ಅಲ್ಪಸಂಖ್ಯಾತರ ವಿದ್ಯಾರ್ಥಿಗಳ ಪ್ರೋತ್ಸಾಹ ಧನ ಕಡಿತ ಎಸ್ ಎಫ್ಐ ಖಂಡನೆ.

ಕನ್ನಡನೆಟ್ : ಅಲ್ಪಸಂಖ್ಯಾತರ ವಿದ್ಯಾರ್ಥಿಗಳಾದ ಮುಸ್ಲಿಂ ಕ್ರಿಶ್ಚಿಯನ್ ಜೈನ್ ಬೌದ್ಧ ಮತ್ತು ಪಾರ್ಸಿ ವರ್ಗಕ್ಕೆ ಸೇರಿದ ಪಿಎಚ್ಡಿ ಹಾಗೂ ಎಂ.ಫಿಲ್ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರವು ವರ್ಷಕ್ಕೆ 3 ಲಕ್ಷ ಶೈಕ್ಷಣಿಕ ಪ್ರೋತ್ಸಾಹ ಧನ ನೀಡುತ್ತಿತ್ತು. ಈಗ ಕೋರೋನ ಕಾರಣ ನೀಡಿ ಒಂದು ಲಕ್ಷಕ್ಕೆ ಇಳಿಸಿರುವ ವಿದ್ಯಾರ್ಥಿ ವಿರೋಧಿ ನೀತಿಯನ್ನು ಎಸ್ಎಫ್ಐ ಕೊಪ್ಪಳ ಜಿಲ್ಲಾ ಸಮಿತಿ

ಜಿಲ್ಲಾಧ್ಯಕ್ಷ ಸುಭಾನ್ ಸೈಯದ್ ಖಂಡಿಸಿದ್ದಾರೆ

ಬಿಜೆಪಿ ಸರ್ಕಾರ ಬಂದ ನಂತರದಲ್ಲಿ ವಿದ್ಯಾರ್ಥಿಗಳ ಹಕ್ಕುಗಳನ್ನು ದಮನ ಮಾಡುತ್ತಿರುವುದಲ್ಲದೆ ಅವರಿಗೆ ಸಿಗಬೇಕಾದ ಶೈಕ್ಷಣಿಕ ಪ್ರೋತ್ಸಾಹ ಧನವನ್ನು ಕಡಿತಗೊಳಿಸಿದೆ. ಇತ್ತೀಚೆಗೆ ಕೇಂದ್ರ ಸರ್ಕಾರದ ವಿದ್ಯಾರ್ಥಿ ವೇತನ ಕಡಿತ ಮಾಡಿದ್ದರಿಂದಾಗಿ ಶೈಕ್ಷಣಿಕ ಶುಲ್ಕಗಳು ಕಟ್ಟಲು ಸಾಧ್ಯವಾಗದೆ ಆಶ್ವರ್ಯ ಎಂಬ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದರು.

ತಿಂಗಳಿಗೆ 25 ಸಾವಿರದಂತೆ ಪಿಎಚ್ಡಿ ವಿದ್ಯಾರ್ಥಿಗಳಿಗೆ ಮೂರು ವರ್ಷ ಹಾಗೂ ಎಂಫಿಲ್ ಮಾಡುವವರಿಗೆ ಎರಡು ವರ್ಷ ಈ ಫೆಲೋಶಿಪ್ ಸಿಗುತ್ತಿತ್ತು. ಆದರೆ ಕಳೆದ 10 ತಿಂಗಳಿನಿಂದ ಈ ಹಣವನ್ನು ವಿದ್ಯಾರ್ಥಿಗಳಿಗೆ ತಲುಪಿಸಲು ಸರ್ಕಾರ ವಿಫಲವಾಗಿದೆ. ಈಗ ಏಕಾಏಕಿ ವರ್ಷಕ್ಕೆ ಒಂದು ಲಕ್ಷ ಮಾತ್ರ ನೀಡಲಾಗುವುದು ಎಂಬ ಸುತ್ತೋಲೆ ಹೊರಡಿಸಿರುವುದು ವಿದ್ಯಾರ್ಥಿಗಳಿಗೆ ಆತಂಕ ಉಂಟು ಮಾಡಿದೆ.

ಹಾಗೆಯೇ ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಉನ್ನತ ಶಿಕ್ಷಣದಲ್ಲಿ ಬಹಳ ಕಡಿಮೆ ಸಂಖ್ಯೆಯಲ್ಲಿದ್ದಾರೆ ರಾಜಕೀಯವಾಗಿ ಆರ್ಥಿಕವಾಗಿ ಸಾಮಾಜಿಕವಾಗಿ ಅವರನ್ನು ತುಳಿತಕ್ಕೆ ಒಳಪಡಿಸಿದಷ್ಟೇ ಅಲ್ಲದೇ ಈಗ ಶೈಕ್ಷಣಿಕವಾಗಿಯೂ ಅವರನ್ನು ವಂಚಿಸುವ , ದುರ್ಬಲರನ್ನಾಗಿ ಮಾಡುವ ರಾಜ್ಯ ಬಿಜೆಪಿ ಸರ್ಕಾರದ ಈ ನಡೆಯನ್ನು ಭಾರತ ವಿದ್ಯಾರ್ಥಿ ಫೆಡರೇಶನ್ ಎಸ್ಎಫ್ಐ ಕೊಪ್ಪಳ ಜಿಲ್ಲಾ ಸಮಿತಿ ಖಂಡಿಸುತ್ತದೆ.
ಈ ಕೂಡಲೇ ಈ ವಿದ್ಯಾರ್ಥಿ ವಿರೋಧಿ ನೀತಿಗಳನ್ನು ಕೈ ಬಿಡಬೇಕು. ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಪೂರಕವಾದ ಆರ್ಥಿಕ ಯೋಜನೆಗಳನ್ನು ಮುಂದುವರೆಸಬೇಕು ಎಂದು ಎಸ್ಎಫ್ಐ ಕೊಪ್ಪಳ ಜಿಲ್ಲಾ ಸಮಿತಿ ಒತ್ತಾಯಿಸಿದೆ.

Please follow and like us:
error