ಎಲ್ಲ ಕ್ಷೇತ್ರದ ಮನುಷ್ಯರು ಡ್ರಗ್ಸ್ ತೆಗೆದುಕೊಳ್ಳುತ್ತಿದ್ದಾರೆ- ಬಯ್ಯಾಪೂರ

ಕೊಪ್ಪಳ : ಎಲ್ಲ ಕ್ಷೇತ್ರದ ಮನುಷ್ಯರು ಡ್ರಗ್ಸ್ ತೆಗೆದುಕೊಳ್ಳುತ್ತಿದ್ದಾರೆ. ಇದಕ್ಕೆ ರಾಜಕಾರಣಿಗಳು ಹೊರತಾಗಿಲ್ಲ. ಮಾಧ್ಯಮ ಕ್ಷೇತ್ರದ ಅನೇಕರಿಗೆ ಡ್ರಗ್ಸ್ ಲಿಂಕ್ ಇದೆ ಅಂತಿನಿ ಎಂದು ಕೊಪ್ಪಳದಲ್ಲಿ ಶಾಸಕ ಅಮರೇಗೌಡ ಬಯ್ಯಾಪೂರ ಹೇಳಿದರು.ನಿಮ್ಮ ಆತ್ಮಸಾಕ್ಷಿಯಿಂದ ಹೇಳಿ ನೀವು ಎಂದ ಅಮರೇಗೌಡ ಬಯ್ಯಾಪೂರ? ನಾನು ಹೇಳಿದ್ದನ್ನು ಏನೇನೂ ತಿಳಿದುಕೊಂಡರೆ ಹೇಗೆ ಡ್ರಗ್ಸ್ ಜೊತೆ ಬದುಕುವವರೇ ನಮ್ಮ ಸಮಾಜದಲ್ಲಿ ಇದ್ದಾರೆ. ಅದು ಎಲ್ಲ ಕ್ಷೇತ್ರದಲ್ಲೂ ಇದ್ದಾರೆ ಇದಕ್ಕೆ ಸಿನಿಮಾ, ರಾಜಕಾರಣ ಕ್ಷೇತ್ರ ಅಂತಾ ಇಲ್ಲ . ಇದನ್ನು ಇಷ್ಟೊಂದು ಬಿಂಬಿಸುವ ಅಗತ್ಯವಿಲ್ಲ ಎಂದು ಹೇಳಿದ್ದೇನೆ . ಉತ್ತರಪ್ರದೇಶದ ಲ್ಲಿ ಅಧಿಕಾರಿಗಳಿಂದ ಗೂಂಡಾಗಿರಿ ನಡೆಯುತ್ತಿದೆ‌. ದಲಿತ ಯುವತಿಯ ಅತ್ಯಾಚಾರ ,ಕೊಲೆ ಖಂಡನೀಯ. ಅವರ ಕುಟುಂಬದವರ ಅನುಮತಿ ಇಲ್ಲದೇ ಸುಟ್ಟು ಹಾಕಿದ್ದು ಖಂಡನೀಯ. ಇದನ್ನು ಪ್ರತಿಭಟಿಸಿದ ರಾಷ್ಟ್ರನಾಯಕ ರಾಹುಲ್ ಗಾಂಧೀಯವರಿಗೆ ಅಧಿಕಾರಿಗಳು ಅವಮರ್ಯಾದೆ ಮಾಡಿದ್ದಾರೆ

Please follow and like us:
error