ಉರ್ದು ಭಾಷಿಕರ ಕೊಡುಗೆ

ಹೃಷಿಕೇಶ ಬಹಾದ್ದೂರ ದೇಸಾಯಿ

ಭಾರತಕ್ಕೆ, ಕರ್ನಾಟಕ್ಕೆ ಉರ್ದು ಭಾಷಿಕರ ಕೊಡುಗೆ ಹಿಂದೆಯೂ ಇತ್ತು, ಇಂದಿಗೂ ಇದೆ.
ರಾಜ ಮನೆತನ ಗಳು, ಅಧಿಕಾರಿಗಳು, ಕವಿ- ಸಾಹಿತಿ ಕಲಾವಿದರು, ಇಂಜಿನಿಯರ್, ವೈದ್ಯರು, ವಕೀಲರು, ಶಿಕ್ಷಕರು, ಸಮಾಜ ಸುಧಾರಕ ರು, ಸೂಫಿ ಸಂತರು, ಮತ್ತು ಇತರರನ್ನು ಉರ್ದು ಎನ್ನುವ ಸೂತ್ರದ ಸುತ್ತ ಹೆಣೆಯ ಬಹುದಾದರೆ ಅವರ ಕೊಡುಗೆ ಗಳನ್ನು ಅನೇಕ ಆಯಾಮ ಗಳಿಂದ, ಅನೇಕ ಕಾಲ ಘಟ್ಟ ದಲ್ಲಿ ನೋಡಬಹುದು.

ಇಲ್ಲಿ ಕೆಲವನ್ನು ನೋಡೋಣ.
📷
ಹಿಂದೊಮ್ಮೆ ಕಿರಿಯ ಐ. ಪಿ. ಎಸ್ ಅಧಿಕಾರಿ ಒಬ್ಬರು (ಕಿರಿಯ ಐ. ಎ. ಎಸ್ – ಐ. ಪಿ ಎಸ್ ಅಧಿಕಾರಿಗಳೂ ಇರುತ್ತಾರೆ. ಎಲ್ಲರೂ ಹಿರಿಯ ರಿರೋದಿಲ್ಲ ) ಭೇಟಿಯಾಗಿದ್ದರು.

ಕುಟುಂಬ ಸಮೇತ ಕಲ್ಯಾಣ ಕರ್ನಾಟಕದ ಪ್ರವಾಸಕ್ಕೆ ಬಂದಿದ್ದ ಅವರು ಬೀದರ ನ ಕೆರೆ – ಕಟ್ಟೆ
ಗಳನ್ನು ನೋಡಿದರು. ಆ ನಂತರ ತಮ್ಮ ಸ್ನೇಹಿತ ರಾಗಿದ್ದ ತನ್ನ ಜಿಲ್ಲಾ ಪೊಲೀಸ್ ಮುಖಸ್ಥರ ಜೊತೆಗೆ ಕೋಟೆ – ಕಮಾನು ನೋಡಲು ಬಂದರು. ಅವರು ಬ್ಯಾಚ್ ಮೇಟ್ ಆದ್ದರಿಂದ ಒಬ್ಬರ ಮೇಲೆ ಒಬ್ಬರಿಗೆ ಬಿಟ್ಟಿರ ಲಾರದ ಪ್ರೀತಿ.

ಈ ಅಖಿಲ ಭಾರತ ಸೇವೆ ಮಂದಿ (ಐ. ಎ. ಎಸ್ಸು , ಐ. ಪಿ ಎಸ್ಸು , ಇತ್ಯಾದಿ 27 ಗುಂಪಿನ ನೌಕರದಾರರು) ತಮ್ಮ ಬ್ಯಾಚ್ ಮೇಟ್ ಗಳನ್ನು ತಮ್ಮ ಅಣ್ಣ ತಮ್ಮಂ ದಿರಿಗಿಂತ ಹೆಚ್ಚಾಗಿ ಕಾಣುತ್ತಾರೆ. ಮುಸೋರಿಯ ತರಬೇತಿ ಕೇಂದ್ರ ದಲ್ಲಿ ಮೀಟ್ ಮಾಡಿದ ಗಂಡು -ಹೆಣ್ಣುಗಳು ಅಂತಸ್ತು ಜಾತಿ ನೋಡದೆ ಮದುವೆ ಯಾಗುತ್ತಾರೆ. ಇತರರಲ್ಲಿ ವಿದ್ಯಾರ್ಹತೆ, ಆಸ್ತಿ, ಅಂತಸ್ತು ಅರಸುವ ಅವರು ತಾವು ಪಾಸು ಮಾಡಿದ ಪರೀಕ್ಷೆಯನ್ನು ಪಾಸು ಮಾಡಿದ ಇತರ ಎಲ್ಲರನ್ನೂ ಸಮಾನರಂತೆ ಕಾಣುತ್ತಾರೆ.

ಇಂತಿಪ್ಪ ಆ ಇಬ್ಬರು ಬ್ಯಾಚ್ ಮೇಟ್ ಗಳು ಒಂದು ಸ್ಮಾರಕ ಕ್ಕೆ ಐದರಂತೆ ಒಟ್ಟು 300 ಪ್ರಶ್ನೆ ಕೇಳಿದರು. ಕೊನೆಗೆ ಅವಿರಿಗೆ ಒಂದು ಪ್ರಶ್ನೆ ಬಂತು ಎಲ್ಲಾ ಸರಿ, ಈ `ಉರ್ದು’ ಅಂದರೆ ಏನು?

ಆಗ ನಾನು ಅದು ಬಹಳ ಮಜಾ ವಿಷಯ. ಉರ್ದು ಅನ್ನುವುದು ಉರ್ದು ಭಾಷೆಯ ಪದ ಅಲ್ಲ, ಅದು ಟರ್ಕಿ ಪದ, ಅದಕ್ಕೆ ಅನೇಕ ಅರ್ಥ ಗಳು ಇವೆ. ಅದರಲ್ಲಿ ಸೈನಿಕರ ವಸತಿ, ಟೆಂಟು , ಅಥವಾ ದಂಡು ಪ್ರದೇಶ, ಅಂತ ಹೇಳಿದೆ.

ಅವರಿಗೆ ಅರ್ಥ ವಾಗಲಿಲ್ಲ. ಅವರಿಗೆ ತಿಳಿದು ಕೊಳ್ಳಲು ಅನುಕೂಲ ವಾಗಲಿ ಅಂತ ಉರ್ದು ಭಾಷೆಯ ಹುಟ್ಟಿನ ಕತೆ ಹೇಳಿದೆ. ಹದಿಮೂರನೇ ಶತಮಾನ ದಲ್ಲಿ ದೆಹಲಿಯ ರಾಜ ಇಲತಾತ್ಮಶ ನ ಮಗಳು ರಾಜಿಯ ಸುಲ್ತಾನಾ ತನ್ನ ಸಿದ್ಧಿ ಗುಲಾಮ ನನ್ನು ಪ್ರೀತಿಸಿ ಮದುವೆ ಯಾದ ನಂತರ ಅವರ ಅವ ಮರ್ಯಾದಾ ಹತ್ಯೆ ಯಾಗುತ್ತದೆ.

ಆ ನಂತರ ದೆಹಲಿಯ ಸುಲ್ತಾನರ ಗಾದಿ ಖಾಲಿ ಯಾಗುತ್ತದೆ. ಇಡೀ ದೇಶದ ಅಧಿಕಾರ ಕೇಂದ್ರ ದಖನ್ ಗೆ ಅಂದರೆ ದಕ್ಷಿಣ ಕ್ಕೆ ಬದಲಾಗುತ್ತದೆ. ಸುಮಾರು ಎರಡು- ಮೂರು ನೂರು ವರ್ಷ ಅಧಿಕಾರ ದಕ್ಷಿಣದ ರಾಜ್ಯಗಳಲ್ಲಿಯೇ ಉಳಿದುಕೊಳ್ಳುತ್ತದೆ.

