ಕನ್ನಡ ಚಿತ್ರರಂಗ ಬೃಹತ್ ಪ್ರತಿಭಟನೆ

ಮಹಾದಾಯಿ ಮಧ್ಯಂತರ ತೀರ್ಪು ವಿರೋಧಿಸಿ  ನಡೆದ ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ  ಕನ್ನಡ ಚಿತ್ರರಂಗ ಬೃಹತ್ ಪ್ರತಿಭಟನಾ ನಡೆಸಿದೆ. ಟೌನ್‍ಹಾಲ್‍ನಿಂದ ಫ್ರೀಡಂ ಪಾರ್ಕ್‍ವರೆಗೆ ನಡೆಸಿದ ಬೃಹತ್ ಮೆರವಣಿಗೆಯಲ್ಲಿ ಚಿತ್ರೋದ್ಯಮದ ಹಲವು ಗಣ್ಯ ವ್ಯಕ್ತಿಗಳು ಭಾಗಿಯಾಗಿದ್ದರು. ಈ ವೇಳೆ kannada-3ಫ್ರೀಡಂಪಾರ್ಕ್ ನಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ನಟ ಶಿವರಾಜ್ ಕುಮಾರ್ ನಾವು ಶಕ್ತಿ ಪ್ರದರ್ಶನಕ್ಕಾಗಿ ಬೀದಿಗಿಳಿದಿಲ್ಲ, ಜನರಿಗಾಗಿ ಬಂದಿದ್ದೇವೆ. ಜನರಿಗೆ ಬೆಂಬಲ ನೀಡಲು ಬಂದಿದ್ದೇವೆ. ಸುಮ್ಮನೆ ತಮಾಷೆಗಾಗಿ ಎಂದಿಗೂ ಹೋರಾಟ ಮಾಡಬಾರದು. ನಮ್ಮ ಹೋರಾಟ ಅರ್ಥಪೂರ್ಣವಾಗಿರಬೇಕು. ಮಹಾದಾಯಿಗಾಗಿ ದೆಹಲಿವರೆಗೆ ಹೋಗಿ ಪ್ರತಿಭಟನೆ ನಡೆಸಲೂ ನಾವು ಸಿದ್ಧ ಎಂದಿದ್ದಾರೆ

Please follow and like us:
error