ಆರ್ಥಿಕ ಸಂಕಷ್ಟದಿಂದ ನೆರೆಪರಿಹಾರ ವಿಳಂಭವಾಗಿರಬಹುದು- ಪೇಜಾವರಶ್ರೀ

ಭಾಗಲಕೋಟೆ : ಕೇಂದ್ರ ಸರ್ಕಾರಕ್ಕೆ ಆರ್ಥಿಕ ಸಂಕಷ್ಟ ಎದುರಾಗಿರುವ ಸಂಶಯವಿದೆ. ಹಾಗಾಗಿ ರಾಜ್ಯದ ನೆರೆ ಪರಿಹಾರ ವಿಳಂಬಕ್ಕೆ  ಆರ್ಥಿಕ ಕುಸಿತ ಕಾರಣ ಇರಬಹುದು ಎಂದು ಉಡುಪಿಯ ಪೇಜಾವರ ಶ್ರೀಗಳು ಹೇಳಿಕೆ ಸಂಶಯ ವ್ಯಕ್ತ ಪಡಿಸಿದ್ದಾರೆ. 

ಕೇಂದ್ರ ಸರ್ಕಾರ ನೆರೆ ಪರಿಹಾರ ಬಿಡುಗಡೆ ಮಾಡದ ಬಗ್ಗೆ ಮಾಧ್ಯಮವರೊಂದಿಗೆ ಮಾತನಾಡಿದ  ಪೇಜಾವರ ಶ್ರೀಗಳು, ಕರ್ನಾಟಕ ಮಾತ್ರವಲ್ಲ, ಮಹಾರಾಷ್ಟ್ರ, ಗುಜರಾತ್ ಗೂ ನೆರೆ ಪರಿಹಾರ ಕೊಟ್ಟಿಲ್ಲ. ಬೇಗ ಪರಿಹಾರ ಕೊಡಿ ಅಂತ  ಪ್ರಧಾನಿ ಮೋದಿಗೆ ಪತ್ರ ಬರೆದಿದ್ದೇನೆ. ಈ ಮೂಲಕ ಪತ್ರದಲ್ಲಿ ನನ್ನ ಭಾವನೆಗಳನ್ನು ಹೊರಹಾಕಿದ್ದೇನೆ. ಪತ್ರಕ್ಕೆ ಸ್ಪಂದನೆ ಹೇಗೆಲ್ಲ ಸಿಗುತ್ತೆ ನೋಡೋಣ .ಪೋನ್ ಮಾಡಿ ಮಾತನಾಡಲು ಕಿವಿಯ ಸಮಸ್ಯೆ ಇದೆ‌ . ಮೋದಿ  ಅನೇಕ ಒಳ್ಳೆಯ ಕೆಲಸ ಮಾಡಿದ್ದಾರೆ. ಅಭಿವೃದ್ದಿ ಕೆಲಸಗಳು ಆಗಿವೆ. ನೆರೆ ಪರಿಹಾರ ಮಾತ್ರ ವಿಳಂಬ ಆಗಿದೆ. ಪರಿಹಾರ ಬರಬಹುದು ಅನ್ನೋ ವಿಶ್ವಾಸ . , ಸದಾನಂದ ಗೌಡ್ರು ಸೂಲಿಬೆಲೆ ಅವರ ಹೆಸರು ಹೇಳಿ ದೇಶದ್ರೋಹಿ ಅಂದಿಲ್ಲ. ಸೂಲಿಬೆಲೆ ಒಳ್ಳೆಯ ಕೆಲಸ ಮಾಡ್ತಿದ್ದಾರೆ. ಯುವಕರ ಸಂಘಟನೆ ಮಾಡಿದ್ದಾರೆ. ಸದಾನಂದಗೌಡ್ರು ಒಳ್ಳೆಯ ಕೆಲಸ ಮಾಡ್ತಿದ್ದಾರೆ. ಸಂಸದರ ಬಗ್ಗೆ ಮಾತಾಡಿದ್ರೂ ಅಂತ ಬೇಸರದಲ್ಲಿ ಹಾಗೆ ಹೇಳಿರಬಹುದು. ಸಂಸದರು ಸೂಚನೆ ಕೊಟ್ಟ ಮಾತ್ರಕ್ಕೆ ಯಾರನ್ನೂ ದೇಶದ್ರೋಹಿ ಅನ್ನಕಾಗಲ್ಲ ಅಂತಾ ಹೇಳಿದ್ರು. ಬಿಜೆಪಿಯಲ್ಲಿ ಯಡಿಯೂರಪ್ಪ ಕೈ ಕಟ್ಟಿ ಹಾಕ್ತಿದ್ದಾರೆ ಅಂತ ಅನಿಸಿಲ್ಲ.   ಯಡಿಯೂರಪ್ಪ ಮತ್ತು ಸಂಘ ಪರಿವಾರದ ನಡುವೆ ಒಳ್ಳೆಯ ಬಾಂಧವ್ಯ ಇದೆ. ಇದನ್ನು ಸಂಘ ಪರಿವಾರದವರೆ ಹೇಳಿದ್ದಾರೆ. ಅಲ್ಲಿಂದ ಯಾವುದೆ ತೊಂದರೆ ಆಗಿಲ್ಲ. ಕೆಲ ಮಠಾಧೀಶರು ಹೋರಾಟ ಮಾಡ್ತೇವೆ ಅಂದಿದ್ದು ಗೊತ್ತಾಗಿದೆ. ಅದು ಅವರ ವೈಯಕ್ತಿಕ ಅಭಿಪ್ರಾಯ. ಆ ಬಗ್ಗೆ ನಾನು ಏನು ಹೇಳಲ್ಲ ಎಂದು ಹೇಳಿದರು.

Please follow and like us:
error