ಐಟಿ ದಾಳಿ ರಾಜಕೀಯ ಪ್ರೇರಿತ ಅಲ್ಲ- ಶಾಸಕ ಬಿ.ನಾಗೇಂದ್ರ

ಬಳ್ಳಾರಿ- ಮಾಜಿ ಉಪ  ಮುಖ್ಯಮಂತ್ರಿ ಡಾ ಜಿ ಪರಮೇಶ್ವರ್  ಅವರ ಮೇಲಿನ ಐಟಿ ದಾಳಿ ಯಾವುದೇ ರಾಜಕೀಯ ಪ್ರೇರಿತ ಅಲ್ಲ ಅಂಥಾ ಹೇಳುವ ಮೂಲಕ ಬಳ್ಳಾರಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ ಕಾಂಗ್ರೆಸ್ ನಾಯಕರಿಗೆ ಅಚ್ಚರಿ ಮೂಡಿಸಿದ್ದಾರೆ. ಬಳ್ಳಾರಿಯ ಹರಗಿನಡೋಣಿಯಲ್ಲಿ ಮಾತನಾಡಿದ ಅವರು , ನಾನು ಒಬ್ಬ ಉದ್ಯಮಿ ನನ್ನ ಮೇಲೂ ಈ ಹಿಂದೆ ಐಟಿ ದಾಳಿ 

ಆಗಿವೆ. ದಾಳಿ ಆಗಿದೆ ಎಂಬ  ಮಾತ್ರಕ್ಕೆ ಇದು ರಾಜಕೀಯ ಪ್ರೇರಿತ ಎನ್ನುವುದು ತಪ್ಪು, ಐಟಿ ಇಲಾಖೆ ಹಲವಾರು ದಿನಗಳ ಕಾಲ ಮಾಹಿತಿ ಪಡೆದು ದಾಳಿ ಮಾಡುತ್ತೆ , ದಾಳಿ ಮಾಡುವುದು ಅವರ ಕೆಲಸ ಎಂದಿದ್ದಾರೆ. ಆದ್ರೆ ಬಹುತೇಕ ಕಾಂಗ್ರೆಸ್ ‌ನ ಹಿರಿಯ ನಾಯಕರು ಐಟಿ ದಾಳಿ ಕೇವಲ ಕಾಂಗ್ರೆಸ್ ನಾಯಕರ ಮೇಲೆ ಮಾತ್ರ ಆಗುತ್ತೆ ಹೀಗಾಗಿ ಇದೊಂದು ರಾಜಕೀಯ ಪ್ರೇರಿತ ದಾಳಿ ಎಂದು ಕೇಂದ್ರ ಸರ್ಕಾರದ ಕಡೆ ಬೊಟ್ಟು ಮಾಡಿದ್ದಾರೆ . ಆದ್ರೆ ಬಳ್ಳಾರಿ ಗ್ರಾಮೀಣ ಶಾಸಕ ನಾಗೇಂದ್ರ ಮಾತ್ರ ಇದು ರಾಜಕೀಯ ಪ್ರೇರಿತ ಅಲ್ಲಾ ಎನ್ನುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಇನ್ನು ಅವರೊಬ್ಬ ಹಿರಿಯ ರಾಜಕಾರಣಿ ಐಟಿ ದಾಳಿಯಿಂದ ಅವರಿಗೆ ಯಾವುದೇ ತೊಂದರೆ ಆಗುವುದಿಲ್ಲ . ಸರಿಯಾ ದಾಖಲೆಗಳನ್ನು ಅವರು ಇಲಾಖೆಗೆ ನೀಡುತ್ತಾರೆ ಎಂದರು. ಇನ್ನೂ ನಾನು ಯಾವುದೇ ಕಾರಣಕ್ಕೂ ಬಿಜೆಪಿಗೆ ಸೇರೋಲ್ಲ, ನಾನು ಬಿಜೆಪಿಗೆ ಸೇರುವೆ ಎಂಬ ಊಹಾಪೋಹಗಳು ಹಾಗಯೇ ಉಳಿಯುತ್ತದೆ ಎಂದು ಬಿಜೆಪಿಗೆ ಹೋಗೋಲ್ಲ ಎಂದು ಸ್ಪಷ್ಟಪಡಿಸಿದರು. 

Please follow and like us:
error