ಈ ನಡುವೆ ಮುಹಮ್ಮದ್ ಬಿನ ತುಘಲಕ್ ಅವರು ಏಳು ವರ್ಷ ದೆಹಲಿಯಿಂದ ದೌಲತಾಬಾದಿಗೆ ರಾಜಧಾನಿ ಬದಲಾಯಿಸಿ ಮತ್ತೆ ವಾಪಸು ಹೋಗುತ್ತಾರೆ.

ಆ ನಂತರ ದಖನ್ ನ ಬಹಮನಿ ಸಾಮ್ರಾಜ್ಯ ಒಡೆದು ಹೋಗಿ ಐದು ರಾಜ್ಯ ಗಳಾದ ಮೇಲೆ, 16 ನೇ ಶತಮಾನ ದಲ್ಲಿ ನಿಧಾನವಾಗಿ ಹೊಸ ಸುಲ್ತಾನರು ಬಂದು ದೆಹಲಿ ಯ ಪ್ರಭಾವ ವನ್ನು , ಅದರ ಪ್ರಾದೇಶಿಕ ಗಡಿಗಳನ್ನು ವಿಸ್ತರಿಸಿದರು .

ಈ ನಡುವೆ ದಕ್ಷಿಣ ಹಾಗೂ ಉತ್ತರ ಭಾರತದ ನಡುವೆ ರಾಜಕೀಯ, ಆಡಲಿತ, ವ್ಯಾವಹಾರಿಕ ಹಾಗೂ ಸಾಂಸ್ಕೃತಿಕ ಸಂಬಂಧ ಗಳು ಗಟ್ಟಿಯಾದವು.

ಹದಿನೈದನೇ ಶತಮಾನದ ಆರಂಭ ದಲ್ಲಿ ಫಿರೋಜ್ ಷಾ, ಶಹಾ ಜಹಾನ್ ಹಾಗೂ ನಾಸಿರ್ ಮುಹಮ್ಮದ್ ಷಾ ಅವರ ಕಾಲದಲ್ಲಿ ಹೊಸ ಸೈನಿಕ ನೇಮಕಾತಿ ನೀತಿ ಯ ಪ್ರಯೋಗ ವಾಯಿತು. ಸುಲ್ತಾನರ ಸೈನ್ಯ ದಲ್ಲಿ ಕೇವಲ ಒಂದೇ ಪ್ರದೇಶದ ಸೈನಿಕರು ಇದ್ದರೆ ಬಂಡಾಯದ ಭೀತಿ ಇದ್ದುದರಿಂದ ಪ್ರತಿ ತುಕಡಿ ಯಲ್ಲಿ ಬೇರೆ ಬೇರೆ ಪ್ರದೇಶದಿಂದ ಬಂದ ಯುವಕರನ್ನು ಸೇರಿಸಲಾಯಿತು.

ಅವರು ಒಬ್ಬರಿಗೊಬ್ಬರು ಮಾತನಾಡಲು ಆರಂಭಿಸಿ ಒಂದು ಸಂಪರ್ಕ ಭಾಷೆ ಹುಟ್ಟು ಹಾಕಿದರು. ಅದು ಉರ್ದು. ಹೀಗಾಗಿಯೇ ಅದಕ್ಕೆ ದಂಡು ಪ್ರದೇಶದ ಭಾಷೆ, ಸೈನಿಕರ ಭಾಷೆ, ಲಷ್ಕರಿ ಜಬಾನ, ಖಡಿ ಬಾಲಿ, ಹಿಂದೂಸ್ತಾನಿ, ಅಂತಾರೆ . ಬೇರೆ ಬೇರೆ ಭಾಷೆ ಸೇರಿದ್ದರಿಂದ ರೇಖತಾ ಅಥವಾ ಮಿಶ್ರ ಭಾಷೆ ಅಂತಾರೆ ಅಂತಲೂ ಹೇಳಿದೆ.

ಅವರಿಗೆ ಅರ್ಥ ಆಗಲಿಲ್ಲ. ಯಾಕೆ ಅಂದರೆ ಅವರು ಈ ಭಾಷೆ ಯನ್ನು ಯಾರೋ ವಿದೇಶಿ ದಾಳಿ ಕೋರರು ನಮ್ಮ ಬಡ ಭಾರತೀಯರ ಮೇಲೆ ಹೇರಿದ್ದ ಭಾಷೆ ಇದು ಅಂತ ತಿಳಿದು ಕೊಂಡಿದ್ದರು. ಅದು ಅಪ್ಪಟ ಭಾರತೀಯ ಭಾಷೆ, ಅದು ದಖನ್ ಹಾಗೂ ಉತ್ತರ ಹಿಂದೂಸ್ತಾನದ ಪರಸ್ಪರ ಪ್ರಭಾವ ದಿಂದ ಹುಟ್ಟಿದ್ದು ಎಂದಿದ್ದು ತಲೆಗೆ ಹೋಗಿರಲಿಲ್ಲ.
ಟಿಪಿಕಲ್ ಅಖಿಲ ಭಾರತ ಸೇವೆಯ ಅಧಿಕಾರಿಗಳಂತೆ ಅವರು ಹೂಂ ಅನ್ನುತ್ತಾ ಸಾಗಿದರು. ಆದರೂ ಅವರಿಗೆ ಸಂದೇಹ ಹೋಗಿರಲಿಲ್ಲ. ಸಂಜೆ ನನ್ನನ್ನು ಮತ್ತು ನಮ್ಮ ಸ್ನೇಹಿತ ರನ್ನು ಚಹಾ ಕ್ಕೆ ಕರೆದರು. ಅವರ ತಲೆಯ ಹುಳು ಹೋಗಿಸಿ ಕೊಳ್ಳಲು ಈ ಕಾರ್ಯಕ್ರಮ ಅಂತ ನನಗೆ ಗೊತ್ತಿತ್ತು.

ಅಲ್ಲಿ ಮತ್ತೆ `ಮಿಸ್ಟರ್ ಬಹಾದುರ್, ನೀವು ಹೇಳುತ್ತಾ ಇದ್ದಿರಲ್ಲಾ, ಅದು ಉರ್ದು ಬಗ್ಗೆ, ಅದು ಇನ್ನೊಮ್ಮೆ ಹೇಳಬಹುದಾ’ ಅಂತ ಅಂದ್ರು. ನಾನು ಮತ್ತೆ ಹೇಳಿದೆ. ಅವರು ಗುಡ್ ಬಾಯ್ ಗಳಂತೆ ನಡು ನಡುವೆ ಪ್ರಶ್ನೆ ಕೇಳಿ ಸಂದೇಹ ಬಗೆ ಹರಿಸಿ ಕೊಂಡರು. ಈ ಮಾತನ್ನು ಏಕೆ ಹೇಳುತ್ತೀರಿ? ಎಲ್ಲಿ ಓದಿದ್ದೀರಿ ? ಅಂತ ಕೇಳಿದರು ಈ ಪ್ರಶ್ನೆ ಗೆ ಉತ್ತರ ಹೇಳುವಾಗ ನಾನು ಸ್ವಲ್ಪ ಹುಷಾರಿನಿಂದ ಮಾತಾಡುತ್ತೇನೆ. ಈ ಪುಸ್ತಕ ದಲ್ಲಿ ಓದಿದೆ ಅಂತ ಹೇಳಿದರೆ ಅದು ನಿಮ್ಮ ಹತ್ತಿರ ಇದೆಯಾ? ನನಗೆ ಸ್ವಲ್ಪ ಕೊಡ್ತೀರಾ ? ಅನ್ನುವುವು ಮುಂದಿನ ಪ್ರಶ್ನೆಗಳು.
ಹೀಗಾಗಿ ನಾನು ಆಧುನಿಕ ಆಕಡೆಮಿಕ ಭಾಷೆ ಯಲ್ಲಿ ಉತ್ತರ ಕೊಡುತ್ತೇನೆ. ಅದು ತುಂಬ ವೆಲ್ ಡಾಕ್ಯುಮೆಂಟೆಡ್ , ಅನೇಕರು ಬರೆದಿದ್ದಾರೆ, ಸೆಮಿನಾರ್ ಭಾಷಣ ಮಾಡಿದ್ದಾರೆ, ಅಂತ ಹೇಳಿ ಬಿಡುತ್ತೇನೆ. ಆದರೆ ಅದರಲ್ಲಿ ಒಬ್ಬ ಅಧಿಕಾರಿ ತುಂಬ ಆಸಕ್ತಿ ತೋರಿದ್ದರಿಂದ ನಾನು ಇಂಡೋ ಆರ್ಯನ್ ಭಾಷಾ ಇತಿಹಾಸದ ಪುಸ್ತಕ ಗಳು , ಅನ್ನ ಮೇರಿ ಶಿಮೆಲ್, ವಿನ್ಸೆಂಟ್ ಸ್ಮಿತ್, ಜಾರ್ಜ್ ಮೀಸೆಲ್ , ಇತ್ಯಾದಿ ತಜ್ಞರ ಪುಸ್ತಕ ಗಳ ಬಗ್ಗೆ ಹೇಳಿದೆ.

