ಕರೋನಾ ವಾರಿಯರ್ಸ್ ಗಳಿಗೆ ಪಾಜಿಟಿವ್: ಸೌಲಭ್ಯ ಒದಗಿಸಲು ಆಗ್ರಹ, ಪ್ರತಿಭಟನೆ

Koppal , ಗ್ರೂಪ್ ಸಿ ಮತ್ತು ಗ್ರೂಪ್ ಡಿ ನೌಕರರಿಗೆ ಪಾಜಿಟಿವ್ ಬಂದರೂ ಕೇಳುವವರಿಲ್ಲ !

ಕೊಪ್ಪಳ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಸರಿಸುಮಾರು ಕಳೆದ 05 ತಿಂಗಳಿನಿಂದ ಹಲವಾರು ಸಿ – ವೃಂದದ ಸಿಬ್ಬಂದಿಗಳು ನಿಯೋಜಿಸಿದ ವಿವಿಧ ವಿಭಾಗಗಳಲ್ಲಿ ಅತ್ಯಂತ ಅಚ್ಚುಕಟ್ಟಾಗಿ ಮತ್ತು ನಿಯಮ – ಕ್ರಮಬದ್ಧವಾಗಿ ಕರ್ತವ್ಯನಿರ್ವಹಿಸುತ್ತಾ ಬಂದಿದ್ದು , ನಮ್ಮೆಲ್ಲರಿಗೂ ಕರ್ತವ್ಯದಲ್ಲಿ ನಮ್ಮದೆ ಆದ ಅನೇಕ ವಿವಿದ ತೊಂದರೆಗಳಿದ್ದು , ಆ ತೊಂದರೆಗಳನ್ನು ಪರಿಹರಿಸುವಂತೆ ನಮಗಿರುವ ತೊಂದರೆಗಳನ್ನು ಈ ಕೆಳಗಿನಂತೆ ವಿವರಿಸಲಾಗಿದೆ . 01 ) ಕೊವಿಡ್ -19 ವಿಭಾಗ ಮತ್ತು ಜಿಲ್ಲಾ ಬೋಧಕ ಆಸ್ಪತ್ರೆಯಲ್ಲಿ ಕರ್ತವ್ಯ ನಿರತ ಸಿಬ್ಬಂದಿಗಳಿಗೆ ಪ್ರಾಥಮಿಕ ಮೂಲಭೂತ ಸೌಕರ್ಯಗಳಾದ ಎನ್‌95 ಮಾಸ್ಕ್ , ಗೌಸ್‌ , ಪಿಪಿ ಕಿಟ್ , ಸ್ಯಾನಿಟೈಸರ್ ಮತ್ತು ಹ್ಯಾಂಡ್ ವಾಶ್‌ನ್ನು ಸಮಯಕ್ಕೆ ಹಾಗೂ ಸರಿಯಾದ ಪ್ರಮಾಣದಲ್ಲಿ ಪೂರೈಕೆಯಾಗದೆಯಿರುವುದರಿಂದ ತುಂಬಾ ತೊಂದರೆಯಾಗುತ್ತಿದ್ದು , ನಮ್ಮ ಸ್ವಂತ ಖರ್ಚಿನಲ್ಲಿ ಎನ್‌95 ಮಾಸ್ಕ್ , ಗೌಸ್ , ಸ್ಯಾನಿಟೈಸರ್‌ ಮತ್ತು ಹ್ಯಾಂಡ್ ವಾಶ್‌ಗಳನ್ನು ಖರೀದಿಸಿ ಬಳಕೆ ಮಾಡಲಾಗುತ್ತಿದೆ . ಕಾರಣ ಸಮರ್ಪಕ ಪೂರೈಕೆಯಾಗದಿರುವುದು ಇದಕ್ಕೆ ಮುಖ್ಯ ಕಾರಣವಾಗಿದೆ . 02 ) ಕೊವಿಡ್ -19 ವಿಷಮ ಪರಿಸ್ಥಿತಿಯಲ್ಲಿ ಅತ್ಯವಸರವಾಗಿ 24*7ಕಾಲಾವದಿಯಲ್ಲಿ ಕರ್ತವ್ಯ ನಿರ್ವಹಿಸುವುದು ಕಡ್ಡಾಯವಾಗಿದ್ದು , ಈ ಬಗ್ಗೆ ನಮಗೆ ಕಾರ್ಯನಿರ್ವಹಿಸಲು ಯಾವುದೇ ಆಕ್ಷೇಪಣೆ ಇರುವುದಿಲ್ಲ ಆದರ ಕರ್ತವ್ಯ ವೇಳಾಪಟ್ಟಿ ಸಾಯಂಕಾಲ ಅವಧಿ 05:00 ರಿಂದ ರಾತ್ರಿ 01 : 00 ಗಂಟೆಯವರೆಗೆ ಅಂದರೆ 06 ಗಂಟೆಗಳ ಕಾಲ ನಿಯೋಜಿಸಿದ್ದು , ಸದರಿ ಸಂಸ್ಥೆಯು ನಗರದಿಂದ 05 ಕೀ.ಮಿ ದೂರವಿರುವುದರಿಂದ ಆ ಸಮಯದಲ್ಲಿ ಮಹಿಳೆಯರಿಗೆ ಕೆಲಸ ಮುಗಿಸಿ ಮನೆಗೆ ತೆರಳಲು ಯಾವುದೇ ವಾಹನ ಹಾಗೂ ಆಟೋ ವ್ಯವಸ್ಥೆ ಇರುವುದಿಲ್ಲ ಇದು ಕೂಡಾ ಸಿಬ್ಬಂದಿಗಳಿಗೆ ತುಂಬಾ ತೊಂದರೆದಾಯಕವಾಗಿದ . 