ಅಲ್ಲಾಗಿರಿರಾಜ್ ಕವನ ಸಂಕಲನಕ್ಕೆ ಮೋಹನ ಕುರುಡಗಿ ಕಾವ್ಯ ಪ್ರಶಸ್ತಿ

ಗದಗ : ೨೦೨೦ ನೇ ಸಾಲಿನ ‘ ಮೋಹನ ಕುರುಡಗಿ ಕಾವ್ಯ ಪ್ರಶಸ್ತಿಗೆ ಕವಿ ಅಲ್ಲಾಗಿರಿರಾಜ್ ಕನಕಗಿರಿ ಅವರ ‘ ಸರಕಾರ ರೊಕ್ಕ ಮುದ್ರಿಸಬಹುದು ತುಂಡು ರೊಟ್ಟಿಯನ್ನಲ್ಲ ‘ ಕವನ ಸಂಕಲನ ಆಯ್ಕೆಯಾಗಿದೆ . ಪ್ರಶಸ್ತಿ ಆಯ್ಕೆಗೆ ೯೨ ಕವನ ಸಂಕಲನಗಳು ಬಂದಿದ್ದು , ಅಂತಿಮವಾಗಿ ಅಲ್ಲಾಗಿರಿರಾಜರ ಸಂಕಲನ ಆಯ್ಕೆಯಾಯಿತು . ಪ್ರಶಸ್ತಿ ೧೦ ಸಾವಿರ ರೂ . ನಗದು , ಫಲಕ ಹಾಗೂ ಸನ್ಮಾನವನ್ನು ಒಳಗೊಂಡಿದ್ದು , ಮೇ ೧೦ ರಂದು ಗದಗನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ವಿತರಿಸಲಾಗುವುದು .

Please follow and like us:
error