ಕನಕಗಿರಿ, ಕಾರಟಗಿ ತಾಲೂಕಿನಲ್ಲಿ ಕೊವಿಡ್ ಚಿಕಿತ್ಸಾ ಕೇಂದ್ರ ತೆರೆಯಲು ಮಾಜಿ ಸಚಿವ ತಂಗಡಗಿ ಒತ್ತಾಯ

ಕೊಪ್ಪಳ : ಕೊಪ್ಪಳ ಜಿಲ್ಲೆ ಕನಕಗಿರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ತಾಲೂಕುಗಳಾದ ಕನಕಗಿರಿ ಹಾಗೂ ಕಾರಟಗಿಯಲ್ಲಿ ಯಾವುದೇ ರೀತಿಯ ಕೋವಿಡ್ ಚಿಕಿತ್ಸಾ ಕೇಂದ್ರ ಇಲ್ಲವಾಗಿದ್ದು , ತಕ್ಷಣವಾಗಿ ಈ ತಾಲೂಕುಗಳಲ್ಲಿ ಕೊವೀಡ್ ಚಿಕಿತ್ಸಾ ಕೇಂದ್ರ ತೆರೆಯಲು ಮಾಜಿ ಸಚಿವ ಶಿವರಾಜ್ ತಂಗಡಗಿ ಅವರು ಒತ್ತಾಯಿಸಿದ್ದಾರೆ. ಬುಧವಾರದಂದು ಕೊಪ್ಪಳದಲ್ಲಿ ಸಚಿವರಾದ ಬಿ.ಸಿ ಪಾಟೀಲ್ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದರು. ಕನಕಗಿರಿ ಹಾಗೂ ಕಾರಟಗಿ ತಾಲೂಕುಗಳ ಜನರು ಕೊವೀಡ್ ಚಿಕಿತ್ಸೆಗಾಗಿ ಸೋಂಕಿತರು ಕೊಪ್ಪಳ ಜಿಲ್ಲೆ ಗಂಗಾವತಿಯ ಕೋವಿಡ್ ಚಿಕಿತ್ಸಾ ಕೇಂದ್ರಕ್ಕೆ ಹೋಗುವ ಅನಿವಾರ್ಯತೆ ಎದುರಾಗಿದೆ . ಗಂಗಾವತಿ , ಕಾರಟಗಿ, ಹಾಗೂ ಕನಕಗಿರಿ ತಾಲೂಕಿನ ರೋಗಿಗಳು ಚಿಕಿತ್ಸೆಗಾಗಿ ಗಂಗಾವತಿಯಲ್ಲಿರುವ ಕೋವಿಡ್ ಚಿಕಿತ್ಸಾ ಕೇಂದ್ರವನ್ನೇ ಅವಲಂಬಿಸಿದ್ದಾರೆ. ಇದರಿಂದ ಆಯಾ ರೋಗಿಗಳಿಗೆ ಚಿಕಿತ್ಸೆಗಾಗಿ ಬೆಡ್ , ಆಕ್ಸಿಜನ್ ಬೆಡ್ ಸಿಗದೇ ಕೋವಿಡ್ ಕೇಂದ್ರದ ಮುಂಭಾಗದಲ್ಲಿ ಜೀವ ಬಿಟ್ಟಿರುವಂತಹ ಘಟನೆಗಳು ಜರುಗಿವೆ. ತಕ್ಷಣ ಸರ್ಕಾರದ ಆದೇಶದಂತೆ ತಾಲೂಕು ಕೇಂದ್ರಗಳಾದ ಕನಕಗಿರಿ, ಕಾರಟಗಿಯಲ್ಲಿ ನೂತನ ಕೋವಿಡ್ ಚಿಕಿತ್ಸಾ ಕೇಂದ್ರವನ್ನು ಪ್ರಾರಂಭಿಸಿ , ಬೆಡ್ , ಆಕ್ಸಿಜನ್ ಹಾಗೂ ವೆಂಟಿಲೇಟರ್ ವ್ಯವಸ್ಥೆ ಕಲ್ಪಿಸಿ , ರೋಗಿಗಳಿಗೆ ಚಿಕಿತ್ಸೆಗೆ ಅನುಕೂಲ ಮಾಡಿಕೊಡಬೇಕೆಂದು ಆಗ್ರಹಿಸಿದರು. ಈ ಸಂಧರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ದೊಡ್ಡಪ್ಪ ದೇಸಾಯಿ, ರೆಡ್ಡಿ ಶ್ರೀನಿವಾಸ, ರಾಜಸಾಬ ನಂದಾಪುರ ಸೇರಿದಂತೆ ಮತ್ತಿತರರು ಇದ್ದರು

Please follow and like us:
error