ಆಹಾರದ ಪೊಟ್ಟಣ ವಿತರಿಸುವುದರ ಮೂಲಕ ವಾಸವಿ ಜಯಂತಿ ಆಚರಣೆ

ಇಂದು ಆರ್ಯವೈಶ್ಯ ಕುಲದ ಮಾತೆ ವಾಸವಿ ಕನ್ಯಕಾಪರಮೇಶ್ವರಿ ಅಮ್ಮನವರ ಜಯಂತೋತ್ಸವ ಇದ್ದು ಪ್ರತಿವರ್ಷದಂತೆ ಈ ಬಾರಿ ಅದ್ದೂರಿಯಾಗಿ ಮತ್ತು ಸಾಮೂಹಿಕವಾಗಿ ಆಚರಿಸಲು ಕರೋನ ಮಹಾಮಾರಿಯ ಕಾರಣದಿಂದಾಗಿ ಸರ್ಕಾರ ವಿಧಿಸಿರುವ ಲಾಕ್ಡೌನ್ ಶರತ್ತುಗಳ ಅನ್ವಯ ಸಾಧ್ಯವಾಗಿರುವುದಿಲ್ಲ.

ಆದ್ದರಿಂದ,
*ಕರ್ನಾಟಕ ಆರ್ಯವೈಶ್ಯ ಯುವಜನ ಮಹಾಸಭಾ,* *ವಾಸವಿ ಯುವಜನ ಸಂಘ, ಕೊಪ್ಪಳ,* *ಆರ್ಯವೈಶ್ಯ ಯುವಜನ ಸಂಘ, ಭಾಗ್ಯನಗರ* ಇವರುಗಳ ಸಂಯುಕ್ತ ಆಶ್ರಯದಲ್ಲಿ ವಾಸವಿ ಜಯಂತಿಯ ಕಾರ್ಯಕ್ರಮವನ್ನು ತಮ್ಮ ಜೀವನದ ಹಂಗು ತೊರೆದು ಕಾರ್ಯನಿರ್ವಹಿಸುತ್ತಿರುವ ನಗರಸಭೆಯ ಪೌರಕಾರ್ಮಿಕರಿಗೆ, ಭಾಗ್ಯನಗರ ಪಟ್ಟಣ ಪಂಚಾಯತಿಯ ಪೌರಕಾರ್ಮಿಕರಿಗೆ ಹಾಗೂ ಪೊಲೀಸ್ ಇಲಾಖೆಯ ಸಿಬ್ಬಂದಿಗೆ ಮತ್ತು ಸಾರ್ವಜನಿಕರಿಗೆ ಆಹಾರದ ಪೊಟ್ಟಣಗಳನ್ನು ವಿತರಿಸುವುದರ ಮುಖಾಂತರ ವಾಸವಿ ಜಯಂತಿಯ ಕಾರ್ಯಕ್ರಮವನ್ನು ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಆರ್ಯವೈಶ್ಯ ಸಮಾಜದ ಎಲ್ಲ ಭಾಂಧವರು ಪ್ರೋತ್ಸಾಹಿಸಿ ಕಾರ್ಯಕ್ರಮದ ಯಶಸ್ಸಿಗೆ ಕಾರಣೀಭೂತರಾಗಿರುತ್ತಾರೆ.

Please follow and like us:
error