ಈಶಾನ್ಯ ಶಿಕ್ಷಕರ ಕ್ಷೇತ್ರ ಶಶಿಲ್ ನಮೋಶಿಗೆ ಗೆಲುವು

ಈಶಾನ್ಯ ಶಿಕ್ಷಕರ ಕ್ಷೇತ್ರದ ಮತ ಎಣಿಕೆ:

ವಿನ್ನಿಂಗ್ ಕೋಟಾ 9797 ಮತ ಫಿಕ್ಸ್ ಮಾಡಿದ ನಂತರ ಪ್ರಥಮ ಪ್ರಾಶಸ್ತ್ಯ ಮತಗಳಲ್ಲಿ ಅತ್ಯಂತ ಕಡಿಮೆ ಮತ ಪಡೆದ 1ನೇ ಅಭ್ಯರ್ಥಿ ವಾಟಾಳ ನಾಗರಾಜ್ ಹಾಗೂ 2ನೇ ಅಭ್ಯರ್ಥಿ ಡಾ.ಚಂದ್ರಕಾಂತ ಸಿಂಗೆ ಅವರನ್ನು ಎಲಿಮಿನೇಟ್ ಮಾಡಿ ಅವರಿಗೆ ಬಂದ ಮತಗಳಲ್ಲಿ 2ನೇ ಪ್ರಾಶಸ್ತ್ಯದ ಮತ ಎಣಿಕೆ ಕಾರ್ಯ ಮುಕ್ತಾಯವಾಗಿದ್ದು, ಇದರಲ್ಲಿ 59 ಮತಗಳು Exhausted ಆಗಿದ್ದು (1st preference ಮಾತ್ರ ಇರುವದರಿಂದ 2ನೇ‌ ಪ್ರಾಶಸ್ತ್ಯ ಕ್ಕೆ ಎಣಿಕೆಗೆ ಅರ್ಹವಿರುವುದಿಲ್ಲ).

ಉಳಿದಂತೆ ಒಟ್ಟಾರೆ ಪಡೆದ ಮತಗಳ ವಿವರ:
ತಿಮ್ಮಯ್ಯ ಪುರ್ಲೆ(ಜೆ.ಡಿ‌.ಎಸ್)-3848
ಶರಣಪ್ಪ ಮಟ್ಟೂರು (ಕಾಂಗ್ರೆಸ್)-6235
ಶಶೀಲ ಜಿ. ನಮೋಶಿ(ಬಿ.ಜೆ.ಪಿ)-9451

ಈಶಾನ್ಯ ಶಿಕ್ಷಕರ ಮತಕ್ಷೇತ್ರ ಬಿಜೆಪಿ ಪಾಲು
.
ಶಶೀಲ್ ನಮೋಶಿ 3584 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ

ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ:

ಎರಡನೇ ಪ್ರಾಶಸ್ತ್ಯದ ಮತ ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಶಶೀಲ್ ಜಿ. ನಮೋಶಿ ಗೆಲುವು

