ಉಡಾನ್ ಯೋಜನೆ ಅನುಷ್ಠಾನ : ಸಿಎಂ ಬಿಎಸ್ವೈಗೆ ಸಂಸದ ಮನವಿ

ಕೊಪ್ಪಳ : ಉಡಾನ್ ಯೋಜನೆಯನ್ನು ಶೀಘ್ರದಲ್ಲೇ ಕಾರ್ಯರೂಪಕ್ಕೆ ತರಲು ಆಗ್ರಹಿಸಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಸಂಸದ ಸಂಗಣ್ಣ ಕರಡಿ ನೇತೃತ್ವದ ನಿಯೋಗ ಮನವಿ ಸಲ್ಲಿಸಿತು.

ಕೊಪ್ಪಳದಲ್ಲಿ ಉಡಾನ್ ಯೋಜನೆ ಪ್ರಾರಂಭ ಮಾಡುವ ಬಗ್ಗೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರನ್ನು ಕೊಪ್ಪಳದ ನಿಯೋಗವು ಮನವಿ ಮಾಡಲಾಯಿತು. ಮನವಿ ಸ್ವೀಕರಿಸಿ ಸಕಾರಾತ್ಮಕ ಸ್ಪಂದಿಸಿ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು. ಹಾಗೂ ಶೀಘ್ರದಲ್ಲೇ ಉಡಾನ್ ಯೋಜನೆ ಪ್ರಾರಂಭ ಮಾಡುವ ಬಗ್ಗೆ ಭರವಸೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಸಂಸದರಾದ ಸಂಗಣ್ಣ ಕರಡಿ,ಶಾಸಕರಾದ ಬಸವರಾಜ್ ದಡೇಸುಗೂರು,ಪರಣ್ಣ ಮುನವಳ್ಳಿ, ಹಾಗೂ ಅಂದಣ್ಣ ಅಗಡಿ,ಕೆ ಶರಣಪ್ಪ, ದೊಡ್ಡನಗೌಡ ಪಾಟೀಲ್, ತಿಪ್ಪೇರುದ್ರಸ್ವಾಮಿ, ಶರಣು ತಳ್ಳಿಕೇರಿ, ಅಮರೇಶ ಕರಡಿ,ನವೀನ್ ಗುಳಗಣ್ಣನವರ್ ಹಾಗೂ ಜಿಲ್ಲೆಯ ಮುಖಂಡರು ಉಪಸ್ಥಿತರಿದ್ದರು.

Please follow and like us:
error