`ನೀವು ತುಂಬ ಪ್ರಭಾವಿ ಅಧಿಕಾರಿ, ನಿಮಗೆ ಸರಳವಾಗಿ ಇವು ಸಿಕ್ಕಿ ಬಿಡುತ್ತವೆ’ ಅಂದೆ. ಅನೇಕ ವರ್ಷ ಗಳ ನಂತರ ಆ ಅಧಿಕಾರಿ ಪದ ಉನ್ನತಿ ಪಡೆದು ದೆಹಲಿ ಗೆ ಹೋದಾಗ ಅಲ್ಲಿಂದ ಫೋನು ಮಾಡಿದರು. ಅಲ್ಲಿ ಅವರಿಗೆ ಕಾಶ್ಮೀರ ದ ಒಬ್ಬ ತಜ್ಞ ರ ಭೇಟಿ ಯಾಗಿ ಅವರು ಕಾಶ್ಮೀರಿ ದ್ರಾವಿಡ ಭಾಷೆ ಅಂತ ಹೇಳಿದಾಗ ಇವರಿಗೆ ಆಶ್ಚರ್ಯ ವಾಯಿತು. ಅವರ ಜೊತೆ ಒಂದೆರಡು ಸಾರಿ ಚಹಾ ಕುಡಿದು, ಸಣ್ಣಗೆ ಉರ್ದು ವಿನ ಸ್ವರೂಪ, ಅದರ ಬೆಳವಣಿಗೆಯ ಇತಿಹಾಸ ಎಲ್ಲ ಮಾತಾಡಿದರು. ಕೆಲವು ದಿನ ಗಳ ಹಿಂದೆ ನಾನು ಪುಸ್ತಕ ದ ಅಂಗಡಿಗೆ ಹೋಗಿ ನೀವು ಹೇಳಿದ ಪುಸ್ತಕ ತಂದೆ. ಓದುತ್ತಾ ಇದ್ದೇನೆ. ನನ್ನ ಅನೇಕ ಪೂರ್ವಗ್ರಹಗಳು ಪರಿಹಾರ ವಾದವು, ಅಂದ್ರು.
ನೀವು ಒಬ್ಬರು ಆಸಕ್ತಿ ಯಿಂದ ವಹಿಸಿದ್ದರಿಂದ ಹೀಗೆ ಆಯಿತು. ಆದರೆ ನಿಮ್ಮ ಹಾಗೆಯೇ ವಿಚಾರಗಳನ್ನು ಇಟ್ಟುಕೊಂಡಿರುವ ಅನೇಕರ ಕತೆ ಏನು ಅಂತ ಅಂದೆ. ಹೌದು ಎಂದು ನಿಟ್ಟುಸಿರು ಬಿಟ್ಟರು.

ಹಾಗಾದರೆ ಉರ್ದು ಭಾಷಿಕರು ಎನ್ನುವರು ಯಾರು? ಅದು ಪ್ರದೇಶದ ಭಾಷೆಯೇ ಅಥವಾ ಧರ್ಮದ ಭಾಷೆಯೇ , ಅದು ಭಾರತೀಯ ಭಾಷೆಯೇ, ಉತ್ತರದ್ದೇ, ದಕ್ಷಿಣ ದ್ದೇ ? ಇಂತಹ ಪ್ರಶ್ನೆ ಗಳಿಗೆ ಉತ್ತರಿಸಲು ಇತಿಹಾಸ ಜ್ಞಾನ ಅಷ್ಟೊಂದು ಬೇಕಾಗಿಲ್ಲ. ಸ್ವಲ್ಪ ಸಾಮಾನ್ಯ ಜ್ಞಾನ ಸಾಕು.

ಇಪ್ಪತ್ತನೇ ಶತಮಾನದ ಮೊದಲಿಗೆ ಬನಾರಸಿ ದೇವ ನಾಗರಿ ಉತ್ಥಾನ ಸಮಿತಿ ಯವರು ಹಿಂದೂಸ್ತಾನಿ ಭಾಷೆಯನ್ನು ದೇವ ನಾಗರಿ ಯಲ್ಲಿ ಯೇ ಬಾರಿಯ ಬೇಕು ಎಂದು ಆಂದೋಲನ ಆರಂಭಿಸಿದರು. ಅಲ್ಲಿಯ ವರೆಗೂ ಉರ್ದು ಅಥವಾ ಹಿಂದವಿ ಅಥವಾ ಹಿಂದೂಸ್ತಾನಿ ಭಾಷೆ ಯನ್ನು ಪರ್ಷಿಯನ್, ಅರೇಬಿಕ್, ಸಿಂಧಿ, ಉರ್ದು ಭಾಷೆ ಬರೆಯಲು ಬಳಸುವ ನಸತಾಲೀಕ ಲಿಪಿ ಯಲ್ಲಿಯೇ ಬರೆಯುತ್ತಿದ್ದರು.

ಯಾಕೆ ಎಂದರೆ ಆಗ ಅದು ಪ್ರಚಲಿತ ವಾಗಿತ್ತು. ಆಂಗ್ಲೋ – ರೋಮನ್ನರ ರಾಜಕೀಯ ಪ್ರಾಬಲ್ಯ ಇದ್ದ ಯೋರೋಪಿನ ದೇಶ ಗಳ ಲ್ಲೆಲ್ಲಾ ಆ ಲಿಪಿ ಬಳಕೆ ಯಾದಂತೆ, ಇಂಡೋ ಯುರೋಪಿಯನ್ ಪ್ರಾಬಲ್ಯ ಇದ್ದ ಕಡೆ ಎಲ್ಲಾ ಪರ್ಷಿಯನ್ ಲಿಪಿ ಚಾಲ್ತಿ ಯಲ್ಲಿ ಇದ್ದಿತು.

ಇದು ಕೇವಲ ಪರ್ಷಿಯನ್ – ಅರೇಬಿಕ್ ಭಾಷೆ ಗಳಿಗೆ ಸೀಮಿತ ವಾಗಿಲ್ಲ. ಉತ್ತರ ಆಫ್ರಿಕಾದ ಭಾಷೆಗಳು, ರಷಿಯಾ ಖಂಡದ ದಕ್ಷಿಣದ ಭಾಷೆಗಳು, ಹಾಗೂ ಉತ್ತರ ಭಾರತದ ಪ್ರಮುಖ ಭಾಷೆ ಯಾದ ಸಿಂಧಿ ಹಾಗೂ ಅದರ ಉಪ ಭಾಷೆ ಗಳು ಸಹಿತ ನಸತಾಲೀಕ ಲಿಪಿ ಉಪಯೋಗಿಸುತ್ತವೆ. ಸಿಖ್ ಧರ್ಮ ಗುರು ಅರ್ಜುನ್ ಸಿಂಘ್ ಅವರ ವರೆಗೂ ಪಂಜಾಬಿ ನಲ್ಲಿ ನಸತಾಲೀಕ ಅನ್ನು ಹೋಲುವ ಷಾ ಮುಖಿ ಎನ್ನುವ ಲಿಪಿ ಬಳಸಲಾಗುತ್ತಿತ್ತು.

