ಕನಕಗಿರಿ ಶಾಸಕರಿಗೆ ನಮ್ಮ ತಾಕತ್ತು ತೋರಿಸಿದ್ದೇವೆ- ತಂಗಡಗಿ

ಕೊಪ್ಪಳ : ಸರಕಾರ ಏನೆಲ್ಲ ಆಟ ಆಡಿದ್ರು ಅನ್ನೋದು ಎಲ್ಲರಿಗೂ ಗೊತ್ತಿದೆ. ಜಿಪಂ ಅಧ್ಯಕ್ಷರ ಅವಿಶ್ವಾಸಕ್ಕೆ ಬಿಜೆಪಿ ಸದಸ್ಯರು ಬೆಂಬಲಿಸಿದ್ದಾರೆ. 24 ಜನ ಸದಸ್ಯರು ಹಾಜರಿದ್ದರು. 4 ಜನ ಸದಸ್ಯರು ಸಭೆಗೆ ಹಾಜರಾಗಿರಲಿಲ್ಲ.ಅದ್ಯಕ್ಷ ಸಹ ಹಾಜರಾಗಿರಲಿಲ್ಲ ಅದ್ಯಕ್ಷ ವಿಶ್ವನಾಥ ರೆಡ್ಡಿಯನ್ನು ಕೆಳಗಿಳಿಸುವುದರ ಮೂಲಕ ಕನಕಗಿರಿ ಶಾಸಕರಿಗೆ ನಮ್ಮ ತಾಕತ್ತು ತೋರಿಸಿದ್ದೇವೆ ಎಂದು ಕೊಪ್ಪಳದಲ್ಲಿ ಮಾಜಿ ಸಚಿವ ಶಿವರಾಜ‌ ತಂಗಡಗಿ ಹೇಳಿದರು

ಇಂದು ಜಿಲ್ಲಾ ಪಂಚಾಯತ ನಲ್ಲಿ ಅದ್ಯಕ್ಷ ವಿಶ್ವನಾಥ ರೆಡ್ಡಿ ವಿರುದ್ದ ಅವಿಶ್ವಾಸ ಗೊತ್ತುವಳಿ ಯಶಸ್ವಿಗೊಳಿಸಿದ ನಂತರ ಮಾತನಾಡಿದ ತಂಗಡಗಿ ಬಿಜೆಪಿಯ ೭ ಹಾಗೂ ಒಬ್ಬ ಪಕ್ಷೇತರ ಸದಸ್ಯರು ಸಹ ಬೆಂಬಲ ನೀಡಿದ್ದಾರೆ ಎಂದರು.

ವಿಶ್ವನಾಥರಡ್ಡಿ ಕಾಂಗ್ರೆಸ್ ಪಕ್ಷದವರೇ ಆಗಿದ್ದರೂ ಮಾತಿಗೆ ತಪ್ಪಿ ಬಿಜೆಪಿಗೆ ಸೇರಿದರು. ಯಾರೇ ಆಗಲಿ ಮಾತಿಗೆ ತಪ್ಪಿದರೆ ಏನಾಗುತ್ತದೆ ಎಂಬುದಕ್ಕೆ ಈ ಘಟನೆ ಸಾಕ್ಷಿ. ಇದು ವಿಶ್ವನಾಥರಡ್ಡಿ ಹಾಗೂ ಬಿಜೆಪಿ ವಿರೋಧಿಸಿ ಸಂದ ಕಾಂಗ್ರೆಸ್ ಗೆಲುವು. ಡ್ರಗ್ಸ್ ವಿಚಾರದಲ್ಲಿ ತಪ್ಪು ಯಾರದಿರುತ್ತೊ ಅವರಿಗೆ ಶಿಕ್ಷೆ ಆಗುತ್ತೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಶಾಸಕ ರಾಘವೇಂದ್ರ ಹಿಟ್ನಾಳ , ಕುಷ್ಟಗಿ ಶಾಸಕ ಅಮರೆಗೌಡ ಬಯ್ಯಾಪೂರ, ಮಾಜಿ ಶಾಸಕ ಬಸವರಾಜ್ ಹಿಟ್ನಾಳ, ಕೃಷ್ಣ ಇಟ್ಟಂಗು, ಸೇರಿದಂತೆ ಜಿಲ್ಲಾ ಪಂಚಾಯತ್ ಸದಸ್ಯರು, ನಾಯಕರು ಉಪಸ್ಥಿತರಿದ್ದರು.

Please follow and like us:
error