ಆರೋಗ್ಯ ಇಲಾಖೆಯ ನೌಕರರ, ಅಧಿಕಾರಿಗಳ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ

ಕೊಪ್ಪಳ : ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವೈದ್ಯಕೀಯ ಇಲಾಖಾ ಅಧಿಕಾರಿಗಳು ಮತ್ತು ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಎಂ.ಪುರುಷೋತ್ತಮ ನಗರದ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು

ವೈದ್ಯಾಧಿಕಾರಿಗಳಿಗೆ ಮಾತ್ರ ವಿಶೇಷ ಭತ್ಯೆ ನೀಡಲಾಗಿದೆ. ಆದರೆ ಇಲಾಖೆಯ ಇತರೆ ನೌಕರರಿಗೆ ನೀಡಿಲ್ಲ. ಅದನ್ನು ಮಂಜೂರು ಮಾಡಲು ಆಗ್ರಹ. ನೇರವಾಗಿ ಮನೆನೆ ತೆರಳಿ ಸೇವೆ ಸಲ್ಲಿಸುತ್ತಿರುವ ನೌಕರರಿಗೆ ಭತ್ಯೆ ನೀಡಬೇಕು. ವೃಂದ ನೇಮಕಾತಿ ಮಾಡಲಿ, ೪೦ ಸಾವಿರ ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು. ಜನಸಂಖ್ಯೆಗನುಗುಣವಾಗಿ ಭರ್ತಿ ಮಾಡಬೇಕು. ವಿಶ್ವ ಆರೋಗ್ಯ ದಿನಾಚರಣೆ ಫೋಟೊಗೆ ಸಿಮೀತವಾಗಬಾರದು. ಪ್ರಾಮಾಣಿಕ ನೌಕರರನ್ನು ಗುರುತಿಸಿ, ಪ್ರಶಸ್ತಿ ನೀಡಬೇಕು. ನೈಟಿಂಗೆಲ್ ಪ್ರಶಸ್ತಿ ಅರ್ಹರಿಗೆ ನೀಡಬೇಕು ಎಂದು ಆಗ್ರಹಿಸಿದರಲ್ಲದೇ

: ಕೋವಿಡ್ – 19 ಸಂದರ್ಭದಲ್ಲಿ ನಿರಂತರವಾಗಿ ಯೋಧರಾಗಿ ತಮ್ಮ ಕೌಟುಂಬಿಕ ಸಮಸ್ಯೆಗಳನ್ನು ಬದಿಗೊತ್ತಿ ಜೀವದ ಹಂಗು ತೊರೆದು ಕರ್ತವ್ಯ ನಿರತರಾಗಿರುವ ಇಲಾಖೆಯ ಅರೆ ವೈದ್ಯಕೀಯ ಮತ್ತು ಇತರೆ ಸಿಬ್ಬಂದಿಗಳಿಗೆ ವೈದ್ಯರಿಗೆ ನೀಡಿರುವಂತೆ ವಿಶೇಷ ಭತ್ಯೆಯನ್ನು ಮಂಜೂರು ಮಾಡುವುದು . ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆಯನ್ನು ವಿಲೀನಗೊಳಿಸುವುದು . ದೀರ್ಘಾವಧಿಯಲ್ಲಿ ಬಾಕಿ ಇರುವ ಎಲ್ಲಾ ವೃಂದಗಳ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ಮಾಡಿರುವ ಸಮಿತಿಯು ಆದಷ್ಟು ಶೀಘ್ರ ವರದಿ ನೀಡಿ ಅದನ್ನು ಜಾರಿಗೊಳಿಸುವ ಬಗ್ಗೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ . ನಮ್ಮ ಇಲಾಖೆಯಲ್ಲಿ ರಾಜ್ಯದಲ್ಲಿ ಒಟ್ಟೂ 69,667 ಖಾಯಂ ಹುದ್ದೆಗಳಿದ್ದು , ಇದರಲ್ಲಿ 39,139 ಮಂದಿ ಮಾತ್ರ ಕರ್ತವ್ಯದಲ್ಲಿದ್ದಾರೆ . 1010 ಹಂಗಾಮಿ ನೌಕರರಿದ್ದಾರೆ . ಒಟ್ಟೂ 30,528 ಹುದ್ದೆಗಳು ಖಾಲಿ ಇವೆ , ಸಾರ್ವಜನಿಕರ ಆರೋಗ್ಯ ಕಾಪಾಡುವಲ್ಲಿ ಶ್ರಮಿಸುತ್ತಿರುವ ಇಲಾಖೆಯಲ್ಲಿ ಇಷ್ಟೊಂದು ಹುದ್ದೆ ಖಾಲಿ ಇದ್ದರೂ ಇರುವ ಸಿಬ್ಬಂದಿಗಳೇ ಕೊರೋನಾದಂಥ ಭೀಕರ ಕಾಯಿಲೆ ಸಂದರ್ಭದಲ್ಲಿ ಹಗಲಿರುಳೂ ಕರ್ತವ್ಯ ನಿರ್ವಹಿಸಿದ್ದಾರೆ . ಬಹುತೇಕ ಶೇ . 50 ರಷ್ಟು ಖಾಲಿ ಇರುವ ಹುದ್ದೆಯನ್ನು ಸರ್ಕಾರ ಕೂಡಲೇ ಭರ್ತಿ ಮಾಡಬೇಕು . ಇದಕ್ಕೆ ಆರ್ಥಿಕ ಸಂಕಷ್ಟ ಎಂಬುದು ಅಡ್ಡಿಯಾಗಬಾರದು . ಕಾಲಕಾಲಕ್ಕೆ ನಿರ್ದೇಶನಾಲಯದಿಂದ ಪದೋನ್ನತಿ ಅಥವಾ ಇನ್ಯಾವುದೇ ನೌಕರರಿಗೆ ಸಂಬಂಧಿಸಿದ ಮಾಹಿತಿಗಳು ಮತ್ತು ಆದೇಶಗಳು ವೆಬ್‌ಸೈಟ್‌ಗಳಲ್ಲಿ ಮಾತ್ರ ಪ್ರಚುರಪಡಿಸುತ್ತಿದ್ದು ಸಂಬಂಧಪಟ್ಟ ಜಿಲ್ಲೆಗಳ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ತಮ್ಮ ಅಧೀನದ ಆರೋಗ್ಯ ಸಂಸ್ಥೆಗಳಿಗೆ ಮಾಹಿತಿಯನ್ನು ದೃಢೀಕರಿಸಿ ನೌಕರರ ಗಮನಕ್ಕೆ ತಂದು ಸಹಿ ಮಾಡುವಂತೆ ಪ್ರಚುರಪಡಿಸಲು ಒತ್ತಾಯಪಡಿಸುವುದು , ರಾಜ್ಯಾದ್ಯಂತ ಇರುವ ಸರ್ಕಾರಿ ವೈದ್ಯಕೀಯ ವಿಜ್ಞಾನಗಳ ಬೋಧನಾ ಸಂಸ್ಥೆಗೆ ಹೊಂದಿಕೊಂಡಿರುವಂತಹ ಆಸ್ಪತ್ರೆಗಳಲ್ಲಿ ಕೆಲಸ ನಿರ್ವಹಿಸುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಖಾಯಂ , ಒಳಗುತ್ತಿಗೆ , ಹೊರಗುತ್ತಿಗೆಯ ನೌಕರರು ಮತ್ತು ನೌಕರರ ಅವಲಂಬಿತರಿಗೆ ಪೂರ್ಣ ಪ್ರಮಾಣದ ಚಿಕಿತ್ಸೆಗೆ ಸಂಬಂಧಪಟ್ಟ ಪರೀಕ್ಷೆಗಳನ್ನು ಉಚಿತವಾಗಿ ಒದಗಿಸಿಕೊಡಲು ಮನವಿ ಮಾಡುವುದು , ಆರೋಗ್ಯ ಇಲಾಖೆ ನೌಕರರ ರಾಜ್ಯಸಮ್ಮೇಳನ : ಆರೋಗ್ಯ ಇಲಾಖೆ ನೌಕರರ ರಾಜ್ಯ ಸಮ್ಮೇಳನ ಸಂಘಟನೆಯನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಬರುವ ಮಾರ್ಚ್ ಹೊತ್ತಿಗೆ ಆರೋಗ್ಯ ಇಲಾಖೆಯ ನೌಕರರ ಸಂಘಟನೆಯ ಸದಸ್ಯರನ್ನೊಳಗೊಂಡಂತೆ ವಿಶೇಷವಾದ ರಾಜ್ಯ ಸಮ್ಮೇಳನವನ್ನು ಆಯೋಜಿಸಬೇಕು ಎಂಬ ಚಿಂತನೆಯಲ್ಲಿದೆ . ಈ ಸಂದರ್ಭದಲ್ಲಿ ಸಂಘವನ್ನು ಮುನ್ನಡೆಸುವ ನಿಟ್ಟಿನಲ್ಲಿ ಹೆಚ್ಚು ದೃಢವಾದ ತೀರ್ಮಾನಗಳನ್ನು ತೆಗೆದುಕೊಳ್ಳಲಾಗುವುದು . ಈ ವೇಳೆ ಸಂಘಟನೆಯ ಬೈಲಾ ತಿದ್ದುಪಡಿಗೆ ಈಗಾಗಲೇ ಸಹಾಯಕ ಆಡಳಿತಾಧಿಕಾರಿಗಳಾದ ಶ್ರೀ ಪ್ರಕಾಶ್ ಗಿಡ್ಡಿ ಹಾಗೂ ಪುರುಷೋತ್ತಮ್ ಇವರ ಸಂಚಾಲಕತ್ವದಲ್ಲಿ ಸಮಿತಿಯನ್ನು ರಚಿಸಲಾಗಿದ್ದು , ಈ ಸಮಿತಿ ಕರಡು ಪ್ರತಿಯನ್ನು ಕೇಂದ್ರ ಸಂಘಕ್ಕೆ ಸಲ್ಲಿಸಲಾಗಿದ್ದು , ಶೀಘ್ರದಲ್ಲಿ ಕೇಂದ್ರ ಸಮಿತಿ ಸಭೆ ಸೇರಿ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು . ಆರೋಗ್ಯ ಇಲಾಖೆ ನೌಕರರ ದಿನಾಚರಣೆಯ ಘೋಷಣೆ ; ಕೋವಿಡ್ -19 ಅಲ್ಲದೆ ಆರೋಗ್ಯ ಇಲಾಖೆ ನೌಕರರು ಅತಿ ಹೆಚ್ಚಿನ ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ . ಈ ವರ್ಗದ ನೌಕರರಿಗೆ ಮಾನಸಿಕ ದೈಹಿಕ ಮನಶ್ವೇತನ ಒದಗಿಸುವ ನಿಟ್ಟಿನಲ್ಲಿ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳನ್ನು ಸರ್ಕಾರ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ನೌಕರರ ದಿನಾಚರಣೆಯನ್ನು ವರ್ಷಕ್ಕೊಮ್ಮೆ ನಡೆಸಲು ಕಾರ್ಯಕ್ರಮ ಘೋಷಿಸಲು ಒತ್ತಾಯಿಸಲಾಗುವುದು . ಪೊಲೀಸ್ ಇಲಾಖೆ ಸೇರಿದಂತೆ ಹಲವು