ಆನೆಗೊಂದಿ ಬಳಿ ಭೋನಿಗೆ ಬಿತ್ತು ಮತ್ತೊಂದು ನರಭಕ್ಷಕ ಚಿರತೆ

ಗಂಗಾವತಿ :


ಆನೆಗೊಂದಿ ಭಾಗದಲ್ಲಿ ಮತ್ತೊಂದು ಚಿರತೆ ಸೆರೆಯಾಗಿದೆ. ಆತಂಕ ಹುಟ್ಟಿಸಿರುವ ನರಭಕ್ಷಕ ಚಿರತೆಗಳಿಂದಾಗಿ ಜನತೆ ಕಂಗಾಲಾಗಿದ್ದಾರೆ. ಈಗಾಗಲೇ ಎರಡು ಜೀವಗಳನ್ನು ಬಲಿಪಡೆದಿರುವ
ಚಿರತೆಗಳನ್ನು ಸೆರೆ ಹಿಡಿಯಲು 
ಅರಣ್ಯ ಇಲಾಖೆ ನಾನಾ ತಂತ್ರಗಳನ್ನು ಅನುಸರಿಸುತ್ತಿದೆ. ಈಗಾಗಲೇ ಆನೆಗಳನ್ನು ಕರೆತಂದು ಸೆರೆಹಿಡಿಯಲು ಯತ್ನಿಸಿ ವಿಫಲವಾಗಿದ್ದ ಅರಣ್ಯ ಇಲಾಖೆ ಸೆರೆಹಿಡಿಯಲು ಇಟ್ಟಿದ್ದ
ಭೋನಿನಲ್ಲಿ ಚಿರತೆ ಸಿಕ್ಕಿಬಿದ್ದಿದೆ.

ಗಂಗಾವತಿ ತಾಲ್ಲೂಕಿನ ಆನೆಗೊಂದಿ ಬಳಿ ವಾಲಿಕಿಲ್ಲಾ ಮ್ಯಾಗೋಟದ ಬಳಿ ಸೆರೆಹಿಡಿಯಲು ಇಟ್ಟಿದ್ದ ಬೋನಿಗೆ ಬಿದ್ದ ಚಿರತೆ ಸೆರೆಯಾಗಿದೆ. ಇನ್ನೂ ಸಾಕಷ್ಟು ಚಿರತೆಗಳು ಇರುವ ಆತಂಕವಿದ್ದು ಅವುಗಳನ್ನು ಶೀಘ್ರವೇ ಹಿಡಿಯುವಂತೆ ಜನ ಆಗ್ರಹಿಸಿದ್ದಾರೆ.

Please follow and like us:
error