ಎದೆ ಸೀಳಿದರೆ ನಾಲ್ಕು ಅಕ್ಷರ ಇಲ್ಲದವ , ಬೀದಿಬದಿ ಪಂಕ್ಚರ್ ಹಾಕುವವರು ಮಾತ್ರ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ ‘ ಬಿಜೆಪಿ ಸಂಸದ ತೇಜಸ್ವಿ ಸೂರ್ಯ 

 ನಾವು ಪ್ರಚೋದನಕಾರಿ ಭಾಷಣ ಮಾಡಿದರೆ ‘ ಅವರು ‘ ಉಳಿಯುವುದಿಲ್ಲ : ಸಂಸದ ತೇಜಸ್ವಿ ಸೂರ್ಯ

   ಡಿ . 21 : ” ಎದೆ ಸೀಳಿದರೆ ನಾಲ್ಕು ಅಕ್ಷರ ಇಲ್ಲದವ , ಬೀದಿಬದಿ ಪಂಕ್ಚರ್ ಹಾಕುವವರು ಮಾತ್ರ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ ‘ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ವಿವಾದಿತ ಹೇಳಿಕೆ ನೀಡಿದ್ದಾರೆ . ರವಿವಾರ ಇಲ್ಲಿನ ಪುರಭವನ ಮುಂಭಾಗ ಪೌರತ್ವ ಕಾಯ್ದೆಯನ್ನು ಬೆಂಬಲಿಸಿ ನಡೆದ ಸಭೆಯಲ್ಲಿ ಮಾತನಾಡಿದ ಅವರು , ಪೌರತ್ವ ತಿದ್ದುಪಡಿ ಕಾಯ್ದೆಯನ್ನು ರಾಷ್ಟ್ರೀಯ ಜನಸಂಖ್ಯಾ ನೋಂದಣಿಗೆ ಸಂಯೋಜನೆ ಮಾಡುವುದಿಲ್ಲ ಎಂದರು . ನಾವು 5 ಶತಕೋಟಿ ರೂಪಾಯಿಯ ಅರ್ಥ ವ್ಯವಸ್ಥೆ ರೂಪಿಸುವ ಪ್ರಯತ್ನದಲ್ಲಿದ್ದೇವೆ . ನೀವು ಇಷ್ಟು ವರ್ಷ ಪ್ರತಿಪಾದಿಸಿದ ದುರ್ಬಲ ಜಾತ್ಯತೀತ ಪರಿಕಲ್ಪನೆ ಅರ್ಥ ಕಳೆದುಕೊಳ್ಳಲಿದೆ ಎಂದ ಅವರು , ಕೇಂದ್ರ ಸರಕಾರದ ಪೌರತ್ವ ಕಾಯ್ದೆಯನ್ನು ತಪ್ಪಾಗಿ ಅರ್ಥೈಸಿಕೊಂಡು ಜನರನ್ನು ದಿಕ್ಕು ತಪ್ಪಿಸಲಾಗಿದೆ . ಆದರೆ ಇದು ಭಾರತೀಯರಿಗೆ ಪೂರಕವಾಗಿದೆ ಎಂದು ಹೇಳಿದರು . ಪಾಕಿಸ್ತಾನ , ಬಾಂಗ್ಲಾ , ಅಫ್ಘಾನಿಸ್ತಾನದಿಂದ ನುಸುಳುಕೋರರಾಗಿ ಬಂದಿರುವ ಮುಸ್ಲಿಮರಿಗೆ ಭಾರತದ ಪೌರತ್ವ ನೀಡುವ ಪ್ರಶ್ನೆ ಇಲ್ಲ . ಯಾರ ಪರವಾಗಿ ಪ್ರತಿಭಟನೆಗಳು ನಡೆಯುತ್ತವೆ . ಈ ಮಸೂದೆಯಂತೆ ಭಾರತದಲ್ಲಿ ನೆಲೆಸಿರುವ ಮುಸ್ಲಿಮರಿಗೆ ಯಾವುದೇ ತೊಂದರೆ ಇಲ್ಲ . ಹೀಗಿದ್ದರೂ ಅವರು ರಸ್ತೆಗೆ ಇಳಿದು ಪ್ರತಿಭಟನೆ ಯಾಕಾಗಿ ಮಾಡುತ್ತಿದ್ದಾರೆ ಎಂಬ ಪ್ರಶ್ನೆ ಸಹಜವಾಗಿ ಕಾಡುತ್ತಿದೆ ಎಂದರು . ಪೌರತ್ವ ತಿದ್ದುಪಡಿ ಕಾಯ್ದೆ , ಎನ್‌ಆರ್ ಸಿ ಪ್ರಕ್ರಿಯೆ ಸಂಬಂಧ ಕಾಂಗ್ರೆಸ್ ಸಾವಿನ ರಾಜಕೀಯ ಮಾಡುತ್ತಿದೆ . ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಮತ್ತು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಒಂದೇ ಮಾತುಗಳನ್ನು ಮಾಡುತ್ತಾರೆ . ಈ ಇಬ್ಬರಲ್ಲಿ ಯಾವುದೇ ವ್ಯತ್ಯಾಸ ಇಲ್ಲ ಎಂದು ತೇಜಸ್ವಿ ಸೂರ್ಯ ಆರೋಪಿಸಿದರು .

ಪಾಕಿಸ್ತಾನದ ಪ್ರಧಾನಿ ಇಮಾನ್ ಖಾನ್ ಮತ್ತು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಒಂದೇ ಮಾತುಗಳನ್ನು ಮಾಡುತ್ತಾರೆ . ಈ ಇಬ್ಬರಲ್ಲಿ ಯಾವುದೇ ವ್ಯತ್ಯಾಸ ಇಲ್ಲ ಎಂದು ತೇಜಸ್ವಿ ಸೂರ್ಯ ಆರೋಪಿಸಿದರು . ನಾವು ಪ್ರಚೋದನಕಾರಿ ಭಾಷಣ ಮಾಡಿದರೆ ‘ ಅವರು ‘ ಉಳಿಯುವುದಿಲ್ಲ ಭಾಷಣದ ಸಂದರ್ಭದಲ್ಲಿ ತೇಜಸ್ವಿ ಸೂರ್ಯ ಪದೇ ಪದೇ ಪಾಕಿಸ್ತಾನವನ್ನು ‘ ರಾಜ್ಯ ‘ ಎಂದೇ ಉಲ್ಲೇಖಿಸುತ್ತಿದ್ದರು . ಬಳಿಕ ಸಭೆಯಲ್ಲಿದ್ದವರು ಅದೊಂದು ರಾಷ್ಟ್ರ ಎಂದು ನೆನಪಿಸಿದ ಪ್ರಸಂಗ ನಡೆಯಿತು . ಬಳಿಕ ತಮ್ಮ ಮಾತುಗಳನ್ನು ಮುಂದುವರೆಸಿದ ಅವರು , ಮಾಜಿ ಸಚಿವ ಯು . ಟಿ . ಖಾದರ್ ಅವರಂತೆ ನಾವು ಸಹ ಪ್ರಚೋದನಕಾರಿ ಭಾಷಣ ಮಾಡಿ , ಜನರನ್ನು ಸೇರಿಸಿದರೆ ‘ ಅವರು ‘ ಉಳಿಯುವುದೇ ಇಲ್ಲ ಎಂದರು .

Please follow and like us:
error