ಉಡಾನ್ ಅನುಷ್ಠಾನ : ಎಂಎಸ್ಪಿಎಲ್, ಜಿಲ್ಲಾಧಿಕಾರಿ, ನಿಯೋಗದ ಮೀಟಿಂಗ್ ಯಶಸ್ವಿ

MSPL ಜಿಲ್ಲೆಯ ಜನತೆಯ ಅವಶ್ಯಕತೆಗೆ ಸ್ಪಂದಿಸಲು ತಾಕೀತು

ಕೊಪ್ಪಳ : ಉಡಾನ್ ಯೋಜನೆ ಅನುಷ್ಠಾನಕ್ಕೆ ಸಂಬಂದಿಸಿದಂತೆ ಇರುವ ಅಡೆತಡೆ ಗಳ ಕುರಿತು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಇಂದು ಸಭೆ ನಡೆಯಿತು‌‌. ಸಭೆಯಲ್ಲಿ ಉಡಾನ್ ಯೋಜನೆ ಯ ಕುರಿತು ಸಮಗ್ರವಾಗಿ ಚರ್ಚಿಸಲಾಯಿತು.

ಹಿರಿಯ ವಕೀಲ ಆಸೀಫ್ ಅಲಿ‌ಯವರು ಮಾತನಾಡಿ, ಉಡಾನ್ ಯೋಜನೆಯು ಅನುಷ್ಟಾನ ಮಾಡಬೇಕಾದ ಅಗತ್ಯವಿದೆ. ಈ ಮೊದಲು ನಾವು ಪ್ರಮುಖರು ಸಭೆ ಸೇರಿ ಚರ್ಚೆ ಮಾಡಿದ್ದೇವೆ. ಈಗ ಇರುವ ಅಡ್ಡಿ ಆತಂಕಗಳು ಏನು ಎನ್ನುವುದು ಗೊತ್ತಾದರೆ ಅವುಗಳನ್ನು ನಿವಾರಿಸಲು ಯತ್ನಿಸಬಹುದು ಜಿಲ್ಲಾಡಳಿತದ ಜೊತೆ ನಾವೆಲ್ಲ ಇದ್ದೇವೆ ಎಂದು ಹೇಳಿದರು.

ಡಿಸಿ ವಿಕಾಸ್ ಕಿಶೋರ್ ಸುರಳ್ಕರ್, ಉಡಾನ್ ಯೋಜನೆಯ ಕುರಿತು ಚರ್ಚೆ ನಡೆದಿದೆ. ಜನರ ಪ್ರೋತ್ಸಾಹ ಹಾಗೂ ಆಸಕ್ತಿಯ ಗೊತ್ತಿದೆ. ಎಂಎಸ್ಪಿಎಲ್ ಕಂಪನಿಯ ನಿರ್ಧಾರ ಏನಿದೆ‌ ಎನ್ನುವುದು ಗೊತ್ತಾಗಬೇಕಿದೆ. ಕೊಪ್ಪಳ ಸಮೀಪದಲ್ಲಿ
ಹುಬ್ಬಳ್ಳಿ ಹಾಗೂ ತೋರಣಗಲ್ ಎರಡು ವಿಮಾನ ನಿಲ್ದಾಣ ಇವೆ. ಕೊಪ್ಪಳದಲ್ಲಿ ವಿಮಾನ ನಿಲ್ದಾಣಕ್ಕೆ ಖಾಸಗಿ ಸಮೀಕ್ಷೆ ನಡೆದಿದೆಯಾ ಎಂದು ಪ್ರಶ್ನಿಸಿದರು.

