fbpx

ಈ ಗ್ರಾಮದಲ್ಲಿ ಅಂತ್ಯಸಂಸ್ಕಾರಕ್ಕೆ ಹೊಳೆ ದಾಟಿ ದೇಹ ಕೊಂಡೊಯ್ಯಬೇಕು

Kannadanet NEWS ಈ ಗ್ರಾಮದಲ್ಲಿ ಯಾರಾದರೂ ಮೃತಪಟ್ಟರೆ ಅವರ ಶವಸಂಸ್ಕಾರಕ್ಕೆ ಸ್ಮಶಾನ ಇಲ್ಲ. ಅಂತ್ಯ ಸಂಸ್ಕಾರಕ್ಕೆ ಶವ ಹೊತ್ತು ನದಿಯ ನೀರ ನಡುವೆ ಹಾಯ್ದು ಜಮೀನುಗಳಿಗೆ ಹೋಗಬೇಕು. ಇದು ಇ‌ಂದು ನಿನ್ನೆಯ ಸಮಸ್ಯೆಯಲ್ಲ. ಹೌದು ಚಾಮರಾಜನಗರ ಜಿಲ್ಲೆ ಯಳಂದೂರು ತಾಲೋಕಿನ ಮಾಂಬಳ್ಳಿ ಗ್ರಾಮದಲ್ಲಿ ಹಲವಾರು ವರ್ಷಗಳಿಂದ, ಇಂತಹ ಗಂಭೀರ ಸಮಸ್ಯೆ ಇದ್ದರೂ ಪರಿಹರಿಸುವಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ನದಿ ದಾಟಲು ಇತ್ತೀಚೆಗೆ ಗ್ರಾಮಸ್ಥರೇ ಮರದ ಹಲಗೆಗಳ ಸೇತುವೆ ನಿರ್ಮಿಸಿಕೊಂಡಿದ್ದಾರೆ. ಹೆಣ ಹೊರುವವರು ಜೀವ ಕೈಯಲ್ಲಿ ಡಿದು ಈ ಹಲಗೆಗಳ ಸೇತುವೆ ಮೇಲೆ ಸಾಗಬೇಕು ಆದರೆ ಶವ ಹೊತ್ತೊಯ್ಯುವಾಗ ಸ್ವಲ್ಪ ಯಾಮಾರಿದರು ಅಪಾಯ ತಪ್ಪಿದ್ದಲ್ಲ. ಗ್ರಾಮದ ಸರ್ವೆ ನಂಬರ್ 887 ಹಾಗು 888/1 ರಲ್ಲಿ ವಿವಿಧ ಸಮುದಾಯಗಳ ಸ್ಮಶಾನಕ್ಕೆ 7 ಎಕರೆ 16 ಗುಂಟೆ ಸರ್ಕಾರಿ ಭೂಮಿಯನ್ನು ಮಂಜೂರು ಮಾಡಲಾಗಿತ್ತು. ಆದರೆ ಕೆಲವು ಖಾಸಗಿ ವ್ಯಕ್ತಿಗಳು ಇದು ತಮಗೆ ಸೇರಬೇಕೆಂದು ನ್ಯಾಯಾಲಯ ಮೆಟ್ಟಿಲೇರಿದ್ದು ವಿಚಾರಣೆ ನಡೆಯುತ್ತಿದೆ. ಆದರೆ ನ್ಯಾಯಾಲಯಕ್ಕೆ ಸಮರ್ಪಕ ದಾಖಲೆ ಗಳನ್ನು ಒದಗಿಸಿ ತ್ವರಿತಗತಿಯಲ್ಲಿ ವಿವಾದ ಬಗೆಹರಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ಇದರ ಪರಿಣಾಮ ಶವಸಂಸ್ಕಾರಕ್ಕೆ ಜಾಗವಿಲ್ಲದೆ ಗ್ರಾಮಸ್ಥರು ನದಿ ಮದ್ಯೆ ಶವ ಹೊತ್ತು ಹೆಣಗಾಟ ನಡೆಸಬೇಕಾದ ದುಸ್ಥಿತಿ ನಿರ್ಮಾಣವಾಗಿದೆ. ಹಾಲಿ ಚಾಮರಾಜನಗರ ಜಿಲ್ಲಾಧಿಕಾರಿ ಯಾಗಿರುವ ಡಾ.ಎಂ.ಆರ್.ರವಿ ಮೂಲತಃ ಇದೇ ಗ್ರಾಮದವರು. ಇವರಾದರೂ ಈ ಸಮಸ್ಯೆಗೆ ಮುಕ್ತಿ ಹಾಡಿಲ್ಲ.

Please follow and like us:
error
error: Content is protected !!