ಇಟಗಿ ಕೆರೆಯಲ್ಲಿದ್ದ 15 ಕ್ಕೂ ಹೆಚ್ಚು ಹಾವುಗಳನ್ನು ಕೊಂದ ದುಷ್ಕರ್ಮಿಗಳು

ಕೊಪ್ಪಳ : ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಇಟಗಿ ಗ್ರಾಮದ ಐತಿಹಾಸಿಕ ಮಹಾದೇವ ದೇವಸ್ಥಾನದ ಬಳಿ ಇರುವ ಕೆರೆಯಲ್ಲಿ ವಾಸವಾಗಿದ್ದ 15 ಕ್ಕೂ ಹೆಚ್ಚು ಹಾವುಗಳನ್ನು ದುಷ್ಕರ್ಮಿಗಳು ಕೊಂದು ಹಾಕಿದ್ದು, ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ. ಕೆಲವರು ಕೆರೆಯಲ್ಲಿ ಮೀನು ಹಿಡಿಯುವ ಸಂಧರ್ಭದಲ್ಲಿ ಬಲೆಯಲ್ಲಿ ಮೀನಿನ ಜೊತೆ ಹಾವುಗಳು ಬಂದ್ರೆ, ತಕ್ಷಣ ಹಾವುಗಳನ್ನು ಕೊಂದು,ಮೀನುಗಳನ್ನು ತೆಗೆದುಕೊಂಡು ಹೋಗುತ್ತಾರೆ ಎನ್ನುವ ಆರೋಪ ಕೇಳಿಬಂದಿದೆ. ಇನ್ನೂ ಕೆರೆಯ ಪಕ್ಕದಲ್ಲಿ ಗುಂಪು- ಗುಂಪಾಗಿ ಹಾವುಗಳನ್ನು ಸಾವನ್ನಪ್ಪಿದ್ದು, ಈ ಬಗ್ಗೆ ಪೊಲೀಸರು ಮತ್ತು ತಾಲೂಕ ಆಡಳಿತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಕ್ರಮಕ್ಕೆ ಸಾರ್ವಜನಿಕರು ಆಗ್ರಹಿಸಿದ್ದಾರೆ

Please follow and like us:
error