ಕರೋನಾದಿಂದ ಸಾವು, ಸಂಬಂದಿಕರಿಂದ ವೈದ್ಯರ ಮೇಲೆ ಹಲ್ಲೆ : ವೈದ್ಯರ ಪ್ರತಿಭಟನೆ

Koppal ಕೋವಿಡ್-19 ಸೋಂಕಿನಿಂದ ಚಿಕಿತ್ಸೆ ಪಡೆಯುತ್ತಿದ್ದ ಪೊಲೀಸ್ ಕಾನ್ಸಟೇಬಲ್ ಸಾವನ್ನಪ್ಪಿದ್ದು, ಘಟನೆಗೆ ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯವೇ ಕಾರಣ ಎಂದು ಮೃತ ಪೊಲೀಸ್ ಕಾನ್ಸಟೇಬಲ್ ಸಂಬಂಧಿಕರು ಕರ್ತವ್ಯನಿರತ ವೈದ್ಯರೊಬ್ಬರ ಮೇಲೆ ಹಲ್ಲೆ ನಡೆಸಿದ್ದು, ಇದಕ್ಕೆ ಪ್ರತಿಯಾಗಿ ಆಸ್ಪತ್ರೆಯ ಸಿಬ್ಬಂದಿ ರಾತ್ರಿ ದಿಢೀರ್ ಪ್ರತಿಭಟನೆ ನಡೆಸಿದ್ದಾರೆ. ರಾತ್ರೋರಾತ್ರಿ ತುಂತುರು ಮಳೆಯಲ್ಲೂ ಗುಂಪಾಗಿ ನಿಂತಿರುವ ಇವರು ಆಸ್ಪತ್ರೆಯ ಸಿಬ್ಬಂದಿ. ಕೋವಿಡ್-19 ಸೋಂಕಿತ ಪೊಲೀಸ್ ಕಾನ್ಸಟೇಬಲ್ ಮೃತಪಟ್ಟಿದ್ದಕ್ಕೆ ವೈದ್ಯರ ಮೇಲೆ ಮೃತನ ಸಂಬಂಧಿಕರು ಹಲ್ಲೆ ನಡೆಸಿದ್ದಕ್ಕೆ ಪ್ರತಿಯಾಗಿ ಆಸ್ಪತ್ರೆ ಸಿಬ್ಬಂದಿ ರಾತ್ರೋರಾತ್ರಿ ಪ್ರತಿಭಟನೆ ನಡೆಸಿದ ಘಟನೆ ಕೊಪ್ಪಳದ ಕೋವಿಡ್-19 ಹಾಗೂ ಜಿಲ್ಲಾಸ್ಪತ್ರೆ ಆವರಣದಲ್ಲಿ ನಡೆದಿದೆ. ಆಗಸ್ಟ್ 26ರಂದು ಕೋವಿಡ್-19 ಸೋಂಕು ದೃಢಪಟ್ಟಿದ್ದರಿಂದ ಕೋವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ಕೊಪ್ಪಳ ನಗರ ಠಾಣೆಯ ಕಾನ್ಸಟೇಬಲ್ ರಾಮಣ್ಣ ಎಚ್.ಸಿ. ಬುಧವಾರ ಮಧ್ಯಾಹ್ನದವರೆಗೂ ಚನ್ನಾಗೇ ಇದ್ದರು. ಸಂಜೆ ಹೊತ್ತಿಗೆ ಅವರನ್ನು ನೋಡಲು ಬಂದಾಗ ಅವರು ಮೃತಪಟ್ಟ ವಿಚಾರವನ್ನು ಆಸ್ಪತ್ರೆ ಸಿಬ್ಬಂದಿ ತಿಳಿಸುತ್ತಾರೆ. ಈ ವಿಷಯವನ್ನು ಮನೆಯವರಿಗೆ ಫೋನ್ ಮೂಲಕ ತಿಳಿಸಬೇಕು ಎನ್ನುವ ಕನಿಷ್ಠ ಕಾಳಜಿಯೂ ಆಸ್ಪತ್ರೆಗೆ ಸಿಬ್ಬಂದಿಗೆ ಇರದಿದ್ದಕ್ಕೆ ಸಂಬಂಧಿಕರು ಕರ್ತವ್ಯನಿರತ ಹಲ್ಲೆ ಮಾಡಿದ್ದಾರೆ.