ಚುನಾವಣಾಧಿಕಾರಿ ಡಾ.ಎನ್.ವಿ.ಪ್ರಸಾದ ಅಧಿಕೃತ ಘೋಷಣೆ

ಶಶೀಲ ಜಿ. ನಮೋಶಿಗೆ ಗೆಲುವಿನ ಪ್ರಮಾಣ ಪತ್ರ ವಿತರಣೆ

ಎರಡನೇ ಪ್ರಾಶಸ್ತ್ಯ ಮತ ಎಣಿಕೆಯಲ್ಲಿ ಒಟ್ಟಾರೆ ಕಣದಲ್ಲಿದ್ದ ಐದು ಅಭ್ಯರ್ಥಿಗಳಲ್ಲಿ ಅತ್ಯಂತ ಕಡಿಮೆ ಮತ ಪಡೆದ ವಾಟಾಳ್ ಪಕ್ಷದ ವಾಟಾಳ ನಾಗರಾಜ, ಸ್ವತಂತ್ರ ಅಭ್ಯರ್ಥಿ ಡಾ.ಚಂದ್ರಕಾಂತ ಸಿಂಗೆ ಹಾಗೂ ಜೆ.ಡಿ.ಎಸ್. ಅಭ್ಯರ್ಥಿ ತಿಮ್ಮಯ್ಯ ಪುರ್ಲೆ ಅವರನ್ನು ಕ್ರಮವಾಗಿ ಎಲಿಮಿನೇಟ್ ಮಾಡಿದ ನಂತರ ಬಿ.ಜೆ.ಪಿ. ಪಕ್ಷದ ಅಭ್ಯರ್ಥಿ ಶಶೀಲ್ ನಮೋಶಿ-10212 ಹಾಗೂ
ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶರಣಪ್ಪ ಮಟ್ಟೂರು ಅವರು 7082 ಮತ ಪಡೆದರು.

ವಿನ್ನಿಂಗ್ ಕೋಟಾ 9717 ಮತ ಶಶೀಲ್ ಜಿ. ನಮೋಶಿ ಪಡೆದಿದ್ದರಿಂದ ಚುನಾವಣಾ ಫಲಿತಾಂಶ ಘೋಷಿಸಲಾಯಿತು

ಒಟ್ಟು 2299 ಮತಗಳು Exhausted ಆಗಿವೆ (ಬ್ಯಾಲೆಟ್ ನಲ್ಲಿ ಪ್ರಥಮ ಪ್ರಾಶಸ್ತ್ಯ ಮಾತ್ರ ಇರುವದರಿಂದ 2ನೇ‌ ಪ್ರಾಶಸ್ತ್ಯ ಎಣಿಕೆಗೆ ಅರ್ಹವಿರುವುದಿಲ್ಲ).

ಚುನಾವಣಾ ವೀಕ್ಷಕ ಸಂದೀಪ ಡವೆ ಅವರ ಮಾರ್ಗದರ್ಶನದಲ್ಲಿ ಮತ ಎಣಿಕೆ ನಡೆಯಿತು.

ಸಹಾಯಕ ಚುನಾವಣಾಧಿಕಾರಿ ಆರ್. ರಾಮಚಂದ್ರನ್, ಕಲಬುರಗಿ ಡಿ.ಸಿ. ವಿ.ವಿ.ಜ್ಯೋತ್ಸ್ನಾ, ಜಿಲ್ಲಾ ಪಂಚಾಯತ್ ಸಿ.ಇ.ಓ. ಡಾ.ಪಿ.ರಾಜಾ, ಮಹಾನಗರ ಪಾಲಿಕೆ ಅಯುಕ್ತ ಸ್ನೇಹಲ್ ಸುಧಾಕರ್ ಲೋಖಂಡೆ, ಎನ್.ಇ.ಕೆ.ಆರ್.ಟಿ.ಸಿ. ವ್ಯವಸ್ಥಾಪಕ ನಿರ್ದೇಶಕ ಎಂ.ಖೂರ್ಮರಾವ್, ಅಪರ ಪ್ರಾದೇಶಿಕ ಆಯುಕ್ತ ಇಲಿಯಾಸ್ ಅಹ್ಮದ್ ಇಸಾಮದಿ, ಅಪರ ಜಿಲ್ಕಾಧಿಕಾರಿ ಡಾ.ಶಂಕರ ವಣಿಕ್ಯಾಳ ಸೇರಿದಂತೆ ಇನ್ನಿತರ ಅಧಿಕಾರಿಗಳು, ಪ್ರೊಬೇಷನರ್ ಐ‌.ಎ.ಎಸ್‌. ಅಧಿಕಾರಿಗಳು, ಚುನಾವಣಾ ಹಾಗೂ ಮತ ಎಣಿಕೆ ಸಿಬ್ಬಂದಿಗಳು ಇದ್ದರು.

Please follow and like us:
error