ದೇವರ ನಗರಿ ಯಲ್ಲಿ ಬಳಸುವ ಈ ಲಿಪಿಯನ್ನು ಹಿಂದಿ ಭಾಷಿಕರು ಉಪಯೋಗಿಸಬೇಕು. ಅದೇ ಶ್ರೇಷ್ಟ' ಎನ್ನುವ ವಾದ ಶುರು ಆಯಿತು. ,ನಸತಾಲೀಕಿ ತುರ್ಕಿ, ಹಸ್ತ ಲಿಖಿ ಹಿಂದವಿ’, ಎನ್ನುವ ಘೋಷಣೆ ಕೇಳಿ ಬಂದವು. `ನೀವು ಬರೆಯುವುದು ಸೀದೆ ಹಾಥ ಅಥವಾ ಉಲ್ಟಾ ಹಾಥ ಎನ್ನುವುದರ ಮೇಲೆ ನೀವು ಯಾರು ಎನ್ನುವುದು ನಿರ್ಧಾರ ವಾಗುತ್ತದೆ’ ಎನ್ನುವ ಮಾತು ಜೋಕಿನಂತೆ ಆರಂಭ ವಾಗಿ, ಜನರನ್ನು ನಮ್ಮವರು, ಇತರರು ಎಂದು ವಿಭಾಗಿಸುವ ಷಡ್ಯಂತ್ರ ವಾಗಿ ಹೋಯಿತು.

ತುರಕಿಸ್ತಾನ ದವರು ಅಂದರೆ ಮುಸ್ಲಿಮರು ಬಲ ದಿಂದ ಎಡ ಬರೆಯುತ್ತಾರೆ ಅದು ಅಶುಭ . ನಾವು ಎಡ ದಿಂದ ಬಲಕ್ಕೆ ಬರೆಯುತ್ತೇವೆ, ಅದು ಶುಭ ಎನ್ನುವ ಕಲ್ಪನೆ ಬಿತ್ತಲಾಯಿತು .
ಇಂದಿನ ಆಧುನಿಕ ಯುಗದಲ್ಲಿ, ಎಲ್ಲರಿಗೂ ಸುಲಭ ವಾಗಿ, ಸರಳವಾಗಿ ಮುಕ್ತ ಮಾಹಿತಿ ದೊರಕುವ ಕಾಲದಲ್ಲಿ ಅವೈಜ್ಞಾನಿಕ ನಂಬಿಕೆ ಗಳನ್ನು ಕ್ಷಣಾರ್ಧ ದಲ್ಲಿ ವೈರಲ್ ಮಾಡಬಹುದಾದರೆ 120 ವರ್ಷ ದ ಹಿಂದೆ ಈ ಕೆಲಸ ಎಷ್ಟು ಸಲೀಸು ಆಗಿರಬಹುದು ಎನ್ನುವುದನ್ನು ಊಹಿಸು ವುದು ಸುಲಭ. ಬಲದಿಂದ ಎಡಕ್ಕೆ ಬರೆಯುವುದು ಶುಭ – ಅಶುಭದ ಲಕ್ಷಣ ವೇನೂ ಅಲ್ಲ. ಯೇಸು ಕ್ರಿಸ್ತನ ಕಾಲದಲ್ಲಿ ಮಾತಾಡುತ್ತಿದ್ದರು ಎನ್ನಲಾದ ಅರೆಮೀಕ ಭಾಷೆ ಹಾಗೂ ಪವಿತ್ರ ಭೂಮಿ ಇಸ್ರೇಲಿನ ಹೀಬ್ರೂ ಎರಡನ್ನೂ ಹೀಗೆಯೇ ಬರೆಯುತ್ತಾರೆ.

ಭಾರತದ ಸಂವಿಧಾನ ರಚನಾ ಸಮಿತಿಯ ಭಾಷಾ ಸಭೆ ಯಲ್ಲಿ ಒಂಬತ್ತು ಜನ ಇದ್ದರು. ಅಲ್ಲಿ ಆಡಳಿತ ಭಾಷೆಯ ಚರ್ಚೆ ಬಂದಾಗ ಒಬ್ಬರು ಗೈರು ಹಾಜಾರಾದರು. ಹಿಂದೂಸ್ತಾನಿ- ಹಿಂದಿಗೆ ಸಮನಾಗಿ ವೋಟು ಬಿದ್ದವು. ಅಧ್ಯಕ್ಷ ಬಾಬು ರಾಜೇಂದ್ರ ಪ್ರಸಾದ್ ಅವರ ವೀಟೋ ಮತ ದಿಂದಾಗಿ ಹಿಂದಿ ಹಾಗೂ ದೇವ ನಾಗರಿ ಎನ್ನುವುದು ನಮ್ಮ ಆಡಳಿತ ಭಾಷೆ ಎನ್ನುವ ಪ್ರಸ್ತಾವನೆ ಪಾಸು ಆಯಿತು. ಇದನ್ನು ಬನಾರಸ ಹಿಂದೂ ವಿಶ್ವ ವಿಧ್ಯಯಲಿದ ಮನೋಜ ಯಾದವ್ ಅವರು ತಮ್ಮ ಹಿಂದಿ- ಉರ್ದು ಭಾಷೆಗಳ ಇತಿಹಾಸ ಎನ್ನುವ ಪುಸ್ತಕ ದಲ್ಲಿ ಉಲ್ಲೇಖಿಸಿದ್ದಾರೆ.

ಕಳೆದ 50 -60 ವರ್ಷ ಗಳಲ್ಲಿ , ರಾಜಕೀಯ ಕಾರಣ ಗಳಿಂದಾಗಿ ಉರ್ದು ಎನ್ನುವುದು ಮುಸಲ್ಮಾನರ ಭಾಷೆ ಎನ್ನುವ ನಂಬಿಕೆ ಹರಡಿದೆ.

ಮುಂಚೆ ಹೀಗೆ ಇರಲಿಲ್ಲ. ಭಾರತದ ಮೊದಲ ಪತ್ರಿಕೆ ಬೆಂಗಾಲ್ ಗಜೆಟ್ ಇಂಗ್ಲೀಷ್ ಭಾಷೆಯಲ್ಲಿ ಪ್ರಕಟವಾಯಿತು. ನಂತರದ್ದು ಸಮಾಚಾರ ದರ್ಪಣ, ಬೆಂಗಾಲಿ. ಮೂರನೇ ಪತ್ರಿಕೆ ಜಾಮ್ ಎ ಜಹಾನ್ ನುಮಾ (ಮುಂಜಾವಿನ ಮುನ್ನೋಟ ) ಉರ್ದು. ಬೆಂಗಾಲಿ ಕವಿ ಹರಿಹರ ದತ್ತ ಅವರು ಇದನ್ನು ಆರಂಭಿಸಿದ್ದು 1822 ದಲ್ಲಿ. ಅದರ ಸಂಪಾದಕರು ಸದಾ ಸುಖ ಲಾಲ್. ಮುನ್ಷಿ ಹರಸುಖ ರೇ ಅವರು 1850 ರಲ್ಲಿ ಶುರು ಮಾಡಿದ ಕೋಹಿನೂರ್ ಬೇಗ ಜನಪ್ರಿಯವಾಯಿತು.

ಸ್ವಾಮಿ ದಯಾನಂದ ಸರಸ್ವತಿ ಅವರು ಹುಟ್ಟು ಹಾಕಿದ ಆರ್ಯ ಸಮಾಜದ ಪತ್ರಿಕೆ ಮಿಲಾಪ ಯನ್ನು ಉರ್ದು ಹಾಗೂ ಹಿಂದಿ ಯಲ್ಲಿ ಛಾಪಿಸಲಾಗುತ್ತಿತ್ತು.

ಸ್ವತಂತ್ರ ಸಂಗ್ರಾಮದ ಕ್ರಾಂತಿ ಕಹಳೆ ಎನ್ನಿಸಿಕೊಂಡಿದ್ದ ಗದ್ದರ, ವತನ್, ಜಮೀನ್ದಾರ, ನಕಿಬೇ ಹ ಹಂದರ್ದ , ಅಲ್ ಹಿಲಾಲ, ಮದಿನಾ, ಪ್ರತಾಪ್, ತೇಜ, ಕೌಮೀ ಆವಾಜ ಪತ್ರಿಕೆಗಳು ಉರ್ದು ಭಾಷೆಯಲ್ಲಿ ಪ್ರಕಟ ಗೊಂಡವು. ಇವುಗಳಲ್ಲಿ ಕೆಲವು ಮಾತ್ರ ಮುಸ್ಲಿಮರ ಒಡೆತನ ಅಥವಾ ಸಂಪಾದಕತ್ವ ದಲ್ಲಿ ಇದ್ದವು.

