ಆಯೋಗದ ಮಾರ್ಗಸೂಚಿಯನ್ವಯ ಮತದಾನ ಮುಕ್ತಾಯದ ಮುಂಚಿನ 48 ಗಂಟೆಗಳ ಅವಧಿಯಲ್ಲಿ ಪಾಲನೆ ಮಾಡಬೇಕಾದ ಅಂಶಗಳ ಸಂಕ್ಷಿಪ್ತ ಅಂಶಗಳು

;
ವಿದ್ಯುನ್ಮಾನ ಮಾದ್ಯಮಗಳಿಗೆ (ಸಾಮಾಜಿಕ ಮಾಧ್ಯಮಗಳಿಗೆ ಒಳಗೊಂಡಂತೆ) ಮಾರ್ಗಸೂಚಿಗಳು;
ಪ್ರಜಾಪ್ರತಿನಿಧಿ ಕಾಯ್ದೆ ಸೆಕ್ಷನ್ 126ರ ಅಡಿಯಲ್ಲಿ ಯಾವುದೇ ಚುನಾವಣೆ ವಿಚಾರವನ್ನು ದೂರದರ್ಶನ, ಸಿನಿಮಾ ಮಾಧ್ಯಮ ಅಥವಾ 48 ಗಂಟೆಗಳ ಕಾಲಾವಧಿಯಲ್ಲಿ ಪ್ರದರ್ಶಿಸಲು ನಿಷೇಧಿಸಲಾಗಿದೆ. ಚುನಾವಣೆ ವಿಚಾರ ಅಭಿವ್ಯಕ್ತಿಯೆಂದರೆ ಯಾವುದೇ ವಿಚಾರ ಚುನಾವಣಾ ಫಲಿತಾಂಶ ಮೇಲೆ ಪ್ರಭಾವ ಭೀರತಕ್ಕದ್ದು. ಯಾವುದೇ ವ್ಯಕ್ತಿ ಈ ನಿಯಮವನ್ನು ಉಲ್ಲಂಘಿಸಿದ್ದಲ್ಲಿ ಎರಡು ವರ್ಷಗಳಿಗೆ ಕಾರಾಗೃಹ ಶಿಕ್ಷೆ ಅಥವಾ ದಂಡ ಅಥವಾ ಈ ಎರಡು ಶಿಕ್ಷೆಗಳಿಗೆ ಅರ್ಹನಾಗುವನು. ಹಾಗಾಗಿ ಎಲ್ಲಾ ಮಾಧ್ಯಮಗಳಾದ ದೂರದರ್ಶನ, ರೇಡಿಯೋ, ಕೇಬಲ್ ನೆಟ್‍ವರ್ಕ್‍ಗಳು ಚುನಾವಣಾ ಮುಕ್ತಾಯ ಸಮಯದ 48 ಗಂಟೆಗಳ ಕಾಲಾವಧಿಯಲ್ಲಿ ಯಾವುದೇ ಕಾರ್ಯಕ್ರಮಗಳಲ್ಲಿ ಪ್ಯಾನಲ್‍ಲಿಸ್ಟ್ ಹಾಗೂ ಭಾಗವಹಿಸುವವರ ದೃಷ್ಟಿಕೋನ ಅಥವಾ ಮನವಿ ಮಾಡುವ ವಿಚಾರಗಳು ಇರದಂತೆ ಹಾಗೂ ಯಾವುದೇ ವ್ಯಕ್ತಿಯ ರಾಜಕೀಯ ಪಕ್ಷದ ಪರವಾಗಿ ಪ್ರಚಾರ ಹಾಗೂ ಚುನಾವಣೆ ಫಲಿತಾಂಶದ ಮೇಲೆ ಪ್ರಭಾವ ಭೀರದಂತೆ ಖಚಿತ ಪಡಿಸಿಕೊಳ್ಳತಕ್ಕದ್ದು. ಈ ವಿಷಯಗಳಲ್ಲಿ ಅಭಿಪ್ರಾಯದ ಸಮೀಕ್ಷೆ, ಚರ್ಚೆಗಳು, ವಿಶ್ಲೇಷಣೆ, ದೃಶ್ಯ ಹಾಗೂ ಧ್ವನಿ ಬೈಟ್‍ಗಳನ್ನು ಒಳಗೊಂಡಿರುತ್ತವೆ.