03 ) ಈ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳು ಬೇರೆ ಬೇರೆ ಗ್ರಾಮೀಣ ಪ್ರದೇಶದವರಾಗಿದ್ದು , ನಗರದಲ್ಲಿ ಬಾಡಿಗೆ ಮನೆ ಹಾಗೂ ಕುಟುಂಬ ಹೊಂದಿದ ಹಾಗೂ ಹಲವು ಕೌಂಟುಬೀಕ ಜವಾಬ್ದಾರಿಯನ್ನು ನಿರ್ವಹಿಸುತ್ತಾ ಹಲವಾರು ಸಿಬ್ಬಂದಿಗಳು ಕೋವಿಡ್ -19 ಅತ್ಯವಸರ ಪರಿಸ್ಥಿತಿಯಲ್ಲಿ ವಿವಿಧ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು , ಮುಂಜಾಗ್ರತವಾಗಿ ಅವರ ಕುಂಟುಂಬದಿಂದ ಅಂತರ ಕಾಪಾಡಲು ಹಾಗೂ ಅವರ ಆರೋಗ್ಯ ಹಿತದೃಷ್ಟಿಯಿಂದ ಕರ್ತವ್ಯನಿರತ ಸಿಬ್ಬಂದಿಗಳಿಗೆ ಪ್ರತ್ಯೇಕ ವಸತಿ ಇಲ್ಲದಿರುವುದು ತೊಂದರೆಯಾಗುತ್ತಿದ್ದು , ಬಾಡಿಗೆಯಿರುವ ಹಲವು ಸಿಬ್ಬಂದಿಗಳು ಕೋವಿಡ್ -19 ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವುದರಿಂದ ಬಾಡಿಗೆ ಮನೆಯ ಮಾಲಿಕರು ಮನೆಯನ್ನು ಬಿಡುವಂತೆ ಒತ್ತಾಯ ಮಾಡುತ್ತಿದ್ದಾರೆ . ನಮ್ಮ ವೈಯಕ್ತಿಕ ಮತ್ತು ಕೌಟುಂಬಿಕ ಸಮಸ್ಯೆಯಾಗಿದ್ದು , ಕೋವಿಡ್ -19 ಕರ್ತವ್ಯ ಅವಧಿ ಪೂರ್ಣಗೊಳ್ಳುವವರೆಗಾದರೂ ನಮಗೆ ಉಳಿದುಕೊಳ್ಳುಲು ಸೂಕ್ತವಾದ ವಸತಿ ವ್ಯವಸ್ಥೆಯನ್ನು ಮಾಡಿಕೊಡುವಂತೆ ಈ ಮೂಲಕ ಕೋರಲಾಗಿದೆ . ( ನಮ್ಮ ಸಂಸ್ಥೆಯ ಸಿಬ್ಬಂದಿಗಳಾದ ಶುಕ್ರೂಷಕರು ಮತ್ತು ಗ್ರೂಪ್ “ ಡಿ ” ಸಿಬ್ಬಂದಿಗಳಿಗೆ ಕ್ವಾರಂಟೈನ್ ವ್ಯವಸ್ಥೆಯನ್ನು ಸಂಸ್ಥೆಯೇ ಮಾಡಿದ ಮಾದರಿಯಂತ ನಮಗೂ ಒದಗಿಸಲು ಕೋರುತ್ತೇವೆ . ) ಇದು 04 ) ಮಾನ್ಯ ಸರ್ಕಾರದ ಆದೇಶದಂತೆ , ( ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ) ಕೋವಿಡ್ -19 ವಿಭಾಗದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳು ವಾರದಲ್ಲಿ 07 , ದಿನಗಳು ದಿನಕ್ಕೆ 48 ತಾಸುಗಳ ಕರ್ತವ್ಯ ನಿರ್ವಹಿಸಿದರೆ 04 ದಿನ ರಜೆ ತೆಗೆದುಕೊಳ್ಳುವಂತೆ ಆದೇಶವಿದ್ದರೂ ಸಹ ಒಂದು ಭಾರಿಯಾದರೂ ಸಹ ಈ ನಿಯಮ ನಮಗೆ ಅನ್ವಯಿಸಿರುವುದಿಲ್ಲ ಹಾಗೂ ಪಾಲನೆ ಆಗಿರುವುದಿಲ್ಲ .

