ಆಶಾ ಕಾರ್ಯಕರ್ತೆಯರ ಜಿಲ್ಲಾ ಮಟ್ಟದ ಬೃಹತ್ ಪ್ರತಿಭಟನೆ

Koppal ಕೊಪ್ಪಳದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಆಶಾ ಕಾರ್ಯಕರ್ತೆಯರ ಜಿಲ್ಲಾ ಮಟ್ಟದ ಬೃಹತ್ ಪ್ರತಿಭಟನೆ ಧರಣಿ ಮಾಡಲಾಯಿತು. ಈ ಪ್ರತಿಭಟನೆ ಉದ್ದೇಶಿಸಿ (ಎಐಯುಟಿಯುಸಿ)ಸಂಯೋಜಿತ  ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯ ಕಾರ್ಯದರ್ಶಿಗಳಾದ ಡಿ. ನಾಗಲಕ್ಷ್ಮಿ ಮಾತನಾಡುತ್ತಾ.
 ಆಶಾ ಕಾರ್ಯಕರ್ತೆಯರಿಗೆ ಈಗ ಕಳೆದ ಕೆಲ ದಿನಗಳಿಂದ ಮೊಬೈಲ್‌ನಲ್ಲಿ ಈ ಸಮೀಕ್ಷೆ ಮಾಡಲು ಆಶಾಗಳಿಗೆ ತರಬೇತಿ ನೀಡಲಾಗುತ್ತಿದೆ . ಇದನ್ನು ಮೊಬೈಲ್ ಆ್ಯಪ್ ಮೂಲಕ ಕಡಿಮೆ ಅವಧಿಯಲ್ಲಿ ಟಾರ್ಗೆಟ್ ನೀಡಿ ಸಮೀಕ್ಷೆ ಮಾಡಬೇಕೆಂದು ತಿಳಿಸಲಾಗಿದೆ , ಆಶಾ ಕಾರ್ಯಕರ್ತೆಯರು , ಅಂಗನವಾಡಿ ಕಾರ್ಯಕರ್ತೆಯರು , ಕಿ.ಮ.ಆ.ಸಹಾಯಕಿಯರು , ಮತ್ತು ಎಂಎಲ್‌ಎಚ್‌ಪಿ ಸಿಬ್ಬಂದಿಗಳು ಸಮೀಕ್ಷೆ ಮಾಡಲು ಆದೇಶಿಸಲಾಗಿದೆ . ಆದರೆ ಹಲವಾರು ಜಿಲ್ಲೆಗಳಲ್ಲಿ ಆಶಾ ಕಾರ್ಯಕರ್ತೆಯರಿಗೆ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಮಾತ್ರ ಮನೆಗಳನ್ನು ಹಂಚಿ ಸಮೀಕ್ಷೆ ಮಾಡಲು ಹೇಳಿರುತ್ತಾರೆ . ಈಗಾಗಲೇ ಹಲವಾರು ಜಿಲ್ಲೆಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಈ ಸಮೀಕ್ಷೆ ಮಾಡಲು ಸದ್ಯಕ್ಕೆ ಆಗುವುದಿಲ್ಲವೆಂದು ಎಂದಿರುತ್ತಾರೆ , ಈಗ ಕೊನೆಗೆ ಆಶಾ ಕಾರ್ಯಕರ್ತೆಯರಷ್ಟೇ ಈ ಸರ್ವೆ ಮಾಡಬೇಕಾಗುತ್ತದೆ , ಇವರಿಗೆ ಮೊಬೈಲ್ ಮತ್ತು ಡಾಟಾ ನೀಡದೆ ಒತ್ತಾಯ ಪೂರಕ ಸರ್ವೆ ಮಾಡಿಸಲು ಸಿಬ್ಬಂದಿಗಳು ಮುಂದಾಗಿದ್ದಾರೆ , ಆಶಾ ಬಳಿ ಮೊಬೈಲ್ ಇಲ್ಲವೆಂದರೆ ಹೊಸ ಮೊಬೈಲ್‌ನ್ನು ನಾಳೆಗೆ ಖರೀದಿ ಮಾಡಿಕೊಂಡು ಈ ಸರ್ವೆ ಮಾಡಬೇಕೆಂದಿರುತ್ತಾರೆ . ಮೊಬೈಲ್‌ನಲ್ಲಿ ಈ ಸಮೀಕ್ಷೆ ಮಾಡಲು ಆಗುವುದಿಲ್ಲವೆಂದರೆ ಗಂಡ- ಮಕ್ಕಳಿಂದ ಈ ಕೆಲಸ ಮಾಡಿಸಲು ಹೇಳುತ್ತಿರುವರು . ಅಥವಾ ಕೆಲಸ ಬಿಡಿ ಎಂದು ಹೇಳುವರು , ಸದ್ಯದ ಕೊರೋನಾ ಪರಿಸ್ಥಿತಿಯಲ್ಲಿ ಹಲವಾರು ಕುಟುಂಬಗಳು ಸಂಕಷ್ಟ ಪರಿಸ್ಥಿತಿಯಲ್ಲಿವೆ . ಮೊಬೈಲ್ ಖರೀದಿಸಲು ಸಾವಿರಾರು ರೂಪಾಯಿಗಳು ಬೇಕು . ಅದು ಅಸಾಧ್ಯ . ಈಗಾಗಲೇ ಕೆಲವರ ಬಳಿ ಮೊಬೈಲ್ಗಳು ಇದ್ದರೂ ಸಹ ಅವು ಅವರ ವೈಯಕ್ತಿಕ ಕೆಲಸಕ್ಕೆ ಇಟ್ಟುಕೊಂಡಿರುತ್ತಾರೆ . ಇಲಾಖೆ ಕೆಲಸಕ್ಕೆ ಇಲಾಖೆಯಿಂದ ಸೂಕ್ತ ವ್ಯವಸ್ಥೆ ಆಗಬೇಕು . ಹಾಗೆಯೇ ಇಂತಹ ಮಹತ್ವ ಸರ್ವಗೆ ಸೂಕ್ತ ಸಂಭಾವನೆ ನೀಡಬೇಕು . ಮುಖ್ಯವಾಗಿ ಆಶಾಗಳಿಗೆ ಮೊಬೈಲ್ ಮತ್ತು ಡಾಟಾ ನೀಡದೇ ಇರುವುದರಿಂದ ಮಾಡಲು ಆಗುವುದಿಲ್ಲವೆಂದು ಮತ್ತು ಇನ್ನೂ ಕೆಲ ಕಾರ್ಯಕರ್ತೆಯರು ಮೊಬೈಲ್ ಕೊಟ್ಟರೂ ಸಹ ಮೊಬೈಲ್ ಆ್ಯಪ್‌ಗಳ ಮುಖಾಂತರ ಕೆಲಸ ಮಾಡಲು ಆಗುವುದಿಲ್ಲ . ಆದರೆ ಮ್ಯಾನುಯಲ್ ಆಗಿ ಈ ಕೆಲಸ ಮಾಡಬಹುದಾಗಿದೆ . ಈ ಬಗ್ಗೆ ಮಾನ್ಯ ಅಭಿಯಾನ ನಿರ್ದೇಶಕರೊಂದಿಗೆ ಸಭೆ ನಡೆದಾಗ ಅವರು ಈ ಬಗ್ಗೆ ಸೂಕ್ತಕ್ರಮ ಕೈಗೊಳ್ಳುವುದಾಗಿ ತಿಳಿಸಿರುತ್ತಾರೆ , ಮತ್ತು ಪ್ರತೀ ಪಿಎಚ್ಸಿ ಗೆ ಒಬ್ಬ ಡಾಟಾ ಎಂಟ್ರಿ ಆಪರೇಟರ್‌ಗಳನ್ನು ನೇಮಿಸುವ ಕುರಿತು ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುವ ಭರವಸೆ ನೀಡಿರುತ್ತಾರೆ , ಸರ್ವೆಗೆ ಸಂಬಂಧಿಸಿದಂತೆ ಆರೋಗ್ಯ ವಿಷಯದ ಮಾಹಿತಿಯನ್ನು ಮಾತ್ರ ಆಶಾ ಕಾರ್ಯಕರ್ತೆ ಸಂಗ್ರಹಿಸುತ್ತಾಳೆ . ಇನ್ನಿತರೆ ಆರ್ಥಿಕ ಮಾಹಿತಿ ಕೇಳಿದಾಗ ಜನರಿಂದ ವಿರೋಧ ಎದುರಿಸಿರುವ ಘಟನೆಗಳೂ ನಡೆದಿವೆ . ಏಕೆಂದರೆ ಇತ್ತೀಚಿಗೆ ಆಹಾರ ಮತ್ತು ನಾಗರೀಕ ಸೇವೆ ಸಚಿವರು- ದ್ವಿಚಕ್ರವಾಹನ , ಟಿ.ವಿ ಇರುವವರಿಗೆ ಪಡಿತರ ನಿಲ್ಲಿಸುವುದಾಗಿ ತಿಳಿಸಿರುತ್ತಾರೆ . ನಂತರ ಜನತೆಯ ವಿರೋಧಗಳಿಂದ ವಾಪಾಸ್ ಪಡೆದಿರುತ್ತಾರೆ . ಈಗ ಈ ಮಾಹಿತಿಗಳನ್ನು ಜನತೆ ನೀಡಲು ನಿರಾಕರಿಸುವರು . ಇಂತಹ ವಿವರಗಳನ್ನು ಸಮೀಕ್ಷೆಯಲ್ಲಿ ಕೈಬಿಟ್ಟು ಸಮೀಕ್ಷೆ ನಡೆಸಬೇಕಾಗುತ್ತದೆ . ಮತ್ತೊಂದೆಡೆ ಈ ತರಹ ಹಲವಾರು ಸಮೀಕ್ಷೆಗಳನ್ನು ಆಶಾ ಕಾರ್ಯಕರ್ತೆಯರು ಮಾಡುತ್ತಿರುವುದರಿಂದ ಇವರ ಮೂಲ ಕೆಲಸಗಳಾದ ಸುಗಮ ಹೆರಿಗೆ , ಸ್ವಸ್ಥ ಮಗುವಿನ ಜನನ , ತಾಯಿ – ಶಿಶು ಆರೈಕೆಗಳ ಕುರಿತ ಸೇವೆಗಳು , ಗ್ರಾಮ ನೈರ್ಮಲ್ಯ ಸೇರಿದಂತೆ ವಿವಿಧ ಕಾರ್ಯ ಚಟುವಟಿಕೆಗಳಿಗೆ ತೊಂದರೆಯೂ ಆಗುತ್ತಿದೆ . ಒಟ್ಟಾರೆಯಾಗಿ ಈ ಸಮೀಕ್ಷೆ ಮಾಡಲು ಆಶಾ ಕಾರ್ಯಕರ್ತೆಯರಿಗೆ ಮೊಬೈಲ್ / ಟ್ಯಾಬ್ ಜೊತೆ ಡಾಟಾ ಒದಗಿಸಿದಲ್ಲಿ ಈ ಸಮೀಕ್ಷೆ ನಡೆಸಲು ಆಗುತ್ತದೆ . ಹಾಗೆಯೇ ಯಾರಿಗೆ ಮೊಬೈಲ್ / ಟ್ಯಾಬ್ ಬಳಸಲು ಆಗುವುದಿಲ್ಲವೋ ಅಲ್ಲಿ ಪರ್ಯಾಯ ವ್ಯವಸ್ಥೆ ಮಾಡಬೇಕಾಗುತ್ತದೆ . ಅಲ್ಲಿಯವರೆಗೆ ಆಶಾ ಕಾರ್ಯಕರ್ತೆಯರು ಈ ಸಮೀಕ್ಷೆ ಮಾಡಲು ಆಗುವುದಿಲ್ಲವೆಂದು ಜಿಲ್ಲಾ ಅರೋಗ್ಯ  ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ. ಅಲಕಾನಂದ ಡಿ. ಮಳಗಿ  ಇವರಿಗೆ  ಮನವಿ ಸಲ್ಲಿಸಲಾಯಿತು. ಹಾಗೆಯೇ ಈ ಕೆಳಕಂಡ ಬೇಡಿಕೆಗಳನ್ನುಕೂಡಲೇ ಈ ಡೇರಿಸಬೇಕೆಂದು ಒತ್ತಾಯಿಸಲಾಯಿತು.
