ಕರೋನಾ ರೋಗಿಗಳಿಗೆ ತುರ್ತು ಚಿಕಿತ್ಸೆಗಾಗಿ ಆಗ್ರಹಿಸಿ : ಸಲೀಂ ಅಳವಂಡಿ ಯಿಂದ ದಿಡೀರ್ ಪ್ರತಿಭಟನೆ


Kannadanet NEWS
ಕೊವಿಡ್ -19 ಪರಿಕ್ಷೆಗೆ ಬಂದ ರೋಗಿಗಳಿಗೆ ಸೂಕ್ತ ವ್ಯವಸ್ಥೆ ಇಲ್ಲದೆ ಪರದಾಡುತಿದ್ದು ಹಾಗೂ ಅವರಿಗೆ ಆಕ್ಸಿಜನ್ ಬೆಡ್ ಇಲ್ಲದಿರುವುದರಿಂದ ಅನೇಕ ರೋಗಿಗಳು ಪರಿಕ್ಷಾ ಸ್ಥಳದಲ್ಲೆ ಸಾವನ್ನಪ್ಪುತ್ತಿದ್ದಾರೆ ಇಂದು ಕೂಡ ಎರಡು ರೋಗಿಗಳು ಬೆಡ್ ನೀಡದ್ದರಿಂದ ವಾಹನದಲ್ಲೆ ಸಾವನ್ನಪ್ಪಿದ್ದಾರೆ ಕೂಡಲೆ ಜಿಲ್ಲಾಧಿಕಾರಿಗಳು ಹಾಗೂ ವೈದ್ಯಕೀಯ ಅಧಿಕಾರಿಗಳು ವ್ಯವಸ್ಥೆಯನ್ನು ಕಲ್ಪಿಸಬೇಕು ಎಂದು ಆಗ್ರಹಿಸಿ ಜಿಲ್ಲಾಡಳಿತ ಭವನದ ಮುಂದೆ ಪ್ರತಿಭಟನೆಯನ್ನು ಮಾಡಿ ನಂತರ ಜಿಲ್ಲಾಧಿಕಾರಿಗಳನ್ನು ಭೇಟಿಮಾಡಿ ಕೊವಿಡ್-19 ಕೇಂದ್ರದಲ್ಲಿನ ಸಮರ್ಪಕ ಅನುಕೂಲ ಹಾಗೂ ಕರ್ತವ್ಯಲೋಪ ದಿಂದಾಗಿ ದಿನದಿಂದ ದಿನಕ್ಕೆ ಸಾವಿನ ಸಂಖ್ಯೆ ಹೆಚ್ಚಾಗುತ್ತಿದ್ದು ಕೂಡಲೆ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ತಿಳಿಸಿದರು.
ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಈ ಕೂಡಲೆ ಸೂಕ್ತ ಕ್ರಮಗಳನ್ನು ಕೈಗಳ್ಳುವಂತೆ ಸಂಬಧಿಸಿದ ಅಧಿಕಾರಿಗಳನ್ನು ಸೂಚಿಸುವುದಾಗಿ ಭರವಸೆಯನ್ನು ನೀಡಿದರು.

Please follow and like us:
error