ನಿರ್ಗಮನ ಸಮೀಕ್ಷೆ ಹಾಗೂ ಅಭಿಪ್ರಾಯದ ಸಮೀಕ್ಷೆ;
ಪ್ರಜಾಪ್ರತಿನಿಧಿ ಕಾಯ್ದೆ 1951 ರ ಸೆಕ್ಷನ್ 126 ಎ ಅನ್ವಯ ನಿರ್ಗಮನ ಸಮೀಕ್ಷೆ ಹಾಗೂ ಅದರ ಫಲಿತಾಂಶದ ಪ್ರಸರಣವನ್ನು ಯಾವುದೇ ರೀತಿಯಲ್ಲಿ ದಿನಾಂಕ ಏಪ್ರಿಲ್. 11 ರ ಬೆಳಿಗ್ಗೆ 07 ಗಂಟೆಯಿಂದ ಮೇ. 19ರ ಸಂಜೆ 6-30 ರವರೆಗೆ ನಿಷೇಧಿಸಲಾಗಿದೆ. ಹಾಗೆಯೇ ಪ್ರಜಾಪ್ರತಿನಿಧಿ ಕಾಯ್ದೆ ಸೆಕ್ಷನ್ 126(1) ಬಿ ರ ಅನ್ವಯ ಚುನಾವಣಾ ಸಮಾಪ್ತಿಯ 48 ಗಂಟೆಗಳ ಕಾಲಾವಧಿಯಲ್ಲಿ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಅಭಿಪ್ರಾಯ ಸಮೀಕ್ಷೆ, ಮತದಾನ ಸಮೀಕ್ಷೆ, ಫಲಿತಾಂಶ ಅಥವಾ ಯಾವುದೇ ಚುನಾವಣಾ ವಿಚಾರಗಳನ್ನು ಪ್ರದರ್ಶಿಸಲು ಸಂಬಂದಿತ ಮತದಾನ ಸ್ಥಳಗಳಲ್ಲಿ ನಿಷೇಧಿಸಲಾಗಿದೆ.
ಬಹುಹಂತ ಚುನಾವಣೆ;
ಏಪ್ರಿಲ್. 23 ರಂದು 14 ಚುನಾವಣಾ ಕ್ಷೇತ್ರಗಳಲ್ಲಿ ಬಹುಹಂತ ಚುನಾವಣೆಗಳಲ್ಲಿ 48 ಗಂಟೆಗಳ ನಿಶ್ಯಬ್ಧ ಕಾಲಾವಧಿಯಲ್ಲಿ ಕ್ಷೇತ್ರಗಳ ಮೇಲೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಸ್ಟಾರ್ ಪ್ರಚಾರಕರು ಅಭ್ಯರ್ಥಿಗಳಿಗೆ ಹಾಗೂ ಪಕ್ಷಗಳಿಗೆ ಬೆಂಬಲ ಕೋರುವಂತಿಲ್ಲ. ನಿಶಬ್ಧ ಕಾಲಾವಧಿಯಲ್ಲಿ ಸ್ಟಾರ್ ಪ್ರಚಾರಕರು ಮತ್ತು ರಾಜಕೀಯ ನಾಯಕರು ಚುನಾವಣಾ ವಿಚಾರ ಸಂಬಂದಿತ ಸಂದರ್ಶನ ಹಾಗೂ ಪತ್ರಿಕಾಗೋಷ್ಟಿಗಳಿಂದ ದೂರವಿರಬೇಕು.
ಲೋಕಸಭೆ ಸಾರ್ವತ್ರಿಕ ಚುನಾವಣೆಯ ವೇಳಾಪಟ್ಟಿಯನ್ನು 10-03-2019 ರಂದು ಪ್ರಕಟಿಸಲಾಗಿದೆ. ಕರ್ನಾಟಕದಲ್ಲಿ ಚುನಾವಣೆ ಎರಡು ಹಂತಗಳಲ್ಲಿ 18-04-2019 ಮತ್ತು 23-04-2019 ರಂದು ನಡೆಯುವುದು. ಹಾಗಾಗಿ ಎಲ್ಲಾ ವಿದ್ಯುನ್ಮಾನ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮಗಳು ಈ ಮಾರ್ಗಸೂಚಿಗಳನ್ನು ಚಾಚೂ ತಪ್ಪದೇ ಏಪ್ರಿಲ್. 21 ರ ಸಂಜೆ 06 ರಿಂದ ಏಪ್ರಿಲ್. 23 ಸಂಜೆ 06-30 ರವರೆಗೆ ಪಾಲಿಸಬೇಕು.
ಚುನಾವಣಾ ಆಯೋಗವು ವಿವಿಧ ಮಾಧ್ಯಮಗಳಾದ ಮುದ್ರಣ, ದೂರದರ್ಶನ, ರೇಡಿಯೋ, ಕೇಬಲ್ ನೆಟ್‍ವರ್ಕ್, ಅಂತರ್‍ಜಾಲ ಹಾಗೂ ಸಮೂಹ ಮಾಧ್ಯಮಗಳಿಗೆ ಪ್ರಜಾಪ್ರತಿನಿಧಿ ಕಾಯ್ದೆ 126ರ ಅನ್ವಯ ಮಾಡಬೇಕಾದ ಮತ್ತು ಮಾಡಬಾರದಂತ ವಿಷಯಗಳ ಬಗ್ಗೆ ಸೂಚನೆಗಳನ್ನು ನೀಡಿ 48 ಗಂಟೆಗಳ ಕಾಲವನ್ನು ನಿಶಬ್ಧ ಅವಧಿಯೆಂದು ಪರಿಗಣಿಸಲಾಗಿದೆ. ಈ ಸಂಬಂದಿತ ನಿರ್ದೇಶಗಳ ಸಾರಾಂಶವನ್ನು ನೀಡಲಾಗಿದೆ.