ಹಲ್ಲೆ ಘಟನೆಯಿಂದ ಆಕ್ರೋಶಗೊಂಡ ಆಸ್ಪತ್ರೆ ಸಿಬ್ಬಂದಿ ರಾತ್ರೋರಾತ್ರಿ ದಿಢೀರ್ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಆಗಮನಕ್ಕೆ ಪಟ್ಟು ಹಿಡಿದರು. ಸ್ಥಳಕ್ಕೆ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಭೇಟಿ ನೀಡಿ ಎಫ್ಐಆರ್ ದಾಖಲಿಸುವಂತೆ ಸೂಚಿಸಿದರು.  ಪೊಲೀಸರ ಸಮ್ಮುಖದಲ್ಲೇ ಘಟನೆ ನಡೆದಿದ್ದು ಸುಮ್ಮನೇ ಇದ್ದ ಪೊಲೀಸರ ವಿರುದ್ಧವೂ ಕ್ರಮ ಆಗಬೇಕೆಂದು ಪ್ರತಿಭಟನಾನಿರತರು ಒತ್ತಾಯಿಸಿದರು. ಡಿಸಿ ಮಾತನಾಡುವಾಗ ಪ್ರತಿಭಟನಾನಿರತ ವೈದ್ಯರು ಗಾಂಧಿ ಕ್ಲಾಸ್ನ ಪ್ರೇಕ್ಷಕರಂತೆ ಕೇಕೆ, ಶಿಳ್ಳೆ ಹಾಕಿ, ಚೀರಾಡಿದ್ದು ಡಿಸಿಯವರಿಗೆ ಕೊಂಚ ಮುಜುಗರ ಉಂಟು ಮಾಡಿತು. ಈ ಬಗ್ಗೆ ಹಲ್ಲೆಗೊಳಗಾದ ವೈದ್ಯ ಡಾ.ವೀರೇಶ್ ಅವರು, ಪೇಷೆಂಟ್ ಮೃತಪಟ್ಟ ತಕ್ಷಣ ಅವರು ಕೊಟ್ಟಿರುವ ನಂಬರ್ಗೆ ಹಲವು ಬಾರಿ ಕರೆ ಮಾಡಿದರೂ ಕರೆ ಹೋಗಲಿಲ್ಲ. ಇದಕ್ಕೆ ಸಾಕ್ಷ್ಯಗಳಿವೆ. ಆದರೂ ಏಕಾಏಕಿ ಮೃತರ ಸಂಬಂಧಿಕರು ಹಲ್ಲೆ ನಡೆಸಿದರು. ಈ ವೇಳೆ ಪೊಲೀಸರೂ ಸಹ ಇದ್ದರೂ ಹಲ್ಲೆ ಮಾಡುತ್ತಿರುವುದನ್ನು ನಿಂತು ನೋಡಿದರಷ್ಟೇ. ಅವರ ವಿರುದ್ಧವೂ ಕ್ರಮ ಆಗಬೇಕು. ಇನ್ನೊಮ್ಮೆ ಆಸ್ಪತ್ರೆಯಲ್ಲಿ ಇಂಥ ಘಟನೆಗಳು ಮರುಕಳಿಸಬಾರದು ಎಂದು ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದರು. ರಾತ್ರಿ ತುಂತುರು ಮಳೆಯಲ್ಲೂ ವೈದ್ಯರು ಮತ್ತು ಸಿಬ್ಬಂದಿ ಪ್ರತಿಭಟನೆ ನಡೆಸಿದರು. ಡಿಸಿ ಸುಮಾರು ಒಂದು ಗಂಟೆ ಅವರ ಮನವೊಲಿಸುವ ಪ್ರಯತ್ನ ಮಾಡಿದರು. ಸುಮಾರು 4 ಗಂಟೆಗಳ ಕಾಲ ಸಿಬ್ಬಂದಿ ಪ್ರತಿಭಟನೆಯಲ್ಲಿ ತೊಡಗಿದ್ದರು. ಮುಂಜಾಗ್ರತಾ ಕ್ರಮವಾಗಿ ಆಸ್ಪತ್ರೆ ಆವರಣದಲ್ಲಿ ಮತ್ತಷ್ಟೂ ಪೊಲೀಸ್ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದ್ದು, ಘಟನೆ ಕುರಿತು ಎಫ್ಐಆರ್ ದಾಖಲಿಸುವುದಾಗಿ ವೈದ್ಯ ಸಿಬ್ಬಂದಿ ತಿಳಿಸಿದ್ದಾರೆ.

Please follow and like us:
error