕ್ಷಿ , ಮೌಲಾಹುಸೇನ್ ಬುಲ್ಲಿಯಾರ್ , ಮಂಜುನಾಥ ಗೊಂಡಬಾಳ , ರಾಘವೇಂದ್ರ ಅರಕೇರಿ , ರುದ್ರಪ್ಪ ಭಂಡಾರಿ , ಡಾ.ಫಕೀರಪ್ಪ , ಶಿವರಾಜ ನುಗಡೋಣಿ , ಮಲ್ಲೇಶ ಪರ್ವತಿ , ರಾಜಾಸಾಬ್ , ಹನುಮಂತ ಹಳ್ಳಿಕೇರಿ , ಶಿವಕುಮಾರ ಹಿರೇಮಠ , ರವಿಕುಮಾರ ನಾಯಕ , ಇಮಾಮ್ ಹಾಗೂ ರವಿಚಂದ್ರ ಸೇರಿದಂತೆ ಇನ್ನಿತರರಿದ್ದರು . –

Please follow and like us:
error