ಆರ್ಥಿಕವಾಗಿ ಸಬಲರಾಗಲು ಸಹಕಾರಿ ಸಂಸ್ಥೆಗಳು ತುಂಬಾ ಸಹಾಯಕಾರಿ : ಅಮರೇಶ ಕರಡಿ

ಕೊಪ್ಪಳದಲ್ಲಿ ಹೂಗಾರ ಹಿಂದುಳಿದ ವರ್ಗದವರ ಪತ್ತಿನ ಸಹಕಾರ ಸಂಘದ ಉದ್ಘಾಟನೆ

ಕೊಪ್ಪಳ : ಸಹಕಾರಿ ಕ್ಷೇತ್ರಕ್ಕೆ ರಾಜ್ಯ ಅನೇಕ ಕೊಡುಗೆಗಳನ್ನು ನೀಡಿದೆ ನಗರ ಪಟ್ಟಣ ಸೇರಿ ಗ್ರಾಮೀಣ ಜನರ ಆರ್ಥಿಕ ಸಬಲತೆಗೆ ಸಹಕಾರಿ ಸಂಸ್ಥೆಗಳು ತುಂಬಾ ಸಹಾಯಕಾರಿ ಎಂದು ಕೆಡಿಪಿ ಸದಸ್ಯ ಅಮರೇಶ ಕರಡಿ ಹೇಳಿದರು ನಗರದಲ್ಲಿ ಸ್ಥಾಪನೆಯಾಗಿರುವ ಹೂಗಾರ ಹಿಂದುಳಿದ ವರ್ಗದವರ ಪತ್ತಿನ ಸಹಕಾರ ಸಂಘ ೩ ವನ್ನು ಸೋಮವಾರದಂದು ಉದ್ಘಾಟಿಸಿ ಮಾತನಾಡಿದ ಅವರು , ಸಹಕಾರಿ ರಂಗವು ಸಾರ್ವಜನಿಕ ಜೀವನದ ಪ್ರಾಥಮಿಕ ಮೈಲುಗಲ್ಲು ಜನ ಸಾಮಾನ್ಯರಿಗೆ ಅನುಕೂಲವಾಗಲು , ಮತ್ತವರ ಆರ್ಥಿಕ ಅಭಿವೃದ್ಧಿಗೆ ಬುನಾದಿಯಾಗಿದೆ . ಈ ಕ್ಷೇತ್ರವನ್ನು ನಾವು ಬೆಳಸಬೇಕಾಗಿದೆ ಎಂದರು . ಹಿರಿಯರು ಕಟ್ಟಿ ಬೆಳಸಿರುವ ಸಹಕಾರಿ ಕ್ಷೇತ್ರವನ್ನು ನಾವು ನಾಡಿನ ಜನರ ಕಲ್ಯಾಣಕ್ಕಾಗಿ ಮುಂದುವರೆಸಲು ಸಹಕಾರ ಚಳುವಳಿ ಮತ್ತಷ್ಟು ಯಶಸ್ವಿಯಾಗಬೇಕು . ಇದರಲ್ಲಿ ಹೆಚ್ಚು ಮಹಿಳೆಯರು , ಯುವಜನರು ಪಾಲ್ಗೊಂಡು ಸಹಕಾರ ಚಳುವಳಿಗೆ ಹೊಸ ಆಯಾಮವನ್ನು ನೀಡಲು ಸಹಕಾರ ಕ್ಷೇತ್ರದ ವ್ಯವಸ್ಥೆಯಡಿ ತೊಡಗಿಸಿಕೊಂಡು ಸಹಕಾರ ಕ್ಷೇತ್ರವನ್ನು ಬಲಪಡಿಸುವುಂತೆ ಕರೆನೀಡಿದರು , ಕೊರೊನಾ ಸಂದರ್ಭದಲ್ಲಿ ಸಹಕಾರಿ ರಂಗಕ್ಕೂ ತೊಂದರೆಯಾಗಿ ಸಹಕಾರ ಸಂಘಗಳು ಬಹಳ ಸಂಕಷ್ಟವನ್ನು ಸಹಕಾರ ಸಂಘಗಳನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಬೇಕಾಗಿದೆ ಇವಾಗ ಸ್ಥಾಪಿತವಾಗಿರುವ ಹೂಗಾರ ಹಿಂದುಳಿದ ವರ್ಗದವರ ಪತ್ತಿನ ಸಹಕಾರ ಸಂಘ ನಿ . , ದಿಂದ ಈ ಸಮುದಾಯದ ಅಭಿವೃದ್ಧಿಗೆ ಶ್ರಮಿಸಲಿ ಎಂದರು . ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ತೇಜಪ್ಪ ಹೂಗಾರ ಬಸವರಾಜಗೌಡ್ರು ಎ ಪಿ ಎಂ ಸಿ ಸದಸ್ಯರಾದ ಡಾ !! ಸುನಿತಾ ಸಿದ್ರಾಮ್ ಶ್ರೀ ಭೀಮಣ್ಣ ಹೂಗಾರ ಶಂಭುಲಿಂಗನಗೌಡ ಪಾಟೀಲ್ , ಬಸವರಾಜ ಹೂಗಾರ , ಗವಿಸಿದ್ದಪ್ಪ ಹೂಗಾರ ರಮೇಶ ಹೂಗಾರ , ರುದ್ರಪ್ಪ ಹೂಗಾರ , ಸುರೇಶ ಹೂಗಾರ ಸೇರಿದಂತೆ ಆಡಳಿತ ಮಂಡಳಿಯವರು ಉಪಸ್ಥಿತರಿದ್ದರು

Please follow and like us:
error