 ಹಕ್ಕೊತ್ತಾಯಗಳು : 1 , ಆಶಾ ಕಾರ್ಯಕರ್ತೆಯರಿಗೆ ಈ ಸಮೀಕ್ಷೆ ಮಾಡಲು ಮೊಬೈಲ್ / ಟ್ಯಾಬ್ ಜೊತೆ ಡಾಟಾ ಒದಗಿಸಿ ಸಮೀಕ್ಷೆ ನಡೆಸಿ ,
2. ಆಶಾ ಕಾರ್ಯಕರ್ತೆಯರಲ್ಲಿ ಯಾರಿಗೆ ಮೊಬೈಲ್ / ಟ್ಯಾಬ್ ಬಳಸಲು ಆಗುವುದಿಲ್ಲವೋ ಅವರಿಗೆ ಪರ್ಯಾಯ ವ್ಯವಸ್ಥೆ ಮಾಡಿ .
3 , ಆಶಾ ಕಾರ್ಯಕರ್ತೆಯರಿಗೆ ಈ ಸಮೀಕ್ಷೆಗೆ ಸೂಕ್ತ ಸಂಭಾವನೆ ನಿಗದಿ ಮಾಡಿ ,
4. ಒತ್ತಡ ಮಾಡದೆ ಅಗತ್ಯವಿರುವಷ್ಟು ಸಮಯ ನೀಡಿ , ಈ ಸಮೀಕ್ಷೆ ಮಾಡಿಸಿ .
5. ಆರ್ಥಿಕ ಮಾಹಿತಿಯನ್ನು ಈ ಸಮೀಕ್ಷೆಯಿಂದ ಕೈಬಿಡಲು ಆಗ್ರಹಿಸಲಾಯಿತು  .
 ಈ ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷರಾದ ಶರಣು ಗಡ್ಡಿ ಜಿಲ್ಲಾ  ಕಾರ್ಯದರ್ಶಿಗಳಾದ ಕೌಶಲ್ಯ, ತಾಲೂಕ ಅಧ್ಯಕ್ಷರುಗಳಾದ ವಿಜಯಲಕ್ಷ್ಮಿ,  ಶೋಭಾ, ದ್ರಾಕ್ಷಾಯಿಣಿ, ಗಿರಿಜಮ್ಮ,ಶಾರದಾ, ಸಂಗೀತಾ,  ಶಾಂತಮ್ಮ, ದೀಪ, ಅನ್ನಪೂರ್ಣ, ಪುಷ್ಪ, ಹಾಗೂ ಸಂಘಟನೆ ಮುಖಂಡರಾದ, ಮಂಜುಳಾ, ಶರಣು ಪಾಟೀಲ್ ಮುಂತಾದ ನೂರಾರು ಆಶಾ ಕಾರ್ಯಕರ್ತೆಯರು ಪ್ರತಿಭಟನೆಯಲ್ಲಿ ಭಾಗವಸಿದ್ದರು.
Please follow and like us:
error