ಇನ್ನು ಹನ್ನೆರಡನೇ ಶತಮಾನದಲ್ಲಿ ಆರಂಭ ವಾಗಿ 16 ನೇ ಶತಮಾನದಲ್ಲಿ ಮುಕ್ತಾಯ ವಾದ ದೆಹಲಿ ಸುಲ್ತಾನ್ ರ ಆಡಲಿತ ಅಥವಾ 16 ರಿಂದ 19 ನೇ ಶತಮಾನದ ವರೆಗೂ ಇದ್ದ ಮುಘಲ್ ಸಾಮ್ರಾಜ್ಯ ದಲ್ಲಿ ಆಡಳಿತ ಭಾಷೆಯಾಗಿ ಉರ್ದು ಇರಲಿಲ್ಲ. ಅಲ್ಲಿ ಇದ್ದದ್ದು ಪರ್ಷಿಯನ್ ಭಾಷೆ.
ಈ ದೇಶದಲ್ಲಿ ಉರ್ದು ಆಡಳಿತ ಭಾಷೆಯಾಗಿ ಇದ್ದ ಏಕೈಕ ರಾಜ್ಯ ಹೈದರಾಬಾದು . ಅದೂ ಕೊನೆಯ ನಿಜಾಮ ಒಸಮಾನ ಅಲಿ ಖಾನ್ ಅವರ ಕಾಲದ 30 ವರ್ಷ ಮಾತ್ರ.
ಪರ್ಷಿಯನ್ ಅನ್ನು ಷಾಹಿ ಜುಬಾನ್ (ರಾಜರ ಭಾಷೆ ) ಅಂತಲೂ, ಉರ್ದು ವನ್ನು ಜುಬಾನ್- ಎ ಆವಾಮ (ಜನರ ಭಾಷೆ ) ಅಂತ ಲೂ ಕರೆಯಲಾಗುತ್ತಿತ್ತು.

ನೀವು ಹೈದರಾಬಾದಿಗೆ ಹೋದಾಗ ಸಣ್ಣ ಹೋಟೆಲು ಗಳಲ್ಲಿ ಚಹಾ ಕುಡಿದರೆ, ನೀವು ಕೇಳದೆ ಇದ್ದರೂ ಕೂಡ ನಿಮಗೆ ಬಿಸ್ಕೀಟು ಕೊಡುತ್ತಾರೆ. ನಿಮ್ಮ ಮೇಜಿನ ಮೇಲೆ ಒಂದು ಬುಟ್ಟಿ ಬಿಸ್ಕೀಟು ಇಟ್ಟು ಹೋಗುವ ವೇಟರು ನೀವು ಚಹಾ ಕೂಡಿದ ಮೇಲೆ ಆ ಬುಟ್ಟಿಯನ್ನು ವಾಪಸ್ ತೆಗೆದು ಕೊಂಡು ಹೋಗುತ್ತಾನೆ. ನೀವು ತಿಂದಷ್ಟಕ್ಕೆ ಮಾತ್ರ ಬಿಲ್ಲು ಕೊಡುತ್ತಾನೆ. ಆ ಬಿಸ್ಕೀಟೀನ ಹೆಸರು ಒಸಮಾನಿಯ . ಅದು ಕೊನೆಯ ನಿಜಮರ ಹೆಸರು.

ಅದರ ಹಿಂದಿನ ಕತೆ ರೋಚನೀಯ. ಜಗತ್ತಿನ ಬೇಕರಿ ಗಳು ಯುರೋಪಿನ ಅಡುಗೆ ಶೈಲಿ ಬಳಸುವುದು ಹಾಗೂ ಅಲ್ಲಿ ತಯಾರಾದ ಆಹಾರ ಸಾಮಗ್ರಿ ಸ್ಮರಕ್ಷಿಸಿ ಇಡಲು ಫ್ರಿಜ್ ಬೇಕಾಗುವುದನ್ನು ಗಮನಿಸಿದ ಒಸಮಾನ ಅಲಿ ಖಾನ್ ಅವರು ಟರ್ಕಿ ಯಂತಹ ಉಷ್ಣ ಪ್ರದೇಶದ ಬೇಕರಿ ಗಳನ್ನು ಅಧ್ಯಯನ ಮಾಡಲು ಹೈದರಾಬಾದಿನಿಂದ ಒಂದು ತಂಡವನ್ನು ಕಳಿಸಿದರು. ಅಲ್ಲಿಂದ ಕುಶಲ ಬೇಕರಿ ಕೆಲಸ ಗಾರರನ್ನು ಕರೆಸಿ ತಮ್ಮ ರಾಜ್ಯ ದ ಆದ್ಯಂತ ಅಂದರೆ ಇಂದಿನ ಆಂಧ್ರ – ಮಹಾರಾಷ್ಟ್ರ- ಕರ್ನಾಟಕ ರಾಜ್ಯ ಗಳ ಕೆಲವು ಪ್ರದೇಶ ಗಳಲ್ಲಿ ಸ್ಥಳೀಯ ಯುವಕರಿಗೆ ತರಬೇತಿ ನೀಡಿದರು.
ಇದನ್ನು ಕಲಿತು ಬೇಕರಿ ಆರಂಭಿಸಿದ ಕುಟುಂಬಗಳು ರಾಜರ ಮೇಲಿನ ಅಭಿಮಾನಕ್ಕೆ ಆ ಬಿಸ್ಕೀಟ ಗೆ ಒಸಮಾನಿಯ ಅಂತ ಹೆಸರು ಇಟ್ಟರು. ದಖನ್ ನ ಬೇಕರಿ ಯಲ್ಲಿ ತಯಾರಾಗುವ ಬಿಸ್ಕೀಟು, ಬ್ರೆಡ್ಡು, ಕೇಕ್, ಸಿಹಿ ತಿಂಡಿ, ಹಾಲಿನ ತಿಂಡಿ, ಎಲ್ಲವೂ ಈಸ್ಟ್ ಇಲ್ಲದೆ ತಯಾರು ಆಗುತ್ತವೆ, ಒಣ ಹವೆಯಲ್ಲಿ , ಫ್ರಿಜ್ ಇಲ್ಲದೆ ಅನೇಕ ದಿನ ಉಳಿಯುತ್ತವೆ, ತಮ್ಮದೇ ಆದ ವಿಶಿಷ್ಟ ರುಚಿ ಹೊಂದಿರುತ್ತವೆ.

ದಖನ್ ಪ್ರಾಂತದ ಅಭಿವೃದ್ಧಿ ಯಲ್ಲಿ ನಿಜಾಮರ ಕೊಡುಗೆ ಅನೇಕ. ಅವರು ನೀರಾವರಿ ಯೋಜನೆಗಳು, ಉದ್ದಿಮೆ ಗಳು, ಸುಧಾರಿತ ತಳಿ ಹಾಗೂ ಕಸಿ ಯಂತಹ ಕೃಷಿ ತಂತ್ರಜ್ಞಾನ ಕ್ಕೆ ಒಟ್ಟು ಕೊಟ್ಟರು. ಅವರ ಕಾಲದಲ್ಲಿ ರಸ್ತೆ, ಸೇತುವೆ, ನಗರ ಯೋಜನೆ, ನೈರ್ಮಲ್ಯ, ಒಳ ಚರಂಡಿ, ಸ್ಮಾರಕ ಹಾಗೂ ಇತರ ಕಟ್ಟಡಗಳು ರೂಪುಗೊಂಡವು.

