ಈದ್ – ಮಿಲಾದ್ ಅಚರಿಸಲು ಸರಕಾರದ ಮಾರ್ಗಸೂಚಿಗಳು

ಬೆಂಗಳೂರು: ಕೊವಿಡ್ -19 ಸೊಂಕು ಹಿನ್ನಲೆಯಲ್ಲಿ ರಾಜ್ಯಾದ್ಯಂತ 2020 ನೇ ಸಾಲಿನ ಈದ್ – ಮಿಲಾದ್ ( ಮಿಲಾದುನ್ನಬಿ) ಆಚರಿಸಲು ಮಾರ್ಗಸೂಚಿಗಳನ್ನು ಸೂಚಿಸಿದೆ.

ಪ್ರವಾದಿ ಮಹಮ್ಮದ್ ( ಸ್ವ..ಅ ) ರವರ ಹುಟ್ಟುಹಬ್ಬವನ್ನು ಈದ್ ಮಿಲಾದ್ ಹಬ್ಬವಾಗಿ ಮುಸ್ಲಿಂ ಬಾಂಧವರು ದಿನಾಂಕ : 30.10.2020 ರಂದು ರಾಜ್ಯದಾದ್ಯಂತ ಆಚರಿಸಲಿದ್ದು ಈ ಹಬ್ಬವನ್ನು ಸಾಂಪ್ರದಾಯಿಕವಾಗಿ ಆಚರಿಸಲಾಗುತ್ತದೆ . ಈ ಸಮಯದಲ್ಲಿ ಹೆಚ್ಚಿನ ಸಂಖ್ಯೆಯ ಜನರು ಒಂದೆಡೆ ಸೇರುವುದು ಸಾಮಾನ್ಯವಾಗಿರುತ್ತದೆ . ಪ್ರಸ್ತುತ ರಾಜ್ಯದಲ್ಲಿ ಸೋಂಕಿನ ಪ್ರಮಾಣವು ಹೆಚ್ಚಾಗಿರುವುದರಿಂದ ಈ ಹಬ್ಬವನ್ನು ಸರಳವಾಗಿ ಮತ್ತು ಭಕ್ತಿಪೂರ್ವಕವಾಗಿ ಆಚರಿಸಬೇಕಾಗಿರುತ್ತದೆ . ಮೇಲೆ ಓದಲಾದ ಕ್ರಮ ಸಂಖ್ಯೆ ( 1 ) ರ ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯ ಇವರ ಅಧಿಕೃತ ಜ್ಞಾಪನದ ಪ್ರಕಾರ ಹಾಗೂ ಮಲೆ ಓದಲಾದ ಕ್ರಮ ಸಂಖ್ಯೆ ( 2 ) ರ ಸುತ್ತೋಲೆಯಲ್ಲಿರುವ ಎಲ್ಲ ನಿಬಂಧನೆಗಳನ್ನು ಪರಿಪಾಲಿಸುವ ಷರತ್ತಿಗೊಳಪಟ್ಟು ಈ ಕೆಳಕಂಡ ಮಾರ್ಗಸೂಚಿಗಳನ್ನು ರಾಜ್ಯದಲ್ಲಿರುವ ಎಲ್ಲಾ ಮಸಿಪಿ / ದರ್ಗಾ ಹಾಗೂ ಇನ್ನಿತರ ಎಲ್ಲಾ ವಕ್ಸ್ ಸಂಸ್ಥೆಗಳು ಕಡ್ಡಾಯವಾಗಿ ಅನುಸರಿಸಬೇಕಾಗುತ್ತದೆ . ರಾಜ್ಯದಲ್ಲಿ ಕೊವಿಡ್ -19 ಸೋಂಕು ತೀವ್ರಗತಿಯಲ್ಲಿ ಹರಡುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಕೋವಿಡ್ -19 ರ ಶಿಷ್ಟಾಚಾರವನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ಸರ್ಕಾರವು ನಿರ್ಧರಿಸಿರುವುದರಿಂದ , ಈ ಕೆಳಕಂಡಂತೆ ಆದೇಶಿಸಿದೆ . ಸರ್ಕಾರಿ ಆದೇಶ ಸಂಖ್ಯೆ : ಎಂಡಬ್ಬಲ್ 02 ಎಂಇಎಸ್ 2020 ಬೆಂಗಳೂರು , ದಿನಾಂಕ : 17-10-೭೦೭೦ . ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಹಾಗೂ ದಿನಾಂಕ : 06-06-2020 ಸುತ್ತೋಲೆಯಲ್ಲಿ ಧಾರ್ಮಿಕ ಸ್ಥಳಗಳಲ್ಲಿ ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ಮುಂದುವರಿಸುತ್ತಾ , ಪ್ರಸ್ತುತ 2020 ನೇ ಸಾಲಿನ ಈದ್ – ಮಿಲಾದ್ ಅಚರಿಸಲು ಮಾರ್ಗಸೂಚಿಗಳು ಕೆಳಕಂಡಂತ್ತಿರುತ್ತದೆ .

Please follow and like us:
error