ಅಶೋಕ ಗಸ್ತಿ ನಿಧನ ಹಿನ್ನಲೆ: ಕೊಪ್ಪಳದಲ್ಲಿ ಬಿಜೆಪಿಯಿಂದ ಶ್ರದ್ಧಾಂಜಲಿ

ಕೊಪ್ಪಳ : ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ರಾಜ್ಯಸಭಾ ಸದಸ್ಯರಾದ ಅಶೋಕ ಗಸ್ತಿ ಅವರ ಅಕಾಲಿಕ ನಿಧನದ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು ಶುಕ್ರವಾರದಂದು ಶ್ರದ್ಧಾಂಜಲಿ ಸಲ್ಲಿಸಿದರು
ಈ ಸಂದರ್ಭದಲ್ಲಿ ಮಾತನಾಡಿದ ಪ್ರಕಾಶ್ ವಕೀಲರು ಮಾತನಾಡಿ ಅಶೋಕ್ ಗಸ್ತಿ ಜೀ ಅವರು ಅತ್ಯಂತ ಸಾಮಾನ್ಯ ಕಾರ್ಯಕರ್ತರು ಅವರು ಸಂಘದ ಜೊತೆ ಅತ್ಯುತಮ ಬಾಂಧವ್ಯ ಹೊಂದಿದ್ದು ಸರಳ ಜೀವಿ ಆಗಿದ್ದರು, ಅವರ ಅಗಲಿಕೆ ತೀವ್ರ ನೋವಾಗಿದೆ ಎಂದರು,
ಗ್ರಾಮೀಣ ಅಧ್ಯಕ್ಷ ಪ್ರದೀಪ್ ಹಿಟ್ನಾಳ್ ಮಾತನಾಡಿ ಅಶೋಕ್ ಜೀ ಅವರು ಸಾಮಾನ್ಯ ಕಾರ್ಯಕರ್ತರು ನಮ್ಮ ಪಕ್ಷ ದುಡಿದವರಿಗೆ ಸ್ಥಾನಮಾನ ಕೊಡುತ್ತೆ ಅನ್ನೋದಕ್ಕೆ ಅಶೋಕ್ ಗಸ್ತಿ ಜೀ ಉದಾಹರಣೆ,ಅವರ ಅಗಲಿಕೆ ನಮ್ಮೆಲರಿಗೂ ತುಂಬಲಾರದ ನಷ್ಟ ಉಂಟಾಗಿದೆ ಅಂದರು
ಈ ಸಂದರ್ಭದಲ್ಲಿ ನಗರ ಘಟಕದ ಅಧ್ಯಕ್ಷ , ಪದಾಧಿಕಾರಿಗಳು ಹಾಗೂ ಗ್ರಾಮೀಣ ಘಟಕ ಪದಾಧಿಕಾರಿಗಳು, ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

Please follow and like us:
error