ಆರ್ಥಿಕ‌ ಕುಸಿತ ನೌಕರರನ್ನು ತೆಗೆದುಹಾಕುತ್ತೀರುವ ಉದ್ದಿಮೆಗಳು

ಬೆಂಗಳೂರು , ಆ . : ಆರ್ಥಿಕ ಕುಸಿತದ ಬಿಸಿ ಕೇವಲ ಬೃಹತ್ ಉದ್ಯಮಗಳಿಗೆ ಮಾತ್ರವಲ್ಲ , ಹಲವು ಮಧ್ಯಮ ಮತ್ತು ಸಣ್ಣ ಉದ್ಯಮಗಳಿಗೂ ತಟ್ಟಿದೆ . ಬೆಂಗಳೂರಿನ ಹಲವು ಉದ್ದಿಮೆಗಳು ಆರ್ಥಿಕ ಕುಸಿತದ ಸಮಸ್ಯೆಗೆ ಸಿಲುಕಿ ನೌಕರರನ್ನು ಕೆಲಸದಿಂದ ತೆಗೆದು ಹಾಕುತ್ತಿವೆ ಅಥವಾ ಅವರ ವೇತನದಲ್ಲಿ ಶೇ . 30ರಷ್ಟು ಕಡಿತ ಮಾಡುತ್ತಿವೆ ಎಂದು newindianexpress ವರದಿ ತಿಳಿಸಿದೆ . ತಮ್ಮ ಉದ್ಯೋಗ ಉಳಿಸಿಕೊಳ್ಳಲು ಹಾಗೂ 
ವೇತನದಲ್ಲಿ ಆಗುತ್ತಿರುವ ಕಡಿತವನ್ನು ಸರಿಪಡಿಸುವಂತೆ ಕೋರಿ ಹಲವು ನೌಕರರು ರಾಜ್ಯ ಕಾರ್ಮಿಕ ಇಲಾಖೆಯ ಮೊರೆಹೊಕ್ಕಿದ್ದಾರೆ . ವಾಹನ ಉದ್ಯಮ , ಜವಳಿ ಮತ್ತು ಉತ್ಪಾದನಾ ವಲಯಗಳು ಅರ್ಥಿಕ ಕುಸಿತದ ತೀವ್ರ ಪರಿಣಾಮಕ್ಕೆ ಒಳಗಾಗಿವೆ . ಬೆಂಗಳೂರಿನ ಪ್ರಮುಖ ಕೈಗಾರಿಕಾ ವಲಯವಾಗಿರುವ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಕೆಲವು ಕೈಗಾರಿಕೆಗಳಿಗೆ ಒಂದು ಶಿಫ್ಟ್‌ಗೆ ಸಾಲುವಷ್ಟೂ ಕೆಲಸ ದೊರಕುತ್ತಿಲ್ಲ . ನೌಕರರಿಗೆ ಕೆಲಸವಿಲ್ಲದಿದ್ದರೂ ಸಂಬಳ ಪಾವತಿಸಬೇಕಾದ ಸ್ಥಿತಿಯಿದೆ . ಒಂದು ವಾಹನ ಉದ್ಯಮದಲ್ಲಿ 1000ಕ್ಕೂ ಅಧಿಕ ನೌಕರರನ್ನು ಕೆಲಸ ಬಿಟ್ಟುಹೋಗುವಂತೆ ಸೂಚಿಸಲಾಗಿದೆ . ಹಲವೆಡೆ ಇದೇ ರೀತಿಯ ಪರಿಸ್ಥಿತಿಯಿದೆ . ಕೈಗಾರಿಕೆಗಳು ತಮಗೆ ಮಾಹಿತಿ ನೀಡುವುದಿಲ್ಲ . ಕೇವಲ ನೌಕರರಿಂದ ಮಾತ್ರ ಮಾಹಿತಿ ದೊರಕುತ್ತಿದೆ ಎಂದು ಕಾರ್ಮಿಕ ಇಲಾಖೆಯ ಮೂಲಗಳು ತಿಳಿಸಿವೆ . ಪೀಣ್ಯದಲ್ಲಿ ಸುಮಾರು 10000ಕ್ಕೂ ಹೆಚ್ಚು ಮಧ್ಯಮ ಮತ್ತು ಸಣ್ಣ ಕೈಗಾರಿಕೆಗಳಿವೆ . ಈಗ ಇದರಲ್ಲಿ ಶೇ . 50ರಷ್ಟು ಕೈಗಾರಿಕೆಗಳ ಮೇಲೆ ಪರಿಣಾಮ ಉಂಟಾಗಿದೆ . ಈ ಕೈಗಾರಿಕೆಗಳಿಗೆ ಸರಕು ಪೂರೈಕೆಗೆ ಯಾವುದೇ ಕೋರಿಕೆ ( ಆದೇಶ ) ದೊರಕದ ಕಾರಣ ಕೆಲಸ ಬಹುತೇಕ ಸ್ಥಗಿತವಾಗಿದೆ . ಈ ಕೈಗಾರಿಕೆಗಳಲ್ಲಿ ಹಿಂದೆ 8 ಗಂಟೆಗಳ ಅವಧಿಯ ಮೂರು ಶಿಪ್‌ಗಳಲ್ಲಿ ಕೆಲಸ ಸಾಗುತಿತು

