ಇಂದು ಡಾ. ರಾಜ್‌ ಜನ್ಮದಿನ ಮತ್ತೆ ಹುಟ್ಟಿ ಬನ್ನಿ ಅಣ್ಣಾವ್ರೆ.

ಇಂದು ಅವರ 86ನೇ ಜಯಂತ್ಯೋತ್ಸವ, 1929ರ ಏಪ್ರಿಲ್ 24 ರಂದು ಜನಿಸಿದ ರಾಜ್ ಅವರ ಮೊದಲ ಹೆಸರು ಸಿಂಗನಲ್ಲೂರು ಪುಟ್ಟಸ್ವಾಮಯ್ಯ ಮುತ್ತುರಾಜ್. ಚಿತ್ರರಂಗಕ್ಕೆ ಬಂದ ಬಳಿಕ ಇವರ ಹೆಸರು ರಾಜ್‍ಕುಮಾರ್ ಎಂದು ಬದಲಾಯಿತು. ಈಗಲೂ ಜನಮಾಸನದಲ್ಲಿ ಇವರು ರಾಜ್, ಅಣ್ಣಾವ್ರು ಎಂದೇ ಸ್ಥಾನ ಪಡೆದಿದ್ದಾರೆ. ರಾಜ್ ಅವರ ಕಲಾಸೇವೆಗೆ ಪದ್ಮಭೂಷಣ, ಕರ್ನಾಟಕ ರತ್ನ, ವರನಟ, ನಟ ಸಾರ್ವಭೌಮ, ಗಾನ ಗಂಧರ್ವ ಸೇರಿದಂತೆ ಹಲವು ಗೌರವಗಳು ಸಂದಿವೆ.10BG_PG2_MAYURA_2239489f

Please follow and like us:
error