ವಜ್ರ, ಚಿನ್ನ, ಬೆಳ್ಳಿ ಆಭರಣ ತಯಾರಿಕೆ, ಖಾದಿ, ನೂಲು ತಯಾರಿಕೆ, ಕೈ ಮಗ್ಗ ಹಾಗೂ ಸುಧಾರಿತ ಮಗ್ಗ, ಗ್ರಾಮೋದ್ಯೋಗ, ನಿರ್ಮಲ, ಬಿದರಿ, ಜರದೋಜಿ, ಮುಂತಾದ ಕರ ಕುಶಲ ಕಲೆ ಗಳನ್ನು ಬೆಂಬಲಿಸಿ ದರು. ದೇವಸ್ತಾನ, ಚರ್ಚು ಗಳನ್ನು ಕಟ್ಟಿದರು, ದಾನ -ದತ್ತಿ ಕೊಟ್ಟರು.

ಪ್ರಜೆ ಗಳಿಗೆ ಆಧುನಿಕ ಶಿಕ್ಷಣ ನೀಡಬೇಕು ಎಂದು ವಿಶ್ವ ವಿದ್ಯಾಲಯ, ವೈದ್ಯ ಕಾಲೇಜು, ಇಂಜಿನೀಯರಿಂಗ್ ಕಾಲೇಜು, ಮಹಿಳಾ ಕಾಲೇಜು, ಕೃಷಿ ತರಬೇತಿ ಕೇಂದ್ರ, ಆರಂಭಿಸಿದರು.

ಸುಮಾರು 250 ವರ್ಷ ಆಳಿದ ನಿಜಾಮರ ಆಡಳಿತದ ಕೊನೆಯ ಮೂರು ವರ್ಷ ಕರಾಳ ಕಾಲ ಎನ್ನಿಸಿ ಕೊಂಡಿತು. ಅವರ ಬೆಂಬಲಿಗರಾಗಿದ್ದ ಕೆಲವರು ರಜಾಕಾರ ಎಂಬ ಸ್ವಯಂ ಸೇವಕ ದಳ ಕಟ್ಟಿಕೊಂಡು ಕೋಮು ಗಲಭೆ, ದಂಗೆ ಮಾಡಿಸಿ ಹಿಂಸಾಚಾರಕ್ಕೆ ಇಳಿದರು. ಇತಿಹಾಸ ಸರಿಯಾಗಿ ತಿಳಿಯದ ಯುವ ಜನರಿಗೆ ನಿಜಮರ ಬಗ್ಗೆ ಕಾಯಂ ತಪ್ಪು ಕಲ್ಪನೆ ಬರುವಂತೆ ಆಯಿತು.

ದೆಹಲಿ ಸುಲ್ತಾನರು ಭಾರತ ಮೂಲ ದವರು. ಬೇರೆ ಎಲ್ಲಿಂದಲೋ ದಂಡು ಎತ್ತಿ ಬಂದವರಲ್ಲ. ಅವರು ರಾಜಕೀಯ, ಆಡಳಿತ, ಕೃಷಿ, ಮೋಜಣಿ, ವ್ಯಾಪಾರದ ಲೆಕ್ಕ ಪತ್ರ ಪದ್ಧತಿ, ನೀರಾವರಿ, ಕಲೆ, ಸಾಹಿತ್ಯ, ಕರ ಕುಶಲ ಕಲೆ, ಪ್ರೋತ್ಸಾಹಿಸಿದರು .

ಕರ್ನಾಟಕ ದ ಬಹು ಭಾಗವನ್ನು ಆಳಿದ ಬಹಮನಿ- ಅದಿಲ್ ಷಾಹಿ ಸುಲ್ತಾನರು ಭಾವೈಕ್ಯ ದ ಸಮಾಜ ನಿರ್ಮಾಣ ಮಾಡಲು ಶ್ರಮಿಸಿದರು. ಉತ್ತರದ ಜಾಜಿಯ ಸುಂಕ ದಕ್ಷಿಣ ದಲ್ಲಿ ಕಾಣದು. ಪ್ರಾಚೀನ ಕಾಲದಿಂದ ಹಿಡಿದು ಇಂದಿನ ವರೆಗೂ ಎಲ್ಲಾ ಧರ್ಮದ ಸ್ಮಾರಕ ಗಳು ಉಳಿದು ಕೊಂಡಿರುವುದು ದಕ್ಷಿಣ ದಲ್ಲಿ ಮಾತ್ರ ಎಂದು ಏಶಿಯ ದ ತುಂಬ ಸಂಚಾರ ಮಾಡಿದ ಛಾಯಾಚಿತ್ರಗ್ರಾಹಕರಾದ ಕ್ಲಿರಿ ಆನ್ ಅವರು ತಮ್ಮ `ದಖನ್ ಚಿತ್ರಗಳು’ ಎಂಬ ಪುಸ್ತಕದಲ್ಲಿ ಹೇಳಿದ್ದಾರೆ.

ಬಹಮನಿ ಪ್ರಧಾನ ಮಂತ್ರಿ ಯಾಗಿದ್ದ ಮಹಮೂದ ಗವಾನ ಇಂದಿಗೆ 600 ವರ್ಷದ ಹಿಂದೆ ಬೀದರಿನಲ್ಲಿ ವಿಶ್ವ ಮಟ್ಟ ದ ವಿಶ್ವ ವಿದ್ಯಾಲಯ ನಿರ್ಮಿಸಿದ. ಅಲ್ಲಿಗೆ ಕಲಿಯಲು- ಕಲಿಸಲು ಜಗತ್ತಿನ ಅನೇಕ ಕಡೆಗಳಿಂದ ವಿದ್ಯಾರ್ಥಿ- ಶಿಕ್ಷಕರು ಬಂದರು. ಅಲ್ಲಿ ಗಣಿತ, ಕಾವ್ಯ, ಅರ್ಥ ಶಾಸ್ತ್ರ, ಭೂಗೋಳ ಶಾಸ್ತ್ರ, ಯುದ್ಧ ಕಲೆ, ಸಾರ್ವಜನಿಕ ಆಡಳಿತ ಮುಂತಾದ ವಿಷಯ ಗಳನ್ನು ಕಲಿಸಲಾಗುತ್ತಿತ್ತು.

ಅಲ್ಲಿಯ ವರೆಗೆ ರಾಜ- ಸುಲ್ತಾನರ ಮನಸ್ಸಿಗೆ ಬಂದಂತೆ ನಡೆಸಲಾಗುತ್ತಿದ್ದ ಆಡಳಿತ ವನ್ನು ಶಿಸ್ತು ಬದ್ಧ ವಿಷಯವಾಗಿ ಪರಿಗಣಿಸಲಾಯಿತು. ಸರಕಾರಿ ನೌಕರರ ಸಂಬಳ ಹೆಚ್ಚು ಮಾಡಲು ಆಡಳಿತ ಸುಧಾರಣ ಸಮಿತಿ, ಸಂಬಳ ನಿಗದಿ ಸಮಿತಿ ರಚಿಸಲಾಯಿತು. ಆಧುನಿಕ ಕಾಲದ ಜನ ಕಲ್ಯಾಣದ ಕೆಲಸಗಳು ಅಂತ ಅನ್ನಿಸಿಕೊಂಡಿರುವ ವಿಧವಾ ಪಿಂಚಣಿ, ವಿದ್ಯಾರ್ಥಿ ವೇತನ, ಮಹಿಳಾ ವಿದ್ಯಾರ್ಥಿ ನಿಲಯ ಗಳನ್ನು ಗವಾನ ನ ಕಾಲದಲ್ಲಿ ಆರಂಭಿಸಲಾಯಿತು. ಇದನ್ನು ಈಷಕಿ, ಅಫಣಾಸಿ ನಿಕೆಟಿನ, ಜಾಮಿ, ಮುಂತಾದ ಹಿಂದಿನ ಇತಿಹಾಸಕಾರರು, ಹೆಲೆನ್ ಫಿಲೋನ್ , ಜಾರ್ಜ್ ಮೈಕೆಲ್, ಸಾರಾ ಮೊಂಡಿನಿ ಮುಂತಾದ ಇಂದಿನ ಕಾಲದ ಸಂಶೋಧಕರು ಉಲ್ಲೇಖಿಸಿದ್ದಾರೆ.