ಹಿರಿಯ ವಕೀಲರಾದ ಆರ್ ಬಿ ಪಾನಘಂಟಿ ಮಾತನಾಡಿ, ಕೊಪ್ಪಳ ಜಿಲ್ಲೆಗೆ ಎರಡನೇ ಹಂತದಲ್ಲಿ ಉಡಾನ್ ಯೋಜನೆ ಘೋಷಣೆಯಾಗಿ ಮೂರು ವರ್ಷ ಕಳೆದಿದೆ. ಆದರೂ ಅನುಷ್ಠಾನಗೊಳ್ಳುತ್ತಿಲ್ಲ. ಕಂಪನಿ ಸಮಸ್ಯೆಯೋ ಅಧಿಕಾರಿಗಳ ಸಮಸ್ಯೆಯೋ ಜನಪ್ರತಿನಿಧಿಗಳ ಸಮಸ್ಯೆಯೋ ಗೊತ್ತಿಲ್ಲ. ಚರ್ಚೆ ನಡೆಸಿ ಜನರ ಗಮನಕ್ಕೆ ತರುವ ಕೆಲಸ ಮಾಡಬೇಕಿದೆ. ಕೊಪ್ಪಳದ ಜನತೆ ಹೋರಾಟಕ್ಕೆ ಹಿಂದೆ ಬೀಳಲ್ಲ ಎಂದು ಎಚ್ಚರಿಕೆ ನೀಡಿದರು.

ಎಂಎಸ್ಪಿಎಲ್ ಪ್ರತಿನಿಧಿ ಪ್ರಭು ಮಾತನಾಡಿ ಕಮರ್ಷಿಯಲ್ ಸಾದ್ಯತೆಗಳ ಕುರಿತು ಮಾತನಾಡಿದಾಗ ನೀವು ಅದರ ಬಗ್ಗೆ ಯೋಚಿಸಬೇಡಿ ನಿಮ್ಮ ಏರ್ ಸ್ಕ್ರಿಪ್ಟ್ ನೀಡುವುದರ ಬಗ್ಗೆ ಮಾತನಾಡಿ ಎಂದು ಡಿಸಿ ಹೇಳಿದರು. ಜಿಲ್ಲೆಯಲ್ಲಿರುವ ಉದ್ಯಮಗಳ ಬಗ್ಗೆ ಜನರಲ್ಲಿ ಒಳ್ಳೆಯ ಅಭಿಪ್ರಾಯ ಇಲ್ಲ. ಕನಿಷ್ಠ ಇದರ ಬಗ್ಗೆ ಉತ್ತಮ ನಿರ್ಧಾರ ಕೈಗೊಳ್ಳುವ ಮೂಲಕ ಗುಡ್ ವಿಲ್ ಹೆಚ್ಚಿಸಿಕೊಳ್ಳಿ ಎಂದು ಸಲಹೆ ನೀಡಿದರು. ಕೊನೆಗೆ ತಮ್ಮ ಸಂಸ್ಥೆಯ ಹಿರಿಯರೊಂದಿಗೆ ಚರ್ಚಿಸಿ ಅವರ ನಿರ್ಧಾರ ತಿಳಿಸುವುದಾಗಿ ಪ್ರತಿನಿಧಿ ಪ್ರಭು ಹೇಳಿದರು.

ಇದೇ ಸಂದರ್ಭದಲ್ಲಿ ಸಂಸದ ಕರಡಿ ಸಂಗಣ್ಣ ಜಿಲ್ಲಾಧಿಕಾರಿಗೆ ಫೋನ್ ಮಾಡಿ ಸಭೆಯ ಕುರಿತು ವಿಚಾರಿಸಿದರು. ಸಭೆಯಲ್ಲಿ ಡಾ.ಕೆ.ಜಿ.ಕುಲಕರ್ಣಿ, ಬಸವರಾಜ್ ,ಶ್ರೀನಿವಾಸ ಗುಪ್ತಾ, ಕೆ.ಎಂ.ಸಯ್ಯದ್, ಸಿದ್ದಣ್ಣ ಎನ್., ಪೀರಾಹುಸೇನ್ ಹೊಸಳ್ಳಿ, ಪ್ರವೀಣ ಮೇಹ್ತಾ, ಅರವಿಂದ ಅಗಡಿ, ಸಂಜಯ ಕೊತಬಾಳ, ಮಹೇಶ್ ಮುದಗಲ್, ಗ್ಯಾನೇಶ ಹ್ಯಾಟಿ, ಶಂಕರ್ ನಿಂಗಲಬಂಡಿ, ಕಲಿಮುದ್ದೀನ್, ಶಾಹೀದ್ ಕವಲೂರ ಅರವಿಂದ, ದಿವಾಕರ ಬಾಗಲಕೋಟೆ, ಸೇರಿದಂತೆ ವಕೀಲರು, ವ್ಯಾಪಾರಸ್ಥರು ಬಾಗವಹಿಸಿದ್ದರು.

Please follow and like us:
error