ಇಲಾಖೆಗಳು ಇಂತಹ ದಿನಾಚರಣೆಯನ್ನು ಈಗಾಗಲೇ ಆಚರಿಸುತ್ತಿವೆ . ಆರೋಗ್ಯ ಇಲಾಖೆ ನೌಕರರ ಸಂಘ ಕೂಡ ತನ್ನ ನೆಲೆಯಲ್ಲಿ ಇಂತಹ ಚಟುವಟಿಕೆ ನಡೆಸುತ್ತಿದೆ . ಆದರೆ ಅದಕ್ಕೊಂದು ಅಧಿಕೃತತೆ ಬರಲು ಸರ್ಕಾರದಿಂದಲೇ ಘೋಷಣೆಯಾಗಬೇಕು , ಆ ನಿಟ್ಟಿನಲ್ಲಿ ಅಗತ್ಯ ಕ್ರಮಕ್ಕಾಗಿ ಸರ್ಕಾರದೊಂದಿಗೆ ಸಂಪರ್ಕ ಇಟ್ಟುಕೊಂಡು ಕಾರ್ಯಸಾಧನೆ ಮಾಡಲಾಗುವುದು . ಆರೋಗ್ಯ ಇಲಾಖೆ ತಾರತಮ್ಯ ಆಗದಿರುವಂತೆ ಕ್ರಮ : ಹುದ್ದೆಗಳಲ್ಲಿ ಭಿನ್ನತೆ ಇದ್ದರೂ ಆರೋಗ್ಯ ಇಲಾಖೆಯ ಎಲ್ಲಾ ನೌಕರರು ಕೂಡ ಸೇವಾ ವಿಷಯದಲ್ಲಿ ಒಂದೇ ರೀತಿಯ ಸಮರ್ಪಣಾ ಭಾವದಿಂದ ಕೆಲಸ ಮಾಡಬೇಕಾಗುತ್ತದೆ . ಇದು ಈಗಿನ ಕೊರೋನಾ ಕಾಲದ ದಿನದಲ್ಲಿ ಅದು ಇನ್ನಷ್ಟು ಹೆಚ್ಚು ಸ್ಪಷ್ಟವಾಗಿ ರುಜುವಾತಾಗಿದೆ . ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡುವ ವೈದ್ಯರಿಗೆ ಹಾಗೂ ಇತರ ಸಿಬ್ಬಂದಿಗೆ ಉತ್ತೇಜನಕಾರಿಯಾದ ಕೊಡುಗೆ ಸೌಲಭ್ಯ ಕೊಡುವಾಗ ಯಾವುದೇ ತಾರತಮ್ಯ ಉಂಟಾಗದಂತೆ ನೋಡಿಕೊಳ್ಳಬೇಕು . ಈ ನಿಟ್ಟಿನಲ್ಲಿ ವ್ಯತ್ಯಯವಾಗದಂತೆ ಸರ್ಕಾರಿ ಆದೇಶಗಳು ಕೆಲಸವನ್ನು ಆರೋಗ್ಯ ಇಲಾಖೆ ನೌಕರರ ಸಂಘದಿಂದ ಮೇಲಧಿಕಾರಿಗಳಿಗೆ ಮನವಿ ಮಾಡಲಾಗುತ್ತದೆ . ನಿವೃತ್ತರ ಸೇವಾ ದಾಖಲೆ ಸಲ್ಲಿಕೆಗೆ ಸಹಾಯ : ದಶಕಗಳ ಕಾಲ ರೋಗಿಗಳ ಸೇವೆ ಮಾಡಿ ನಿವೃತ್ತರಾಗುವ ಆರೋಗ್ಯ ಇಲಾಖೆಯ ನೌಕರರು ಅನಂತರ ಪಿಂಚಣಿ , ಪಿ.ಎಫ್ , ಪಾವತಿ ಪಡೆಯಲು ಸರ್ಕಾರಕ್ಕೆ ಸಲ್ಲಿಸಬೇಕಾದ ಸೇವಾ ದಾಖಲೆಗಳ ವಿಚಾರದಲ್ಲಿ ಅತಿ ಹೆಚ್ಚಿನ ಸಮಸ್ಯೆಗಳನ್ನು ಅನುಭವಿಸುವುದು ಸಂಘದ ಗಮನಕ್ಕೆ ಬಂದಿದೆ . ಅವರು ನೆಮ್ಮದಿಯಿಂದ ದಾಖಲೆಗಳನ್ನು ಸಲ್ಲಿಸಲು ಪೂರಕವಾದ ವಾತಾವರಣವನ್ನು ನಿರ್ಮಿಸುವ ಕೆಲಸವನ್ನು

