ಇಸ್ಪೀಟ್ ಅಡ್ಡಾ ಮೇಲೆ ದಾಳಿ, ಲಕ್ಷಾಂತರ ನಗದು, ಕಾರುಗಳು ವಶಕ್ಕೆ : ಅಡ್ಡಾಗಳ ಮಾಲಿಕರು ಯಾರು ?

ಭವಾನಿಮಠ ಕಂಪ್ಲೇಂಟ್ ಎಫೆಕ್ಟ್ !

ಕನಕಗಿರಿ ; ಜಿಲ್ಲೆಯಲ್ಲಿ ಅಕ್ರಮ ಚಟುವಟಿಕೆಗಳು ವಿಪರೀತವಾಗಿವೆ . ಪೊಲೀಸ್ ಇಲಾಖೆ ಇದಕ್ಕೆ ಕಡಿವಾಣ ಹಾಕಬೇಕು ಎಂದು ಕಾಂಗ್ರೆಸ್ ಮುಖಂಡ ಮುಕುಂದರಾವ್ ಭವಾನಿಮಠ ಜುಲೈ 22 ರಂದು ಗಂಗಾವತಿ ಡಿವೈಎಸ್ಪಿ ಬಿ.ಪಿ.ಚಂದ್ರಶೇಖರ ಅವರಿಗೆ ಮನವಿ ನೀಡಿದ್ದರು. . ಅದೇ ದಿನ ಡಿವೈಎಸ್ಪಿ ಅಧೀನ ಅಧಿಕಾರಿಗಳಿಗೆ ಜ್ಞಾಪನಾ ಪತ್ರ ಕಳಿಸಿ ಅಕ್ರಮಕ್ಕೆ ಕಡಿವಾಣ ಹಾಕುವಂತೆ ಸೂಚಿಸಿದ್ದಾರೆ . ಜುಲೈ 23 ರಂದು ಕನಕಗಿರಿ ಪೊಲೀಸರು ವಿಠಲಾಪುರದಿಂದ ಹಿರೇಮಾದಿನಾಳ ಗ್ರಾಮಕ್ಕೆ ಹೋಗುವ ಮಾರ್ಗದಲ್ಲಿ ಬರುವ ದ್ರಾಕ್ಷಿತೋಟದ ಮೇಲೆ ರೇಡ್ ಮಾಡಿದ್ದಾರೆ . ಹೊರಗಡೆ ಇರುವ ವಿಶಾಲ ಮೈದಾನದಲ್ಲಿ ಇಪ್ಪತ್ತಕ್ಕೂ ಅಧಿಕ ಕಾರುಗಳಿದ್ದವು ಎನ್ನಲಾಗಿದೆ

ಪೊಲೀಸರು ನೀಡಿರುವ ಮಾಹಿತಿ ಪ್ರಕಾರ 17 ಕಾರುಗಳಿದ್ದು , ಅವುಗಳನ್ನು ವಶಕ್ಕೆ ಪಡೆಯಲಾಗಿದೆ . ಜೊತೆಗೆ ದ್ರಾಕ್ಷಿ ತೋಟದೊಳಗೆ ನೋಡಿದಾಗ ಸುಮಾರು 20 ಕ್ಕೂ ಅಧಿಕ ಜನರು ಅಂದರ್ ಬಾಹರ್‌ ಆಡುತ್ತಿದ್ದುದು ಖಚಿತವಾಗಿದೆ . ಪೊಲೀಸರನ್ನು ಕಂಡ ಕೂಡಲೆ ಕೆಲವರು ಪರಾರಿಯಾಗಿದ್ದಾರೆ . ಕನಕಗಿರಿ ಪೊಲೀಸರು ರೇಡ್ ಮಾಡಿ 4,65,300 ರೂಪಾಯಿ , 38 ಲಕ್ಷ ರೂಪಾಯಿ ಮೌಲ್ಯದ 17 ಕಾರುಗಳು ಪಡೆದಿದ್ದಾರೆ. ಇದ್ದವರ ಪೈಕಿ ನಾಲ್ವರನ್ನು ತಂದು ಠಾಣೆಗೆ ಹಾಕಿದ್ದಾರೆ ಕನಕಗಿರಿ ಪೋಲೀಸರು . ಕೋಟ್ಯಾಂತರ ರೂಪಾಯಿ ಕೈಬದಲಾಗುವ ಅಡ್ಡೆಗಳಲ್ಲಿ ಕೇವಲ ಕೆಲವೇ ಲಕ್ಷಗಳು ಸಿಕ್ಕಿದ್ದೇಗೆ ? ಭವಾನಿಮಠ ಕಂಪ್ಲೆಟ್ ಕೊಡುವ ವರೆಗೆ ಇಲ್ಲಿಯ ಪೋಲಿಸರು ಏನ್ಮಾಡ್ತಾ ಇದ್ರು? ಈ ಭಾಗದಲ್ಲಿ ಈಗಲೂ ನಡೆಯುತ್ತಿರುವ ಇಸ್ಪೀಟ್ ಅಡ್ಡೆಗಳ ಅಸಲು ಆಶ್ರಯದಾತರು, ಮಾಲಕರು ಯಾರು ಎಂದು ಸಾರ್ವಜನಿಕರು ಪ್ತಶ್ನೆ ಮಾಡ್ತಾ ಇದ್ದಾರೆ .

Please follow and like us:
error