ಕರೋನಾ ವಾರಿಯರ್ಸ್ಗಳಿಗೆ ಆತ್ಮಸ್ಥೈರ್ಯ ಹೆಚ್ಚಿಸಲು ವೈದ್ಯರು,ಸಿಬ್ಬಂದಿಗಳ ಭರ್ಜರಿ ಡ್ಯಾನ್ಸ್

ಬಳ್ಳಾರಿ- ಗಣಿನಾಡು ಬಳ್ಳಾರಿಯಲ್ಲಿ ಕೊರೋನಾ ವಾರಿಯರ್ಸ್ ಭರ್ಜರಿ ಸ್ಟೇಪ್ಸ್ ಹಾಕಿದ್ದಾರೆ. ವೈದ್ಯರು, ಮತ್ತು ಸಿಬ್ಬಂದಿಗಳಿಗೆ ಪಾಸಿಟಿವ್ ಬಂದಿರೋ ವಾರ್ಡ್ ನಲ್ಲಿ ಆತ್ಮಸ್ಥೈರ್ಯ, ಮನೋಸ್ಥೈರ್ಯ ಹೆಚ್ವಿಸಲು ಭರ್ಜರಿ ಡ್ಯಾನ್ಸ್ ಮಾಡಿದ್ದಾರೆ. ವೈದ್ಯರು ಮತ್ತು ಸಿಬ್ಬಂದಿ ಡೆಂಟಲ್ ಕಾಲೇಜ್ ನಲ್ಲಿ ಡ್ಯಾನ್ಸ್ ಮಾಡಿದರು. ಕೊರೋನಾದ ಮಾನಸಿಕ ಒತ್ತಡದಿಂದ ಹೊರ ಬರಲು ಈ ತಂತ್ರ ರೂಪಿಸಲಾಗಿದೆ. ವೈದ್ಯರಾದ ಗೀತಾ, ರಾಘವೇಂದ್ರ ನೇತೃತ್ವದಲ್ಲಿ ಸಖತ್ ಸ್ಟೇಪ್ಸ್ ಹಾಕಳಾಯಿತು. ಇತ್ತೀಚಿಗೆ ಇದೇ ಕಾಲೇಜ್ ನಲ್ಲಿ ಯೋಗ ಕೂಡ ಕಲಿಸಲಾಗಿತ್ತು. ಕಂಪ್ಲಿಯ ಪುರಸಭೆ ಸದಸ್ಯ ಚಾಂದ್ ಬಾಷಾ ಯೋಗ ಕಲಿಸಿದ್ರು. ಈಗ ವೈದ್ಯರಿಂದ ಭರ್ಜರಿ ನೃತ್ಯ ಪಾಠ- ಕೊರೋನಾ ವಾರಿಯರ್ಸ್ ಫುಲ್ ಖುಷ್ ಆಗಿದ್ದಾರೆ. ಕೊರೋನಾಗೆ ಚಿಕಿತ್ಸೆ ನೀಡಲು ಕರ್ತವ್ಯ ನಿರ್ವಹಣೆಯ ಸಮಯದಲ್ಲಿ ಕೊರೋನಾ ಅಟ್ಯಾಕ್ ಆದ ಸಿಬ್ಬಂದಿಗಳನ್ನು ಈ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Please follow and like us:
error