ಆರೋಗ್ಯ ಇಲಾಖೆ ನೌಕರರ ಸಂಘ ಮಾಡಲಿದೆ . ಇದೇ ರೀತಿ ಅನುಕಂಪದ ನೇಮಕಾತಿಂರುಲ್ಲಿನ ವಿಳಂಬ , ಹೆಚ್ಚುವರಿ ವೇತನ ಮುಂಬಡ್ತಿಗಳ ಮಂಜೂರಾತಿ , ಗಳಿಕೆ ರಜೆ ನಗದೀಕರಣ ಮೊದಲಾದ ಆಡಳಿತಾತ್ಮಕ ಸಮಸ್ಯೆಗಳನ್ನು ಬಗೆಹರಿಸಲು ವಿಶೇಷ ಗಮನ ಹರಿಸಲಾಗುವುದು . ಅದಕ್ಕೆ ಅಗತ್ಯವಾದ ಸಹಾಯವಾಣಿ ವ್ಯವಸ್ಥೆ ಕೂಡ ಸಂಘದ ಮೂಲಕ ಮಾಡಲು ಪ್ರಯತ್ನ ಮಾಡಲಾಗುವುದು , ಸಮರ್ಪಕ ವೇತನ ಪಾವತಿಗೆ ಒತ್ತಾಯ ; ರಾಜ್ಯದಾದ್ಯಂತ ಇರುವ ಆರೋಗ್ಯ ಇಲಾಖೆಯ ನೌಕರರಿಗೆ ಪ್ರತಿ ತಿಂಗಳು ಮೊದಲ ದಿನಾಂಕದಂದು ಸಮಯಕ್ಕೆ ಸರಿಯಾಗಿ ವೇತನ ಪಾವತಿ ಆಗುವಂತೆ ಕ್ರಮ ಕೈಗೊಳ್ಳಲು ಒತ್ತಾಯ ಮಾಡಲಾಗುತ್ತದೆ . ಖಾಲಿ ಹುದ್ದೆ ಭರ್ತಿಗೆ ಆಗ್ರಹ ; ಆರೋಗ್ಯ ಇಲಾಖೆಯಲ್ಲಿ ಶೇಕಡಾ ನಲವತ್ತಕ್ಕಿಂತ ಹೆಚ್ಚು ಹುದ್ದೆಗಳು ಖಾಲಿ ಇರುವ ಹಿನ್ನೆಲೆಯಲ್ಲಿ ಆಸ್ಪತ್ರೆಗಳ ಮಂಜೂರಾದ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರವನ್ನು ಆಗ್ರಹಿಸಲಾಗುವುದು , ಪ್ರಯೋಗಶಾಲಾ ತಂತ್ರಜ್ಞರು , ಕ್ಷ – ಕಿರಣ ತಂತ್ರಜ್ಞರು . ಫಾರ್ಮಾಸಿಸ್ಟ್ , ಇ.ಸಿ.ಜಿ. ಟೆಕ್ನಿಷಿಯನ್ ಮತ್ತು ಶುಕ್ರೂಷಾಧಿಕಾರಿಗಳು , ಎಲ್ಲಾ ಆಸ್ಪತ್ರೆಗಳಲ್ಲಿಯೂ ಗುತ್ತಿಗೆ ಆಧಾರದ ಮೇಲೆ ಆಯಾ ಹುದ್ದೆಗಳ ಮೂಲ ವೇತನವನ್ನು ಸಂಚಿತ ವೇತನವನ್ನಾಗಿ ಪಾವತಿಸಲು ಸಂಘವು ಒತ್ತಾಯ ಮಾಡುತ್ತಿದೆ . 13 , ಹೊರಗುತ್ತಿಗೆ ನೌಕರರ ಖಾಯಂಗೆ ಬೇಡಿಕೆ : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ವೃಂದಗಳ ನೌಕರರ ಗುತ್ತಿಗೆ , ಹೊರಗುತ್ತಿಗೆ ಮತ್ತು ಇತರೆ ಯಾವುದೇ ಮೂಲಗಳಿದ್ದರೂ ಸಮಾನ ಕೆಲಸಕ್ಕೆ ಸಮಾನ ವೇತನ ಎಂಬ ಸಿದ್ಧಾಂತದ ಅಡಿಯಲ್ಲಿ ಅಂತಹ ನೌಕರರಿಗೆ ಕಾಯಂ ನೌಕರರ ಮೂಲ ವೇತನವನ್ನು ನೀಡುವಂತೆ ಸರ್ಕಾರದ ಗಮನ ಸೆಳೆಯುವುದು , ಕೇಂದ್ರ ಸಂಘಕ್ಕೆ ಕಛೇರಿ ಹಾಗೂ ಸಭಾಂಗಣವನ್ನು ಒದಗಿಸುವ ಬಗ್ಗೆ ಮನವಿ : ಬೆಂಗಳೂರಿನಲ್ಲಿ ಇರುವ ಆರೋಗ್ಯ ಇಲಾಖೆಯ ಕೇಂದ್ರ ಕಛೇರಿ ಆರೋಗ್ಯ ಸೌಧದಲ್ಲಿ ಆರೋಗ್ಯ ಇಲಾಖೆಯ ನೌಕರರ ಕೇಂದ್ರ ಸಂಘಕ್ಕೆ ಕಛೇರಿ ಹಾಗೂ ಸಭಾಂಗಣವನ್ನು ಒದಗಿಸುವ ಬಗ್ಗೆ ತಕ್ಷಣ ಸಂಬಂಧಪಟ್ಟ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಈಗಾಗಲೇ ಮನವಿ ಮಾಡಿ ಕ್ರಮ ಕೈಗೊಳ್ಳಲಾಗಿದೆ . 15 . ಮಾನ್ಯ ಆರೋಗ್ಯ ಸಚಿವರ ಭೇಟಿ : ಸಮಸ್ತ ಸರ್ಕಾರಿ ನೌಕರರಿಗೆ ಮಾತೃ ಸಂಸ್ಥೆಯಾದ ರಾಜ್ಯ ಸರ್ಕಾರಿ ನೌಕರರ ಸಂಘದ ಕ್ರಿಯಾಶೀಲ ಅಧ್ಯಕ್ಷರಾದ ಸಿ.ಎಸ್.ಷಡಕ್ಷರಿಯವರನ್ನು ಭೇಟಿ ಮಾಡಿ ಒಟ್ಟು ನಮ್ಮ ನೌಕರರ ಬೇಡಿಕೆಗಳ ಬಗ್ಗೆ ಮನವಿ ಸಲ್ಲಿಸಲಾಗಿದ್ದು , ಅವರ ನೇತೃತ್ವದಲ್ಲಿ ಆರೋಗ್ಯ ಸಚಿವರಾದ ಡಾ.ಕೆ. ಸುಧಾಕರ್‌ರವರನ್ನು ಭೇಟಿ ಮಾಡಿದ್ದು , ಅವರು ನಮ್ಮ ಬೇಡಿಕೆಗಳ ಬಗ್ಗೆ ಶೀಘ್ರದಲ್ಲಿಯ ಪದಾಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ಭರವಸೆ ನೀಡಿದ್ದು , ಹಾಗೂ ಈ ಬಗ್ಗೆ ನಮ್ಮ ಬೇಡಿಕೆಗಳ ಕುರಿತು ಉನ್ನತ ಅಧಿಕಾರಿಗಳಿಗೆ ಸಮಗ್ರ ವರದಿ ತಯಾರು ಮಾಡುವಂತೆ ಸೂಚಿಸಿರುತ್ತಾರೆ . 16 . . ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆಯು ಅತ್ಯಂತ ಆವೈಜ್ಞಾನಿಕ ಮತ್ತು ಅಪ್ರಸ್ತುತ . ಆರೋಗ್ಯ ಇಲಾಖೆಯಲ್ಲಿ ಕ್ಷೇತ್ರ ಸಿಬ್ಬಂದಿಗಳು ಇಲಾಖೆಗೆ ಮುಖ್ಯ ಆಧಾರಸ್ತಂಭವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ . ಆದರೆ ಇವರಿಗೆ ಬಯೋಮೆಟ್ರಿಕ್ ಹಾಜರಾತಿ ಕಡ್ಡಾಯಗೊಳಿಸಿದಲ್ಲಿ ಹಲವಾರು ತೊಂದರೆಗಳು ಎದುರಾಗುತ್ತವೆ . ಆರೋಗ್ಯ ಇಲಾಖೆಯ ಅಧಿಕಾರಿಗಳು ಮತ್ತು ತಾಂತ್ರಿಕ ಸಿಬ್ಬಂದಿಗಳು ಸೇರಿದಂತೆ ಪ್ರಾಥಮಿಕ ಆರೋಗ್ಯ ಕೇಂದ್ರ , ಸಮುದಾಯ ಆರೋಗ್ಯ ಕೇಂದ್ರ , ತಾಲ್ಲೂಕು ಆಸ್ಪತ್ರೆ ಮತ್ತು ಜಿಲ್ಲ ಆಸ್ಪತ್ರೆಗಳಲ್ಲಿ ದಿನದ 24 ಗಂಟೆಯೂ ಹಗಲು – ರಾತ್ರಿ ಎನ್ನದೇ ಕೆಲಸ ನಿರ್ವಹಿಸಬೇಕಾಗುತ್ತದೆ . ಅತ್ಯಂತ ತುರ್ತು ಸಂದರ್ಭಗಳಾದ ರಸ್ತೆ ಅಪಘಾತಗಳು , ಹೆರಿಗೆ , ಹಾವು ಕಚ್ಚಿದ ಸಂದರ್ಭ ಮತ್ತು ವಿಷ ಕುಡಿದಂಥ ರೋಗಿಗಳ ಚಿಕಿತ್ಸೆ ಮಾಡಲು ತಮ್ಮ ಕರ್ತವ್ಯ ಪಾಳಿಯನ್ನು ಮುಗಿಸಿಕೊಂಡು ಹೋದ ಅಧಿಕಾರಿ ಸಿಬ್ಬಂದಿಗಳು ಪದೇ ಪದೇ ಮರಳಿ ಮೇಲ್ಕಂಡ ಆರೋಗ್ಯ ಕೇಂದ್ರಗಳಿಗೆ ಬಂದು ತುರ್ತು ಚಿಕಿತ್ಸೆ ನೀಡಬೇಕಾಗುತ್ತದೆ , ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಹಾಜರಾತಿಗಾಗಿ ಕೆಲಸ ಮಾಡದೇ ಸಾರ್ವಜನಿಕ ಸೇವೆಗಾಗಿ ಕೆಲಸ ಮಾಡುವವರು . ಹಾಗಾಗಿ ಈ ಬಯೋಮೆಟ್ರಿಕ್ ವ್ಯವಸ್ಥೆಯು ಸಿಬ್ಬಂದಿಗಳಲ್ಲಿ ಕರ್ತವ್ಯ ಕೊರತೆ ಮತ್ತು ಶ್ರದ್ಧೆ ಕಡಿಮೆಯಾಗಿ ಸಾರ್ವಜನಿಕರಿಗೆ ತೊಂದರೆಯೂ ಆಗಬಹುದು . ಕೆಲವು ಆರೋಗ್ಯ ಸಮಸ್ಯೆಗಳಲ್ಲಿ ಅತ್ಯಂತ ಕಡಿಮೆ ಪ್ರಮಾಣದ ಆರೋಗ್ಯ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದು , ದಿನದ 24 ಗಂಟೆಯೂ ದುಡಿಯುವುದು ಅನಿವಾರ್ಯವಾಗಿದೆ . ಹಾಗಾಗಿ ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆಯು ಅತ್ಯಂತ ಅವೈಜ್ಞಾನಿಕ ಮತ್ತು ಅಪ್ರಸ್ತುತ ಎಂದು ಹೇಳಿದರು.
ಎಸ್ , ರಮೇಶ ಸಂಚಾಲಕರು ಮತ್ತು ಜಂಟಿ ಕಾರ್ಯದರ್ಶಿ ಜಂಟಿ ಕಾರ್ಯದರ್ಶಿ ವಿಭಾಗೀಯ ಸಂಘಟನಾ ಕಾರ್ಯದರ್ಶಿ ವೈ ಮೋಹನ್ , ನಾಗರಾಜ್ .ಆರ್ , ಜುಮನ್ನವರ್ ಅಧ್ಯಕ್ಷರು ಕ . ರಾ . ಸ . ನೌಕರರ ಸಂಘ ಜಿಲ್ಲಾ ಘಟಕ ಕೊಪ್ಪಳ ಸೇರಿದಂತೆ ಇತರರು ಉಪಸ್ಥಿತರಿದ್ದರು.

Please follow and like us:
error