ಸರಸ್ವತಿ ವಂದನೆ ಯಿಂದ ಆರಂಭ ವಾಗುವ ಕಿತಾಬ್ ಎ ನವರಸ ಪುಸ್ತಕ ದ ಲೇಖಕ ಬೀಜಪುರದ ಆದಿಲ್ ಷಾಹಿ ದೊರೆ ಇಬ್ರಾಹಿಂ. ಇವನು ಗಣಪತಿ ಸ್ತೋತ್ರವನ್ನು, ನಮ್ಮ ನೆಲದ ಜನಪದ ದೈವಗಳನ್ನು , ಸ್ಮರಿಸುತ್ತಾನೆ. ಇತರ ರಿಂದ ಜಗದ್ಗುರು ಎನ್ನಿಸಿಕೊಂಡ ಇಬ್ರಾಹಿಂ ತನ್ನನ್ನು ತಾನು `ಮುರಿದ’ (ಶಿಷ್ಯ) ಎಂದು ಕರೆದು ಕೊಳ್ಳುತ್ತಾನೆ. ದಖನ್ ಸೇರಿದಂತೆ ಇಡೀ ಹಿಂದೂಸ್ತಾನ್ ದ ಇತಿಹಾಸ ಬರೆಸಿದ ಆದಿಲ್ ಷಾಹಿ ದೊರೆಗಳು ಅದರಲ್ಲಿ ಕೇವಲ ರಾಜಕೀಯ ಇತಿಹಾಸ ತುಂಬಿಕೊಳ್ಳದಂತೆ, ಅದರಲ್ಲಿ ಸಾಂಸ್ಕೃತಿಕ, ಸಾಮಾಜಿಕ ಸಂಗತಿಗಳು ಸಹಿತ ಸೇರಿ ಕೊಳ್ಳುವಂತೆ ನೋಡಿಕೊಂಡರು.

ಐದು ನದಿ ಗಳ ಜಿಲ್ಲೆ ಬಿಜಾಪುರ ದಲ್ಲಿ ಕುಡಿಯುವ ನೀರು ಹಾಗೂ ನೀರಾವರಿ ವ್ಯವಸ್ಥೆಗೆ ಅಡಿಗಲ್ಲು ಹಾಕಿದವರು ಆದಿಲ್ ಷಾಹಿ ದೊರೆಗಳು. ಜಿಲ್ಲೆಯ ಅನೇಕ ಕಡೆ ಭೂಮಿಯ ಕೆಳಗೆ ಮಣ್ಣಿನ ಪೈಪು ಗಳನ್ನು ಹಾಕಿ , ಕೇವಲ ಗುರುತ್ವಾಕರ್ಷಣ ಶಕ್ತಿ ಯಿಂದ ನೀರು ಕೆಳಗಿನಿಂದ ಮೇಲೆ ಹರಿಯುವಂತೆ ಮಾಡುವ ತಂತ್ರಜ್ಞಾನ ಅವರು ರೂಪಿಸಿದರು . ಅವರು 17 ನೇ ಶತಮಾನದಲ್ಲಿ ಕುಮಟಗಿ ಯಿಂದ ಬಿಜಾಪುರ ಕ್ಕೆ ಹಾಕಿದ ಕುಡಿಯುವ ನೀರಿನ ತೆರಕೋಟ ಕಾಲುವೆಗಳು ಇನ್ನೂ ಇವೆ.

ಹಳೆ ಮೈಸೂರಿನ ಬಹು ಭಾಗವನ್ನು ಆಳಿದ ಹೈದರ್ ಅಲಿ ಹಾಗೂ ಟಿಪ್ಪು ಸುಲ್ತಾನ್ ಅವರು ಜನ ಪರ ಆಡಳಿತ ನೀಡಿದರು. ರಾಜಕೀಯ ಪ್ರೇರಿತ ಇತಿಹಾಸ ಕಾರರು ಏನೇ ಹೇಳಿದರೂ ಕೂಡ ಮೈಸೂರು ಸುಲ್ತಾನರ ಕೊಡುಗೆ ಗಳನ್ನು ಮರೆಸಲು ಸಾಧ್ಯ ಇಲ್ಲ. ಅವರು ಗಟ್ಟಿ ಆಡಳಿತ ನಡೆಸಿದರು, ವಿವಿಧ ಧರ್ಮ ಆಚರಣೆ ಮಾಡುವ ಜನರ ಮಧ್ಯೆ ಸಂಬಂಧ ಕೆಡದಂತೆ ನೋಡಿಕೊಂಡರು.

ಅರಾಜಕತೆ ಹಾಗೂ ಅಸಮರ್ಥ ನಾಯಕತ್ವ ದ ನೆವದಲ್ಲಿ ಬ್ರಿಟಿಷರು ರಾಜ- ರಾಣಿ ಯರ ಆಡಳಿತ ಕೊನೆಗಾಣಿಸ ತೊಡಗಿದಾಗ ಅದನ್ನು ಬಹಿರಂಗವಾಗಿ ವಿರೋಧಿಸಿದರು. ಭಾರತೀಯ ರಾಜ ವಂಶಸ್ಥರು ಈಸ್ಟ್ ಇಂಡಿಯಾ ಕಂಪನಿಗೆ ಕಪ್ಪ ಕೊಡಬೇಕು ಎನ್ನುವುದನ್ನು ಒಪ್ಪದೆ ಹೋರಾಟ ಮಾಡಿದರು. ಬ್ರಿಟಿಷರ ವಿರುದ್ಧ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೂಟ ಸ್ಥಾಪನೆಗೆ ಪ್ರಯತ್ನ ಮಾಡಿದರು. ಈ ನೆಲದಲ್ಲಿ ಬ್ರಿಟಿಷರ ವಿರುದ್ಧ ಸಕಾರಣವಾಗಿ ಯುದ್ಧ ಮಾಡಿದರು.

ಬ್ರಿಟಿಷರ ವಿರುದ್ಧ ಯುದ್ಧ ದಲ್ಲಿ ಹೊಸ ಆಯುಧ ಬಳಸಬೇಕು ಎಂದುಕೊಂಡು ಫ್ರೆಂಚ್ ಸರಕಾರದ ಜೊತೆ ಪತ್ರ ವ್ಯವಹಾರ ನಡೆಸಿ ರಾಕೆಟ್ ತಂತ್ರಜ್ಞಾನ ಅಭಿವೃದ್ಧಿ ಪಡಿಸಿದವನು ಟಿಪ್ಪು. ಅವನ ಕಾಲದ ರಾಕೆಟ್ ಗಳನ್ನು ಇಟ್ಟ ಸಂಗ್ರಹಾಲಯ ವನ್ನು ಡಾ. ಅಬ್ದುಲ್ ಕಲಾಂ ಕೇವ ವರ್ಷ ಹಿಂದೆ ಉದ್ಘಾಟಿಸಿದರು. `ಭಾರತದ ಮಿಸ್ಸೈಲ್ ಯುಗ ಟಿಪ್ಪು ವಿನಿಂದ ಆರಂಭ ವಾಯಿತು’ ಎನ್ನುವ ಮಾತನ್ನು ಅವರು ಹೇಳಿದ್ದಾರೆ.

ಮೈಸೂರ್ ಸುಲ್ತಾನರ ಸಾಮಾಜಿಕ – ಆರ್ಥಿಕ, ಸಾಂಸ್ಕೃತಿಕ ಕೊಡುಗೆ ಗಳು ಸಹಿತ ಅಷ್ಟೇ ವಿಶಿಷ್ಟ ವಾದವು. ಮೇಲು ಜಾತಿ ರಾಜರು ಕೆಳ ಜಾತಿ ಹೆಣ್ಣು ಮಕ್ಕಳ ಮೇಲೆ ಹಾಕಿದ ಸ್ತನ ಸುಂಕ ತೆಗೆದು ಹಾಕಿದವನು ಟಿಪ್ಪು. ಶೂದ್ರ ಮಹಿಳೆಯ ಮೊದಲ ಮದುವೆ ನಂಬೂದರಿಯ ಜೊತೆ ಎನ್ನುವ ನಿಯಮ ಮುರಿದವನು ಟಿಪ್ಪು.

