ಅರ್ಥಪೂರ್ಣವಾಗಿ ಹುಟ್ಟುಹಬ್ಬ ಆಚರಿಸಿದ ಕೆ.ಎಂ.ಸಯ್ಯದ್

ಕೊಪ್ಪಳ : ಉದ್ಯಮಿ, ಸಮಾಜಸೇವಕ, ರಾಜಕಾರಣಿ ಕೆ.ಎಂ.ಸಯ್ಯದ್ ತಮ್ಮ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡರು. ಇಂದು ಅವರ ಅಬ್ದುಲ್ ಕಲಾಂ ಸಹಕಾರಿ ಬ್ಯಾಂಕಿನ ಆವರಣದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಕರೋನಾ ವಾರಿಯರ್ಸ್ ಗಳಿಗೆ ಸನ್ಮಾನಿಸಿ ಚೆಕ್ ನೀಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಿಕೊಂಡರು. ಇಡೀ ವಿಶ್ವವೇ ಕರೋನಾದಿಂದ ಸಂಕಷ್ಟದಲ್ಲಿರುವಾಗ ಈ ತಾಯಂದಿರು ತಮ್ಮ ಜೀವದ ಹಂಗು ತೊರೆದು ಸೇವೆಯಲ್ಲಿ ತೊಡಗಿಕೊಂಡಿರುವುದು ಶ್ಲಾಘನೀಯ ಅವರಿಗೆ ಗೌರವಿಸುವ ಮೂಲಕ ಇಡೀ ಆಶಾ ಕಾರ್ಯಕರ್ತೆ ಯರ ಸೇವೆಯನ್ನು ಸ್ಮರಿಸಿ ಗೌರವಿಸಲಾಗುತ್ತಿದೆ ಎಂದು ಕೆ.ಎಂ.ಸಯ್ಯದ್ ಹೇಳಿದರು. ಈ ಸಂದರ್ಭದಲ್ಲಿ ಬ್ಯಾಂಕಿನ ನಿರ್ದೇಶಕ ರು, ಪದಾಧಿಕಾರಿಗಳು ಸಿಬ್ಬಂದಿಗಳು ಹಾಗೂ ಅಭಿಮಾನಿಗಳು ಉಪಸ್ಥಿತರಿದ್ದರು.

Please follow and like us:
error