fbpx

ಆತ್ಮಸ್ಥೈರ್ಯ ಇದ್ದರೆ ಯಾವ ಕಾಯಿಲೆಯೂ ಏನೂ ಮಾಡಲ್ಲ: ಶ್ರೀ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ

ಕೊಪ್ಪಳ : ಬದಕುಬಲ್ಲೆ ಎಂಬ ಅತ್ಮಸ್ಥೈರ್ಯ ಮತ್ತು ಸಂಕಲ್ಪ ಶಕ್ತಿ ಒಂದಿದ್ದರೆ ಮನಷ್ಯರನ್ನು ಯಾವ ಕಾಯಿಲೆಗಳು ಏನು ಮಾಡಲಾರವು. ಆದರೆ ಕಳೆದ ಐದಾರು ತಿಂಗಳಿಂದ ಯಾರನ್ನೂ ಮಾತನಾಡಿಸಿದರೂ ಕೇವಲ ಕೊರೊನಾ ಎಂಬ ಭಯ ಆತಂಕ ಎಲ್ಲರಲ್ಲೂ ಹಾಸುಹೊಕ್ಕಾಗಿದೆ ಎಂದು ಕೊಪ್ಪಳದ ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಹೇಳಿದರು.
ಕೊರೊನಾ ಬಗೆಗಿನ ಭಯ, ಆತಂಕ ದೂರವಾಗಲಿ.. ಮುನ್ನೆಚ್ಚರಿಕೆ ಇರಲಿ ಎಂದರು. ಇನ್ನು ಕೊಪ್ಪಳ ಜಿಲ್ಲೆಯನ್ನು ಕೊರೊನಾ ಮುಕ್ತಗೊಳಿಸುವ ಉದ್ದೇಶಕ್ಕೆ ಜಿಲ್ಲಾಡಳಿತ ನಗರದಲ್ಲಿ ಹಮ್ಮಿಕೊಂಡಿದ್ದ ಕೊರೊನಾ ರ‍್ಯಾಪಿಡ್ ಟೆಸ್ಟ್ ಅಭಿಯಾನಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಸ್ವಾಮೀಜಿ, ಕೊರೊನಾದ ಹೊರತಾಗಿಯೂ ಜೀವನ ಇದೆ ಎಂಬುದು ಎಲ್ಲರೂ ತಿಳಿಯಬೇಕು. ಕೊರೊನಾ ಬಂದ ಮಾತ್ರಕ್ಕೆ ಎಲ್ಲರೂ ಮರಣ ಹೊಂದುವುದಿಲ್ಲ. ಆದರೆ ಕೊರೊನಾದ ಬಗೆಗಿನ ಭಯ ಮತ್ತು ಆತಂಕ ಬಹುತೇಕರನ್ನು ಸಾವಿನ ಮನೆಗೆ ಕಳುಹಿಸುತ್ತಿದೆ. ಮೊದಲಿಗೆ ಆತಂಕದಿಂದ ದೂರವಾಗಬೇಕು, ಪ್ರಾಥಮಿಕ ಲಕ್ಷಣ ಕಂಡು ಬಂದರೆ ಕೂಡಲೇ ವೈದ್ಯಕೀಯ ತಪಾಸಣೆ, ಆರೈಕೆ ಪಡೆಯಬೇಕು ಎಂದರು.ಸೋಂಕಿನ ಲಕ್ಷಣ ಕಂಡು ಬಂದರೆ ಏಳು ದಿನ ಮನೆಯಲ್ಲಿರಬೇಕು. ಇಲ್ಲವಾದಲ್ಲಿ 70 ವರ್ಷದ ಜೀವನ ಹಾಳು ಮಾಡಿಕೊಳ್ಳುವಿರಿ ಎಂದು ಸಲಹೆ ನೀಡಿದ ಸ್ವಾಮೀಜಿ, ಕೊರೊನಾ ಹೋಗಲಾಡಿಸಲು ಕೇವಲ ಇಲಾಖೆ, ಚುನಾಯಿತರು ಶ್ರಮಿಸಿದರೆ ಸಾಲದು. ಪ್ರತಿಯೊಬ್ಬರು ಜವಾಬ್ದಾರಿಯುತವಾಗಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು. ಈ ಸಂದರ್ಭದಲ್ಲಿ ಶಾಸಕರಾದ ಪರಣ್ಣ ಮುನವಳ್ಳಿ, ಜಿಲ್ಲಾಧಿಕಾರಿ ವಿಕಾಶ್ ಕಿಶೋರ್, ಡಿವೈಎಸ್ಪಿ ಆರ್.ಎಸ್ ಉಜ್ಜಿನಕೊಪ್ಪ, ತಾಲೂಕ ಪಂಚಾಯತ್ ಇಒ ಡಾ. ಡಿ. ಮೋಹನ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು..

Please follow and like us:
error
error: Content is protected !!