ಬ್ರಿಟಿಷರ ವಿರುದ್ಧ ಟಿಪ್ಪು ಯುದ್ಧ ಮಾಡು ವಾಗ ಬ್ರಿಟಿಷರ ಬೆಂಬಲಕ್ಕೆ ನಿಂತವರಲ್ಲಿ ಮರಾಠಾ ರಾಜರು ಇದ್ದರು , ಅರ್ಕಾಟ ನವಾಬ ರಂತಹ ಮುಸ್ಲಿಂ ರಾಜರೂ ಇದ್ದರು ಎನ್ನುವುದನ್ನು ನಾವು ಮರೆಯ ಬಾರದು. ಮರಾಠ ರ ಸೈನ್ಯ ನಾಶ ಮಾಡಿದ ಶೃಂಗೇರಿ ಮಠ ವನ್ನು ತಿಪ್ಪೆ ರುದ್ರ ಸ್ವಾಮಿ ಯ ಆಶೀರ್ವಾದ ದಿಂದ ಜನಿಸಿದ ಟಿಪ್ಪು ಸುಲ್ತಾನ್ ಜೀರ್ಣೋದ್ಧಾರ ಮಾಡಿದ. ಆ ಮಠ ಕ್ಕೆ ದಾನ- ದತ್ತಿ ನೀಡಿದ. ಮಲಬಾರು- ಕರ್ನಾಟಕದ ಅನೇಕ ದೇವಸ್ಥಾನ ಗಳಿಗೆ ಒಂದು ಸಾವಿರಕ್ಕೂ ಹೆಚ್ಚು ಎಕರೆ ಭೂಮಿ ದಾನ ನೀಡಿ, ಧನ ಸಹಾಯ ಮಾಡಿದ. ಮೈಸೂರು ಸುಲ್ತಾನರು ಸುಧಾರಿತ ಕಬ್ಬು ಹಾಗೂ ಕಾಫಿ, ದನಕರು ತಳಿಗಳ ಪ್ರಚಾರ ಮಾಡಿದವರು. ಯುದ್ಧ ತಂತ್ರವಾಗಿ ಕಾವಲು ಗೋಪುರ , ತೋಪುಗಳು ಕಟ್ಟುವುದು, ಸುಧಾರಿತ ಕುದುರೆ ತಳಿಗಳ ಪಾಲನೆ, ಪಾರಿವಾಳ- ಗಿಡುಗ, ಉಡಗಳ ಬಳಕೆ ಮಾಡಿದರು.

ದೇಸೀ ಕುರಿ ಮತ್ತು ಆಡಿನ ತಳಿ, ಅಭಿವೃದ್ಧಿ , ತೇರಾಕೋಟ ನೀರಾವರಿ ಕಾಲುವೆಗಳು, ಬತ್ತದ ನಟಿ ಪದ್ಧತಿ ಗಳ ಬಗ್ಗೆ ರೈತರಿಗೆ ತರಬೇತಿ ನೀಡಿದರು. ಹೊಸ ಪಂಚಾಂಗ, ನಾಣ್ಯ ಪದ್ಧತಿ, ಶಿಷ್ಯವೃತ್ತಿ ಸಹಿತ ಶಿಶಿಕ್ಷು ಸೌಲಭ್ಯ ಗಳನ್ನು ಸುರು ಮಾಡಿದರು.

ದೊಡ್ಡ ಇತಿಹಾಸದ ಪುಸ್ತಕ ಗಳಲ್ಲಿ ಕಾಣುವ ಇಂತಹ ಪುಟ್ಟ ಅಡಿ ಬರಹ ಗಳನ್ನು ಸಹ ನಾವು ಮರೆಯಬಾರದು.

ಕಲೆ -ಸಾಹಿತ್ಯಕ್ಕೆ ಉರ್ದು ಭಾಷಿಕರ ಕೊಡುಗೆ ಮೌಲ್ಯ ಯುತ ವಾದದ್ದು. ಭಾರತದಲ್ಲಿ, 2011 ರ ಜನಗಣತಿ ಪ್ರಕಾರ ಸುಮಾರು 22,000 ಭಾಷೆಗಳು ಇವೆ. ಆದರೆ ಇದರಲ್ಲಿ ಕವಿಗೋಷ್ಠಿ ಯ ಪರಂಪರೆ ಅತಿ ಗಟ್ಟಿಯಾಗಿದ್ದು, ಇವತ್ತಿಗೂ ಜನಪ್ರಿಯ ವಾಗಿ ಇರುವುದು ಉರ್ದು ವಿನಲ್ಲಿ ಮಾತ್ರ.

ಆಧುನಿಕ ಕಾಲದಲ್ಲಿ ಸವದತ್ತಿ ಯಲ್ಲಮ್ಮನ ಮೇಲೆ ಹಾಡು ಬರೆದ ಹಲಸಂಗಿ ಖಾಜಾ ಸಾಹೇಬರು, ಶಿಶುನಾಳ ಶರೀಫರು, ಅಬ್ದುಲ್ ಕರೀಂ ಖಾನರು, ನಿತ್ಯೋತ್ಸವದ ನಿಸ್ಸಾರ ಅಹ್ಮದ್ ಅವರು, ಮುಂಡರಗಿ ಯ ಫಕೀರೇಶರು, ನಾರಾಯಣ್ಪುರದ ಮಲ್ಲಿಕಾರ್ಜುನ ಸ್ವಾಮಿ ದರ್ಗಾ ದ ಸಾಹೇಬರು, ಬೀಜಪುರದ ಖಾದರ ಲಿಂಗನ ಪದಗಳು, ಕನ್ನಡ ಕಾವ್ಯದ ಅಮೂಲ್ಯ ರತ್ನಗಳು. ಇವಿಲ್ಲದೆ ಕನ್ನಡ ಸಾಹಿತ್ಯ ಅಪೂರ್ಣ.

ಮುಸಲ್ಮಾನರೆ ಇಲ್ಲದ ಹಳ್ಳಿಗಳಲ್ಲಿ ಮೊಹರಂ ಆಚರಿಸುವ ಈ ನಾಡಿನಲ್ಲಿ ಕೋಮು ಭಾವನೆ ಬರದಂತೆ ತಡೆಯುತ್ತಿರುವವು ಸಣ್ಣ ಸಣ್ಣ ಊರುಗಳಲ್ಲಿ ಇರುವ ದರ್ಗಾ ಗಳು, ಸೂಫಿ ಗಳ ಚಿಂತನೆಗಳು.

ಗೃಹ ನಿರ್ಮಾಣ ಹಾಗೂ ವಾಸ್ತು ಶಾಸ್ತ್ರ ಕ್ಕೆ ಉರ್ದು ಭಾಷಿಕ ದೊರೆಗಳ, ವಿಜ್ಞಾನಿಗಳ ಕೊಡುಗೆ ಮಹತ್ವದ್ದು . ಚಂಡೀಗಡ ನಿರ್ಮಾಣಕ್ಕೆ ಬಂದ ಲಿ ಕೊರ್ಬುಸಿಯರ ಅವರು `ನೀವು ನಿಮ್ಮಲ್ಲಿ ವಾಸ್ತು ಶಾಸ್ತ್ರ ದ ಖಜಾನೆ ಯನ್ನು ಇಟ್ಟುಕೊಂಡು ಈ ಯುರೋಪಿಯನ್ ನನ್ನು ಯಾಕೆ ಕರೆಯಿಸಿದಿರಿ? ಎಂದು ಕೇಳಿದರಂತೆ.

ಉರ್ದು ಭಾಷಿಕರು ಯಾರು ಎನ್ನುವ ಪ್ರಶ್ನೆಗೆ ಸಿದ್ಧ ಉತ್ತರ ಗಳು ಸಿಗದೇ ಹೋದಾಗ ಅವರ ವಿಶಿಷ್ಟ ಸಾಧನೆಗಳು ಯಾವುವು ಎನ್ನುವುದು ಸಮಾಜದ ಇತರ ಗುಂಪುಗಳ ಷ್ಟೇ ಸಹಜ ವಾದವುಗಳು ಎನ್ನುವ ಅರಿವು ನಮ್ಮನ್ನು ಬಹು ಕಾಲ ಕಾಯ ಬಲ್ಲದು.

https://www.facebook.com/669950734/posts/10158242173055735/

Please follow and like us:
error