ಆನೆಗೊಂದಿ ಪ್ರದೇಶದಲ್ಲಿ ಕಾಡು ಪ್ರಾಣಿಗಳ ಗೋಚರ : ಪ್ರವಾಸಿಗರೇ ಎಚ್ಚರ


ಕೊಪ್ಪಳ, : ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಆನೆಗೊಂದಿ ಪ್ರದೇಶದಲ್ಲಿ ಕಾಡು ಪ್ರಾನಿಗಳು ಗೋಚರಿಸುತ್ತಿರುವುದು ಕಂಡು ಬಂದಿದ್ದು, ಆನೆಗೊಂದಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ಭೇಟಿ ನೀಡುವ ಪ್ರವಾಸಿಗರು ಕಡ್ಡಾಯವಾಗಿ ಮುನ್ನೆಚ್ಚರಿಕೆಗಳನ್ನು ಪಾಲಿಸಲು ಹಾಗೂ ಎಚ್ಚರಿಕೆಯಿಂದಿರಲು ಸೂಚಿಸಿದೆ.
ಜಿಲ್ಲೆಯ ಆನೆಗೊಂದಿ ಪ್ರದೇಶದಲ್ಲಿ ಕಾಡು ಪಾಣಿಗಳು ಗೋಚರಿಸುತ್ತಿದ್ದು, ಚಿರತೆ ದಾಳಿಗೆ ಓರ್ವ ಯುವಕ ಬಲಿಯಾಗಿದ್ದು, ದನಕರಗಳನ್ನು ಸಹ ಬೇಟೆಯಾಡುತ್ತಿರುವುದರಿಂದ ಆನೆಗೊಂದಿ ಸುತ್ತಮುತ್ತಲಿನ ಖ್ಯಾತ ಪ್ರವಾಸಿ ತಾಣಗಳಾದ ಅಂಜನಾದ್ರಿ ಪರ್ವತ, ದುರ್ಗಾದೇವಿ ದೇವಸ್ಥಾನ, ಪಂಪಾಸರೋವರ, ಚಿಂತಾವನಿ, ಸಾಣಾಪುರ ಕೆರೆ ಹಾಗೂ ಇತರೆ ಸ್ಥಳಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಿರುವುದು ಗಮನಕ್ಕೆ ಬಂದಿರುತ್ತದೆ. ಈ ಸ್ಥಳಗಳ ಸುತ್ತಮುತ್ತಲಿನ ಗುಡ್ಡಗಾಡು ಪ್ರದೇಶಗಳು ಕಾಡು ಪ್ರಾಣಿಗಳು ಒಡಾಡುವ ಸ್ಥಳವಾಗಿದ್ದು, ಇತ್ತೀಚಿನ ದಿನಗಳಲ್ಲಿ ನಡೆದ ಘಟನೆಗಳ ಹಿನ್ನೆಲೆಯಲ್ಲಿ ಈ ಪ್ರದೇಶಗಳಿಗೆ ಭೇಟಿ ನೀಡುವ ಪ್ರವಾಸಿಗರು ಕಡ್ಡಾಯವಾಗಿ ಮುನ್ನೆಚ್ಚರಿಕೆಗಳನ್ನು ಪಾಲಿಸಲು ಹಾಗೂ ಎಚ್ಚರಿಕೆಯಿಂದಿರಲು ಸೂಚಿಸಿದೆ.
ಮುನ್ನೆಚ್ಚರಿಕಾ ಕ್ರಮಗಳು;
ಕಡ್ಡಾಯವಾಗಿ ಸಂಜೆ 05 ರೊಳಗಾಗಿ ಪ್ರವಾಸಿ ತಾಣಗಳ ಭೇಟಿಯನ್ನು ಮುಕ್ತಾಯಗೊಳಿಸುವುದು. ಸುತ್ತಮುತ್ತಲಿನ ಗುಡ್ಡಗಾಡು ಪ್ರದೇಶಗಳಲ್ಲಿ ತಿರುಗಾಡುವುದು, ಟ್ಯೆಕ್ಕಿಂಗ್, ಬೌಲ್ಡಿಂಗ್, ಹಿಕಿಂಗ್ ಚಟುವಟಿಕೆಗಳನ್ನು ಮಾಡಬಾರದು. ಸುತ್ತಮುತ್ತಲಿನ ಕೆರೆಗಳು ಹಾಗೂ ನದಿದಂಡೆಯಲ್ಲಿ ಈಜಾಡಬಾರದು, ಸ್ನಾನ ಮಾಡಬಾರದು ಮತ್ತು ನಿಗದಿತ ಶೌಚಾಲಯ ಹಾಗೂ ಸ್ನಾನದ ಗೃಹಗಳನ್ನು ಮಾತ್ರ ಉಪಯೋಗಿಸುವುದು. ರಾತ್ರಿಯ ಹೊತ್ತಿನಲ್ಲಿ ಕಡ್ಡಾಯವಾಗಿ ಹೋಟೆಲ್, ಲಾಡ್ಜ್, ಯಾತ್ರಿನಿವಾಸ ಹಾಗು ಇತರೆ ಸುರಕ್ಷಿತ ಸ್ಥಳಗಳಲ್ಲಿ ತಂಗುವ ವ್ಯವಸ್ಥೆ ಮಾಡುವುದು ಕಡ್ಡಾಯವಾಗಿ ಹೊರಗಡೆ ಪ್ರದೇಶಗಳಲ್ಲಿ ಕ್ಯಾಂಪಿAಗ್ ಮಡುವಮತಿಲ್ಲ. ನಿಗದಿತ ಪಾರ್ಕಿಂಗ್ ಪ್ರದೇಶದಲ್ಲಿ ಮಾತ್ರ ವಾಹನಗಳನ್ನು ನಿಲ್ಲಿಸುವುದು ಹಾಗೂ ರಸ್ತೆ ಬದಿಗಳಲ್ಲಿ ವಾಹನಗಳನ್ನು ನಿಲ್ಲಿಸುವಂತಿಲ್ಲ ಮತ್ತು ಅನವಶ್ಯಕವಾಗಿ ಬೆಳಿಗ್ಗೆ 08 ಗಂಟೆಗೆ ಒಳಗೆ ಹಾಗೂ ರಾತ್ರಿ ಸಂಚಾರವನ್ನು ಮಾಡಬಾರದು.