ಮುದ್ರಣ ಮಾಧ್ಯಮಕ್ಕೆ ಮಾರ್ಗಸೂಚಿಗಳು;
ಯಾವುದೇ ರಾಜಕೀಯ ಪಕ್ಷ, ಅಭ್ಯರ್ಥಿ, ಸಂಸ್ಥೆ ಅಥವಾ ವ್ಯಕ್ತಿ ಮುದ್ರಣ ಮಾಧ್ಯಮದಲ್ಲಿ ಚುನಾವಣಾ ದಿನಾಂಕದಂದು ಅಥವಾ ಒಂದು ದಿನದ ಮುಂಚಿತವಾಗಿ ಜಾಹೀರಾತು ನೀಡಲು ಇಚ್ಛೀಸಿದ್ದಲ್ಲಿ ರಾಜ್ಯ ಮಟ್ಟದ ಅಥವಾ ಜಿಲ್ಲಾ ಮಟ್ಟಕ್ಕೆ ಅನ್ವಯಿಸುವಂತೆ ಎಂಸಿಎಂಸಿ ಸಮಿತಿಯಿಂದ ಪೂರ್ವ ಪ್ರಮಾಣೀಕರಣ ಹೊಂದಬೇಕು.
ಯಾವುದೇ ರಾಜಕೀಯ ಜಾಹೀರಾತು ಏಪ್ರಿಲ್ 22 ಮತ್ತು 23 ಕ್ಕೆ ಮುದ್ರಣ ಮಾಧ್ಯಮದಲ್ಲಿ ಪರಿಚಲನೆಯಾಗುವಂತಹ ಜಾಹೀರಾತುಗಳು ರಾಜ್ಯದ ಅಥವಾ ಜಿಲ್ಲಾ ಮಟ್ಟಕ್ಕೆ ಅನ್ವಯವಾಗುವಂತೆ ಎಂಸಿಎಂಸಿ ಸಮಿತಿಯಿಂದ ಪೂರ್ವ ಪ್ರಮಾಣೀಕರಣ ಹೊಂದಬೇಕು.
ಯಾವುದೇ ಅಬ್ಯರ್ಥಿಯು ರಾಜಕೀಯ ಜಾಹೀರಾತುಗಳನ್ನು ಮುದ್ರಣ ಮಾಧ್ಯಮದಲ್ಲಿ ಚುನಾವಣಾ ದಿನದಂದು ಅಥವಾ ಒಂದು ದಿನ ಮುಂಚಿತವಾಗಿ ಪ್ರಕಟಿಸಲು ಇಚ್ಛಿಸಿದ್ದಲ್ಲಿ ಪ್ರಸ್ತಾಪಿತ ಜಾಹೀರಾತಿನ ಎರಡು ಸ್ವಯಂ ದೃಢೀಕೃತ ಪ್ರತಿಗಳನ್ನು ತಕ್ಕಂತೆ ತುಂಬಿ ಅರ್ಜಿಯೊಂದಿಗೆ ಸೂಚಿಸಿದ ಅನುಬಂಧ-ಸಿ ಸ್ವರೂಪದಲ್ಲಿ ಏಪ್ರಿಲ್. 20 ರೊಳಗಾಗಿ (22ಕ್ಕೆ ಮತ್ತು 23ಕ್ಕೆ ನೀಡುವ ಜಾಹೀರಾತುಗಳಿಗೆ) ಜಿಲ್ಲಾಧಿಕಾರಿಗಳ ಕಚೇರಿಯಲ್ಲಿರುವ ಎಂಸಿಎಂಸಿ ಸಮಿತಿಗೆ ಸಲ್ಲಿಸಬೇಕು.
ಯಾವುದೇ ಮುದ್ರಣ ಮಾಧ್ಯಮ (ಸ್ಥಳೀಯ, ಜಿಲ್ಲೆಯ, ರಾಜ್ಯದ ಅಥವಾ ರಾಷ್ಟ್ರದ) ಕರ್ನಾಟಕದಲ್ಲಿ ನಡೆಯುವ ಚುನಾವಣೆಯ ಬಗ್ಗೆ ರಾಜಕೀಯ ಜಾಹೀರಾತುಗಳನ್ನು ಸಂಬಂಧಿತ ಎಂಸಿಎಂಸಿ ಸಮಿತಿಯ ಪೂರ್ವ ಪ್ರಮಾಣಿಕರಣವಿಲ್ಲದೇ ಮುದ್ರಿಸುವಂತಿಲ್ಲ.

Please follow and like us:
error