ಉಡಾನ್ ಅನುಷ್ಠಾನ ಗ್ಯಾರಂಟಿ ! ಕೇಂದ್ರ ತಜ್ಞರ ತಂಡದ ಸ್ಥಳ ಪರಿಶೀಲನೆ

ಕೊಪ್ಪಳ : ಉಡಾನ್ ಸಂಬಂದಿಸಿದಂತೆ ಇತ್ತೀಚಿಗೆ ನಡೆದ ಚಟುವಟಿಕೆಗಳು ಉಡಾನ್ ಅನುಷ್ಠಾನ ವಾಗುವುದು ಗ್ಯಾರಂಟಿ ಎನ್ನು ವ ಭರವಸೆ ಮೂಡಿಸಿವೆ. ಉಡಾನ್ ಯೋಜನೆ ಅನುಷ್ಠಾನಕ್ಕೆ ಸಂಬಂದಿಸಿದಂತೆ ಕೇಂದ್ರದ ಅಧಿಕಾರಿಗಳು ಮತ್ತು ವಿಮಾನಯಾನ ಇಲಾಖೆ ಅಧಿಕಾರಿಗಳ ತಂಡ ಗಿಣಿಗೇರಿ ಮತ್ತು ಬಸಾಪುರಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿತು. ಇದರ ಬಗ್ಗೆ
ಸರ್ಕಾರಕ್ಕೆ ವರದಿ ಸಲ್ಲಿಸಲಿದೆ. ಇದು, ವಿಮಾನ ಹಾರಾಟ ಆರಂಭವಾಗುವ ನಿರೀಕ್ಷೆಗಳನ್ನು ಹೆಚ್ಚಿಸಿದೆ.
ಸ್ಥಳ ಪರಿಶೀಲನೆಗೆ ಆಗಮಿಸಿದ್ದ ವಿಮಾನಯಾನ ಇಲಾಖೆ ಅಧಿಕಾರಿಗಳನ್ನು ಜಿಲ್ಲಾ ಉಡಾನ್ ಹೋರಾಟ ಸಮಿತಿಯಿಂದ ಸ್ವಾಗತಿಸಲಾಯಿತು . ಕೇಂದ್ರದ ಅಧಿಕಾರಿಗಳಾದ

ಪಿ.ರಾಜಕುಮಾರ್ , ಶರದ್ ದುಬೆ , ಸಿ.ಟಿ.ಸಿಂಧು , ಅನುರಾಗ ಮಿಶ್ರಾ ತಂಡ ಮೊದಲಿಗೆ ಬಸಾಪುರ ಬಳಿಯ ಎಂಎಸ್ ಪಿಎಲ್ ವಿಮಾನ ನಿಲ್ದಾಣಕ್ಕೆ ತೆರಳಿ ರನ್ ವೇ , ಹಾರಾಟಕ್ಕೆ ಅವಶ್ಯಕವಾಗಿರುವ ತಾಂತ್ರಿಕ ಅಂಶಗಳು , ಅವಶ್ಯಕ ಸೌಲಭ್ಯಗಳ ಕುರಿತು ಪರಿಶೀಲನೆ ನಡೆಸಿತು . ಬಳಿಕ ಗಿಣಿಗೇರಿ ವಿಮಾನ ನಿಲ್ದಾಣ ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲಿಸಿತು . ನಂತರ ಜಿಲ್ಲಾಧಿಕಾರಿ ಕಚೇರಿಗೆ ಭೇಟಿ ನೀಡಿದ ಅಧಿಕಾರಿಗಳು ಜಿಲ್ಲಾಧಿಕಾರಿ ಎಸ್.ವಿಕಾಸ್ ಕಿಶೋರ್ ಜತೆ ಚರ್ಚಿಸಿದರು . ಉಡಾನ್ ಹೋರಾಟ ಸಮಿತಿ ಸದಸ್ಯರಾದ ಆರ್ .ಬಿ.ಪಾನಘಂಟಿ , ಆಸೀಫ್ ಅಲಿ , ಶ್ರೀನಿವಾಸ ಗುಪ್ತಾ, ಅಪ್ಪಣ್ಣ ಪದಕಿ, ಪಭು ಹೆಬ್ಬಾಳ , ಬಸವರಾಜ ಬಳ್ಳೋಳ್ಳಿ , ಮೊಹಮದ್ ಅಲಿಮುದ್ದೀನ್ , ಗುರುರಾಜ ಸೇರಿದಂತೆ ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು

Please follow and like us:
error