 ಕೆಲಸ ಬಹುತೇಕ ಸ್ಥಗಿತವಾಗಿದೆ . ಈ ಕೈಗಾರಿಕೆಗಳಲ್ಲಿ ಹಿಂದೆ 8 ಗಂಟೆಗಳ ಅವಧಿಯ ಮೂರು ಶಿಫ್ಗಳಲ್ಲಿ ಕೆಲಸ ಸಾಗುತ್ತಿತ್ತು ಎಂದು ಪೀಣ್ಯ ಕೈಗಾರಿಕಾ ಸಂಸ್ಥೆಯ ಮಾಜಿ ಅಧ್ಯಕ್ಷ ಮೈಲಾದ್ರಿ ರೆಡ್ಡಿ ಹೇಳಿದ್ದಾರೆ . ಈಗ ಒಂದು ಶಿಫ್ಟ್ನಲ್ಲಿ ಕೂಡಾ ಕೆಲಸ ಸಾಗದಂತಹ ಪರಿಸ್ಥಿತಿ ಎದುರಾಗಿದೆ . ಹಲವಾರು ಮಂದಿ ಈ ಕೈಗಾರಿಕೆಗಳನ್ನು ಅವಲಂಬಿಸಿದ್ದಾರೆ . ಇದುವರೆಗೆ ಯಾರನ್ನೂ ಕೆಲಸದಿಂದ ತೆಗೆದಿಲ್ಲ . ಆದರೆ ವೇತನ ಪಾವತಿಸಲು ಕಷ್ಟವಾಗುತ್ತಿದೆ ಎಂದವರು ಹೇಳಿದ್ದಾರೆ . ಆದರೆ ಈಗಾಗಲೇ ಹಲವರನ್ನು ಕೆಲಸದಿಂದ ತೆಗೆದಿರುವುದಾಗಿ ಪೀಣ್ಯ ಕೈಗಾರಿಕಾ ಸಂಸ್ಥೆಯ ಇತರ ಮೂಲಗಳು ತಿಳಿಸಿವೆ . ಕೈಗಾರಿಕೆಗಳು ಇದನ್ನು ಕೆಲಸದಿಂದ ತೆಗೆಯುವುದು ಎಂದು ನೇರವಾಗಿ ಹೇಳುತ್ತಿಲ್ಲ . ಪ್ರತೀ ವರ್ಷ ಆಯುಧ ಪೂಜೆ ಅಥವಾ ದೀಪಾವಳಿಗೆ ಸಾಮಾನ್ಯವಾಗಿ ನೌಕರರಿಗೆ ಬೋನಸ್ ಅಥವಾ ಏನಾದರೊಂದು ಕೊಡುಗೆ ನೀಡಲಾಗುತ್ತದೆ . ಅಲ್ಲದೆ ಈ ಸಂದರ್ಭ ಕೆಲಸ ಜಾಸ್ತಿಯಿರುವುದರಿಂದ ನೌಕರರಿಗೆ ರಜೆ ಯನ್ನೂ ನೀಡುವುದಿಲ್ಲ . ಆದರೆ ಈ ಬಾರಿ ಹಲವರು ಬೋನಸ್ ಕೂಡಾ ನೀಡಿಲ್ಲ . ಒಂದೆರಡು ತಿಂಗಳು ಬಿಟ್ಟು ಕೆಲಸಕ್ಕೆ ಬರುವಂತೆ ಕೆಲವು ಸಂಸ್ಥೆಯವರು ನೌಕರರಿಗೆ ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ . ಆರ್ಥಿಕ ಹಿಂಜರಿತ ವಾಹನ ಉತ್ಪಾದನಾ ಕ್ಷೇತ್ರ ಹಾಗೂ ಇದನ್ನು ಅವಲಂಬಿಸಿರುವ ಇತರ ಉದ್ಯಮಗಳ ಮೇಲೆ ವ್ಯಾಪಕ ಪರಿಣಾಮ ಬೀರಿದೆ . ಈ ಉದ್ಯಮಗಳು ಉತ್ಪಾದಿಸುವ ಸರಕುಗಳನ್ನು ಖರೀದಿಸುವವರೇ ಇಲ್ಲ ಎಂಬಂತಾಗಿದೆ . ಸರಕು ಪೂರೈಸಲು ಕೋರಿಕೆ ಬರುತ್ತಿಲ್ಲ , ಆದ್ದರಿಂದ ಆದಾಯವೂ ಇಲ್ಲ . ಆದಾಯ ಇಲ್ಲದಾಗ ನೌಕರರ ವೇತನ ಪಾವತಿಸಲು ಸಾಧ್ಯವಾಗುತ್ತಿಲ್ಲ . ಆದ್ದರಿಂದ ನೌಕರರನ್ನು ರಜೆಯ ಮೇಲೆ ಕಳಿಸುವುದು ಅಥವಾ ವೇತನ ಕಡಿತ ಸಹಜವಾಗಿದೆ ಎಂದು ಕರ್ನಾಟಕ ಕೈಗಾರಿಕೆ ಮತ್ತು ವಾಣಿಜ್ಯ ಒಕ್ಕೂಟದ ಅಧ್ಯಕ್ಷ ಸೀಗ್ ಜನಾರ್ದನ್ ಹೇಳಿದ್ದಾರೆ

Please follow and like us:
error