05 ) ಇವಲ್ಲಾ ತೊಂದರೆಗಳ ನಡುವೆಯೂ ಸಹ ನಾವುಗಳು ಕರ್ತವ್ಯನಿರ್ವಹಿಸುತ್ತಿದ್ದು , ನಮ್ಮ ಸಿಬ್ಬಂದಿಗಳಾದ ಪ್ರಯೋಗ ಶಾಲಾ ನೀಡಲು ತುಂಬಾ ವಿಳಂಬ ನೀತಿಯನ್ನು ಅನುಸರಿಸಲಾಗುತ್ತಿದೆ , ಯಾವ ಸಿಬ್ಬಂದಿಗೂ ಸರಿಯಾದ ರೀತಿಯಲ್ಲಿ ಇದಿಯುತ್ತಿಲ್ಲ ಮುಂದುವರೆದು ಕೆಲವರು ಕೋಮಿಡ್ ಪ್ರಾಥಮಿಕ ಸಂಪರ್ಕ ಹೊಂದಿದ ಸಿಬ್ಬಂದಿಗಳಿದ್ದು , ಅವರಿಗೆ ಕ್ಯಾಲೆಂಟೈನ್ ವ್ಯವಸ್ಥೆ ನೀಡದೆ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸುತ್ತಿದ್ದಾರೆ , ತಂತ್ರಜ್ಞರು ಮತ್ತು ಗ್ರೂಪ್ ಸಿಬ್ಬಂದಿಗಳಾದ ಒಟ್ಟು 05 ಜನರಿಗೆ ಕೋವಿಡ ಪಾಸಿಟಿವ್ ಬಂದಿದ್ದು , ಅವರಿಗೆ ( 06 ) ಇಲ್ಲಿ ಕಾರ್ಯನಿರ್ವಹಿಸುತ್ತಿರುವ ಹಲವರು ಸಿಬ್ಬಂದಿಗಳು ಬಡ ಕುಟುಂಬದವರು ಹಾಗೂ ತುಂಬಾ ಕೆಟ್ಟ ಆರ್ಥಿಕ ಪರಿಸ್ಟಿಯನ್ನು ಹೊಂದಿದ್ದಾರೆ . ಹಾಗೂ ನಮ್ಮ ವೇತನವ ‘ ನಮ್ಮ ಕುಟುಂಬದ ಆಧಾರವಾಗಿದ್ದು , ಸರಿಯಾದ ಸಮಯಕ್ಕೆ ನಮಗೆ ವೇತನವನ್ನು ನೀಡದೆ ಇರುವುದರಿಂದ ಜೀವನ ಸಾಗಿಸಲು ತೊಂದರೆಯಾಗುತ್ತಿದೆ . 07 ) ಗ್ರೂಪ್ “ ಸಿ ” ಸಿಬ್ಬಂದಿಗಳಿಗೆ 2018-19 ನೇ ಸಾಲಿನಲ್ಲಿ ವೇತನ ಹೆಚ್ಚಳವಾಗಿದ್ದು , ಡಿ.ಇ.ಓ ಸಿಬ್ಬಂದಿಗೆ ಹೆಚ್ಚುವರಿ ವೇತನವನ್ನು ನೀಡಿದ್ದು ಪ್ರಯೋಗಾ ಶಾಲಾ ಹಾಗೂ ವಿವಿಧ ವಿಭಾಗದ ಸಿಬ್ಬಂದಿಗಳಿಗೆ ಇದುವರೆಗೂ ಯಾವುದೇ ರೀತಿಯ ಹೆಚ್ಚುವರಿ ವೇತನವನ್ನು ಇದುವರೆಗೂ ನೀಡಿರುವುದಿಲ್ಲ . ಸದರಿ ಮೇಲಿನ ಎಲ್ಲಾ ನಮ್ಮ ಬೇಡಿಕೆ ಹಾಳೆ ‘ ಸಮಸ್ಯೆಗಳಿಗೆ ನಿಮ್ಮ ಕಡೆಯಿಂದ ಯಾವುದೇ ಸ್ಪಂದನೆಯು ಬಾರದ ದೊರೆಯದೆ ಇದ್ದಾರೆ ನಮ್ಮ ಕಡೆಯಿಂದ ಮುಷ್ಕರವನ್ನು ಕರೆ ನೀಡಲಾಗುವುದು .

Please follow and like us:
error