ಒಡೆದ ವಿಜಯನಗರ ಕಾಲುವೆ: ಗದ್ದೆಗಳಿಗೆ ನುಗ್ಗಿದ ನೀರು

ಕನ್ನಡನೆಟ್ ನ್ಯೂಸ್ : ಕೊಪ್ಪಳ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಗೆ ತುಂಗಭದ್ರಾ ಜಲಾಶಯದ ವಿಜಯನಗರ ಕಾಲುವೆ ಒಡೆದು ನೂರಾರು ಎಕರೆ ಜಮೀನು ಜಲಾವೃತಗೊಂಡ ಘಟನೆ ಕೊಪ್ಪಳದಲ್ಲಿ ನಡೆದಿದೆ. ಜಿಲ್ಲೆಯ ಗಂಗಾವತಿ ತಾಲೂಕಿನ ಕಡೇಬಾಗಿಲು ಗ್ರಾಮದ ಬಳಿ ಇರುವ ವಿಜಯನಗರ ಕಾಲುವೆ ಸಂಪೂರ್ಣವಾಗಿ ಕುಸಿದಿದೆ. ಇದರ ಪರಿಣಾಮ ಸುತ್ತಮುತ್ತಲಿನ ಭತ್ತದ ಗದ್ದೆಗಳು ಜಲಾವೃತಗೊಂಡಿವೆ.
ಇನ್ನೂಆರ್‌‌ಎನ್ಎಸ್ ಕಂಪನಿ ಈಚೆಗಷ್ಟೇ ವಿಜಯನಗರ ಕಾಲುವೆಯ ದುರಸ್ತಿ ನಿರ್ವಹಿಸಿತ್ತು. ದುರಸ್ತಿ ಕಾಮಗಾರಿ ಕಳಪೆಯಾಗಿದ್ದರಿಂದ ಕಾಲುವೆ ಒಡೆದಿದೆ ಎನ್ನುವ ಆರೋಪ ಕೇಳಿ ಬಂದಿದೆ. ಈ ಭಾಗದ ರೈತರು ಈಚೆಗಷ್ಟೇ ಭತ್ತ ನಾಟಿ ಮಾಡಿದ್ದು, ಭಾರಿ ಪ್ರಮಾಣದ ನೀರು ಗದ್ದೆಗಳಿಗೆ ನುಗ್ಗಿರುವುದರಿಂದ ಬೆಳೆ ಕೊಳೆಯುವ ಭೀತಿ ರೈತರಲ್ಲಿ ಆವರಿಸಿದೆ..

Please follow and like us:
error