fbpx

ಐಸಿಯುವಿನಲ್ಲಿ ಕೊರೊನಾ ರೋಗಿ ಸಾವು : ಸಂಬಂಧಿಕರಿಂದ ಆಂಬ್ಯುಲೇನ್ಸಗೆ ಬೆಂಕಿ

ಕನ್ನಡನೆಟ್ ನ್ಯೂಸ್ ಬೆಳಗಾವಿ : ಐಸಿಯುನಲ್ಲಿ ಕೊರೊನಾ ರೋಗಿ ಸಾವನ್ನಪ್ಪಿದ ಹಿನ್ನೆಲೆ ರೋಗಿ ಸಂಬಂಧಿಕರು ಆಂಬ್ಯುಲೇನ್ಸಗೆ ಬೆಂಕಿ ಹಚ್ಚಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಬೆಳಗಾವಿ ಬೀಮ್ಸ್ ಆಸ್ಪತ್ರೆ ಕೋವಿಡ್ ವಾರ್ಡ್ ಮುಂದೆ ಬೆಂಕಿ‌ ಹಚ್ಚಲಾಗಿದೆ‌. ಅಥಣಿಯಿಂದ ಕೊರೊನಾ ರೋಗಿಯನ್ನ ಕರೆದುಕೊಂಡು ಬಂದಿದ್ದ ಅಂಬ್ಯುಲೇನ್ಸ್ ಗೆ ಹತ್ತಾರು ಜನರಿದ್ದ ಗುಂಪಿನಿಂದ ಬೆಂಕಿ ಹಚ್ಚಿ ಕಲ್ಲು ತೂರಾಟ ಮಾಡಲಾಗಿದೆ‌. ಇದರಿಂದ ಪೊಲೀಸ್ ವಾಹ‌ನ, ಕಾರುಗಳ ಗಾಜು ಪುಡಿ ಪುಡಿಯಾಗಿವೆ. ಗಲಾಟೆ ಆರಂಭವಾದ ತಕ್ಷಣವೇ ಅಂಬ್ಯುಲೇನ್ಸಲ್ಲಿದ್ದ ಚಾಲಕ, ನರ್ಸ್, ಕೊರೊನಾ ಆಸ್ಪತ್ರೆ ಒಳಗೆ ಓಡಿ ಹೋಗಿದ್ದಾರೆ.ಐಸಿಯುನಲ್ಲಿ ಇದ್ದ ವೈದ್ಯರ ಮೇಲೂ ಹಲ್ಲೆಗೆ ಮುಂದಾಗಿದೆ ಗುಂಪು ಬೆಂಕಿ ಹತ್ತಿದ್ದ ಆಂಬ್ಯುಲೇನ್ಸ ಬೆಂಕಿ ಪೋಲಿಸರು ಆರಿಸಿದ್ದಾರೆ. ಸ್ಥಳಕ್ಕೆ ಡಿಸಿ ಎಂ.ಜಿ.ಹಿರೇಮಠ, ಎಸ್ಪಿ ಲಕ್ಷ್ಮಣ ನಿಂಬರಗಿ, ಪೊಲೀಸ್ ಕಮೀಷನರ್ ತ್ಯಾಗರಾಜ್ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ.

Please follow and like us:
error
error: Content is protected !!