ವಾಹನ ಹಾಗೂ ಧ್ವನಿವರ್ದಕಗಳಿಂದ ಹೆಚ್ಚಿನ ಶಬ್ದವನ್ನು ಉಂಟು ಮಾಡಬಾರದು. ಊಟದ ಪದಾರ್ಥಗಳನ್ನು ರಸ್ತೆ ಬದಿಯಲ್ಲಿ ಬಿಸಾಡುವುದರಿಂದ ವನ್ಯಮೃಗಗಳು ಆಕರ್ಷಿತವಾಗುತ್ತವೆ. ಆದ್ದರಿಂದ ನಿಗದಿತ ಪ್ರದೇಶಗಳಲ್ಲಿ ಮಾತ್ರ ಆಹಾರ ಸೇವಿಸಬೇಕು. ಕಾಡು ಪ್ರಾಣಿಗಳು ಕಾಣಿಸಿಕೊಂಡಲ್ಲಿ ತಕ್ಷಣ ಅರಣ್ಯ ಇಲಾಖೆಗೆ ಮತ್ತು ಸ್ಥಳೀಯ ಪ್ರಾಧಿಕಾರಗಳಿಗೆ ಮಾಹಿತಿ ಒದಗಿಸಬೇಕು. ಅರಣ್ಯ ಇಲಾಖೆ ಹಾಗೂ ಸ್ಥಳೀಯ ಪ್ರಾಧಿಕಾರಿಗಳ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಕೊಪ್ಪಳ ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

Please follow and like us:
error