fbpx

ಏಕಾಏಕಿ ಹೊತ್ತಿ ಉರಿದ ಕಾರು : ಆರು ಜನ ಪ್ರಾಣಾಪಾಯದಿಂದ ಪಾರು

ರಾಮನಗರ  : ಚಲಿಸುತ್ತಿದ್ದ ಕಾರೊಂದು ಏಕಾಏಕಿ ಹೊತ್ತಿ ಉರಿದ ಘಟನೆ ರಾಮನಗರದಲ್ಲಿ ನಡೆದಿದೆ.

ಹೊಸಕೊಟೆಯ ಮಂಜುನಾಥ್ ಎಂಬುವವರಿಗೆ ಸೇರಿದ‌ ಕಾರು ಸುಟ್ಟು ಭಸ್ಮವಾಗಿದ್ದ ಅವರು ಹೊಸಕೋಟೆಯಿಂದ ಮಲೆಮಹದೇಶ್ವರ ಬೆಟ್ಟಕ್ಕೆ ಹೊರಟಿದ್ದ ವೇಳೆ ದುರ್ಘಟನೆ ನಡೆದಿದೆ‌.  ರಾಮನಗರದ ಶಾಂತಿನಿಕೇತನ ಕಾಲೇಜು ಮುಂಭಾಗದಲ್ಲಿ  ಸ್ವಿಪ್ಟ್ ಕಾರಿನ  ಇಂಜಿನ್ ನಲ್ಲಿ ಹೊಗೆ ಕಾಣಿಸಿಕೊಂಡಿದೆ .   ಕ್ಷಣಾರ್ಧದಲ್ಲಿ ಹೊತ್ತಿ ಉರಿದ ಕಾರಿನಲ್ಲಿದ್ದ ಆರು ಜನ ತಕ್ಷಣವೇ ಹೊರಗೆ ಬಂದಿದ್ದಾರೆ. ಹೀಗಾಗಿ ಪ್ರಾಣಾಪಯಾದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಆಗಮಿಸಿದ  ಅಗ್ನಿ ಶಾಮಕ‌ ಸಿಬ್ಬಂದಿ ಬೆಂಕಿಯನ್ನು ಆರಿಸಿದ್ದಾರೆ

Please follow and like us:
error
error: Content is protected !!