ಅವಹೇಳನಕಾರಿ ಹೇಳಿಕೆ : ನರಸಿಂಗಾನಂದ ವಿರುದ್ದ ಕ್ರಮಕ್ಕೆ ಆಗ್ರಹ

ಕನ್ನಡನೆಟ್ ನ್ಯೂಸ್ : .ಮಹಮ್ಮದ್( ಸಅ)ರವರ ವಿರುದ್ಧ ಕೆಟ್ಟದಾಗಿ ಮಾತನಾಡಿ ಅವಾಚ್ಯ ಶಬ್ದದಿಂದ ಅವಹೇಳನ ಕಾರಿ ಹೇಳಿಕೆ ನೀಡಿದ

ನರಸಿಂಗಾನಂದ ಸರಸ್ವತಿ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ

ಕೊಪ್ಪಳ ನಗರದಲ್ಲಿ ಮುಸ್ಲಿಂ ಸಮಾಜದ ಪರವಾಗಿ ಅಂಜುಮನ್ ವತಿಯಿಂದ ಜಿಲ್ಲಾಧಿಕಾರಿಗಳ ಮುಖಾಂತರ ರಾಷ್ಟ್ರಪತಿಗಳಿಗೆ ಮನವಿ ಪತ್ರವನ್ನು ಅರ್ಪಿಸಲಾಯಿತು

, ಕೊಪಳ ನಗರದ ಅಂಜುಮನ್ ಕಮಿಟಿಯ ಅಧ್ಯಕ್ಷರು ಹಾಗೂ ಸರ್ವಾ ಸದಸ್ಯರು ಮತ್ತು ಮುಸ್ಲಿಂ ಸಮಾಜದ ಗುರು ಹಿರಿಯರು ಹಾಗೂ ಯುವಕರು ಕೊಟ್ಟ ಮನವಿಯಲ್ಲಿ ಉತ್ತರ ಪ್ರದೇಶ ರಾಜ್ಯದ ನರ್ಸನಹಾರ ಜಿಲ್ಲಾ ಗಾಜಿಯಾಬಾದ್ ದಾಸನಾಮಂದಿರದ ಸ್ವಾಮಿ ಎತಿ ನರಸಿಂಗಾನಂದ ಸರಸ್ವತಿ ಯವರು ಪದೆ ಪದೆ ಮುಸ್ಲಿಂ ಸಮಾಜದ ಬಗ್ಗೆ ಅವಹೇಳನಕಾರಿ ಮತ್ತು ಮುಸ್ಲಿಂರನ್ನು ಮುಗಿಸುವದಾಗಿ ಬೆದರಿಕೆಯ ಹೇಳಿಕೆಗಳನ್ನು ಸಮಾಜಿಕ ಜಾಲಾತಾಣದಲ್ಲಿ ದಿನಾಂಕ : 3/04/2021 ರಂದು ಪ್ರವಾದಿ ಮುಹ್ಮದ್ ( ಸ ) ರ ವಿರುದ್ಧ ಕೆಟ್ಟದಾಗಿ ಮಾತಾನಾಡಿ ಅವಶ್ಯ ಶಬ್ದಗಳಿಂದ ಅವಹೇಳನಕಾರಿ ಹೇಳಿಕೆ ನೀಡಿದ್ದು ಮುಸ್ಲಿಂ ಮರಿಗೆ ನೋವು ಉಂಟು ಮಾಡಿದ್ದಾರೆ . ಪದೆ ಪದೆ ಇಂಥ ಹೇಳಿಕೆ ನೀಡಿ ದೇಶದಲ್ಲಿ ಶಾಂತಿ ಕದಡಿಸಲು ಪ್ರಯತ್ನ ಮಾಡುತ್ತಿದ್ದಾರೆ ಕಾರಣ ಅವರ ವಿರುದ್ದ ಕಾನೂನ ಕ್ರಮ ಜರುಗಿಸಿ ಕಠಿಣ ಷಿಕ್ಷೆ ನೀಡ ಬೇಕೆಂದು ರಾಷ್ಟ್ರಪತಿಗಳಿಗೆ ಮನವಿ ಮಾಡಿದ್ದಾರೆ

ಈ ಸಂದರ್ಭದಲ್ಲಿ ಎಂ ಪಾಷಾ ಕಾಟನ್ ಕೊಪ್ಪಳ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು. ನಗರಸಬಾ ಸದಸ್ಯ ಅಮ್ಜದ್ ಪಟೇಲ್, ಚಿಕನ್ ಪೀರಾ, ಮಾನ್ವಿ ಪಾಷಾ, ಮೆಹಮೂದ ಬಲ್ಲೆ, ಸದ್ದಾಂ ಕಾಜಿ, ಅರಗಂಜಿ, ಮೌಲಾಹುಸೇನ ಜಮೆದಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.

Please follow and like us:
error